BMRCL: ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ರಾತ್ರಿ 9.30ರಿಂದ ಸಂಚಾರ ಸ್ಥಗಿತ

By Govindaraj S  |  First Published May 28, 2022, 1:01 AM IST

ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡೋದಕ್ಕು ಮುನ್ನ ಈ ಸುದ್ದಿ ನೋಡಿ. ನಾಳೆ ಶನಿವಾರ ನಮ್ಮ ಮೆಟ್ರೋ ಸಂಚಾರದಲ್ಲಿ ಕೊಂಚ ವ್ಯತ್ಯಯವಾಗಲಿದೆ. ಎಂ.ಜಿ ರಸ್ತೆ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ನಡೆಯಲಿದ್ದು, ಮೆಟ್ರೋ ಸೇವೆ ಸ್ಥಗಿತವಾಗಲಿದೆ.


ಬೆಂಗಳೂರು (ಮೇ.28): ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡೋದಕ್ಕು ಮುನ್ನ ಈ ಸುದ್ದಿ ನೋಡಿ. ನಾಳೆ ಶನಿವಾರ ನಮ್ಮ ಮೆಟ್ರೋ ಸಂಚಾರದಲ್ಲಿ ಕೊಂಚ ವ್ಯತ್ಯಯವಾಗಲಿದೆ. ಎಂ.ಜಿ ರಸ್ತೆ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ನಡೆಯಲಿದ್ದು, ಮೆಟ್ರೋ ಸೇವೆ ಸ್ಥಗಿತವಾಗಲಿದೆ. ನೇರಳೆ ಮಾರ್ಗದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ನಾಳೆ ರಾತ್ರಿ 9.30 ಸ್ಥಗಿತಗೊಳಿಸಲಾಗಿದೆ.  ಈ ವೇಳೆ ಮೆಟ್ರೋ ಸೇವೆ ಎಂ.ಜಿ ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣದ ನಡುವೆ ಮಾತ್ರ ಲಭ್ಯವಿರಲಿದೆ. ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಕೊನೆಯ ರೈಲು 8.40 ಕ್ಕೆ ಹೊರಡಲಿದೆ. 

ಇನ್ನು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 9.10ಕ್ಕೆ ಕೊನೆಯ ಮೆಟ್ರೋ ಹೊರಡಲಿದೆ.  ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ಕೊನೆಯ ರೈಲು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ರಾತ್ರಿ 9.10ಕ್ಕೆ ಹೊರಡಲಿದೆ. ಈ ಅವಧಿಯ ನಂತರ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲು ಚಲಿಸಲಿದೆ.  ಇನ್ನು ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ ಮತ್ತು ವೇಳಾಪಟ್ಟಿಯಂತೆ ರೈಲು ಸೇವೆ ಲಭ್ಯವಿರುತ್ತದೆ. ಭಾನುವಾರದಂದು ಎಂದಿನಂತೆ ಮೆಟ್ರೋ ಸೇವೆಯು ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಚಾರವಿರಲಿದೆ ಎಂದು ಬಿಎಂಆರ್ ಸಿಎಲ್ ನಿಂದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

Tap to resize

Latest Videos

Namma Metro Passes ಅಧಿಕಾರಿಗಳ ದರ್ಬಾರ್, ಪ್ರಯಾಣಿಕರಿಂದ ಬೀಕಾಬಿಟ್ಟಿ ವಸೂಲಿ!

ಒಂದೇ ದಿನ 27 ಮೀಟರ್‌ ಮೆಟ್ರೋ ಸುರಂಗ ಕೊರೆದು ಊರ್ಜಾ ದಾಖಲೆ: ನಮ್ಮ ಮೆಟ್ರೋದ ಕಾಳೇನ ಅಗ್ರಹಾರ-ನಾಗವಾರ ಮಾರ್ಗದಲ್ಲಿ (ಪಿಂಕ್‌ ಲೈನ್‌) ಬರುವ ಕಂಟೋನ್ಮೆಂಟ್‌ ಮತ್ತು ಪಾಟರಿ ಮಾರ್ಗದಲ್ಲಿ ಸುರಂಗ ಕೊರೆಯುವ ಯಂತ್ರ ಊರ್ಜಾ ಒಂದೇ ದಿನ 27 ಮೀಟರ್‌ ಸುರಂಗ ಕೊರೆದು ದಾಖಲೆ ನಿರ್ಮಿಸಿದೆ ಎಂದು ಬೆಂಗಳೂರು ಮೆಟ್ರೋ ನಿಗಮ ತಿಳಿಸಿದೆ. ಕಲ್ಲಿನ ಭೂ ರಚನೆಗಳಿದ್ದರೆ ದಿನಕ್ಕೆ ಮೂರರಿಂದ ಐದು ಮೀಟರ್‌ ಮಾತ್ರ ಸುರಂಗ ಕೊರೆಯಲು ಸಾಧ್ಯವಾಗುತ್ತದೆ. ಸುರಂಗ ಕೊರೆಯುವ ಯಂತ್ರ ಮಣ್ಣಿನ ಪದರ ಸಿಕ್ಕರೆ 10ರಿಂದ 12 ಮೀಟರ್‌ ಸುರಂಗವನ್ನು ಒಂದೇ ದಿನದಲ್ಲಿ ಕೊರೆಯುತ್ತದೆ.

ಮೆಟ್ರೋ 2: 1342 ಮರಗಳ ಕತ್ತರಿಸಲು ಹೈಕೋರ್ಟ್‌ ಅಸ್ತು

ಆದರೆ, ಹಂತ ಎರಡರ ಯೋಜನೆಯಲ್ಲಿ ಮೊದಲ ಬಾರಿಗೆ ಇಷ್ಟೊಂದು ಉದ್ದನೆಯ ಸುರಂಗ ಕೊರೆಯಲು ಸಾಧ್ಯವಾಗಿದೆ. ಏಪ್ರಿಲ್‌ 25ರಂದು ಈ ಸಾಧನೆ ಮಾಡಿದ್ದೇವೆ ಎಂದು ಮೆಟ್ರೋ ನಿಗಮ ಹೇಳಿದೆ. ಈ ವಿಭಾಗದ ಮುಖ್ಯ ಇಂಜಿನಿಯರ್‌ ಆಗಿರುವ ದಯಾನಂದ ಶೆಟ್ಟಿ, ಬೆಂಗಳೂರಿನ ಮಣ್ಣಿನ ಸಂರಚನೆ ಸಂಕೀರ್ಣವಾದದ್ದು. ಕಲ್ಲು ಮಿಶ್ರಿತ ಮಣ್ಣು ಹೆಚ್ಚಿದೆ. ಸಾಮಾನ್ಯವಾಗಿ ಪ್ರತಿದಿನ ಒಂದೇ ವೇಗದಲ್ಲಿ ಕೆಲಸ ಮಾಡಲು ಬಯಸುತ್ತೇವೆ. ಆದರೆ ಆಗಾಗ, ಅಲ್ಲಲ್ಲಿ ಕಲ್ಲು ಸಿಗುವುದರಿಂದ ನಮ್ಮ ವೇಗಕ್ಕೆ ಕಡಿವಾಣ ಬೀಳುತ್ತದೆ. ಆದರೆ, ಈ ಬಾರಿ 27 ಮೀಟರ್‌ ಮಾರ್ಗದಲ್ಲಿ ಯಾವುದೇ ಕಠಿಣ ಸನ್ನಿವೇಶಗಳು ಎದುರಾಗದೇ ಇದ್ದ ಕಾರಣ ಇಷ್ಟೊಂದು ವೇಗವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ.

click me!