
ಬೆಂಗಳೂರು(ನ.17): ನ. 21ರಂದು(ಸೋಮವಾರ) ನಗರದ ವಿವಿಧಡೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಅಂತ ಜಲ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾವೇರಿ 4ನೇ ಹಂತದ 1ನೇ ಘಟ್ಟದಡಿಯಲ್ಲಿ, ಕೆಆರ್ ಪುರಂನಿಂದ ರೇಷ್ಮೆ ಸಂಸ್ಥೆಯ ಹೊರವರ್ತುಲ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ವಿವಿಧ ಕಾಮಗಾರಿ ಇರುವ ಹಿನ್ನೆಲೆಯಲ್ಲಿ ಒಂದು ದಿನ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ. ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಅಂತ ತಿಳಿಸಿದೆ.
Kaveri Water: ಹಳ್ಳಿಗಳಿಗೆ ಕಾವೇರಿ ನೀರೇ ಬೇಡವಂತೆ..!
ಎಲ್ಲೆಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ?
ಜಂಬೂಸವಾರಿ ದಿಣ್ಣೆ, ಪುಟ್ಟೇನಹಳ್ಳಿ, ಕೋಣನಕುಂಟೆ ಕ್ರಾಸ್, ಜರಗನಹಳ್ಳಿ, ಜೆ.ಪಿ.ನಗರ 4,5 6 ಮತ್ತು 7ನೇ ಹಂತ, ಬನ್ನೇರುಘಟ್ಟ ಮುಖ್ಯ ರಸ್ತೆ, ಜಯದೇವ ಆಸ್ಪತ್ರೆ, 4ನೇ 'ಟಿ' ಬ್ಲಾಕ್ ಪಾರ್ಟ್ 'ಎ', ತಿಲಕ್ ನಗರ, ವಿಜಯ ಬ್ಯಾಂಕ್ ಲೇಔಟ್, ಬಿಳೇಕಹಳ್ಳಿ, ಹೆಚ್.ಎಸ್.ಆರ್. ಲೇಔಟ್ 1 ರಿಂದ 7 ಸೆಕ್ಟರ್, ಮಂಗಮ್ಮನಪಾಳ್ಯ, ಹೊಸಪಾಳ್ಯ, ಎಲೆಕ್ಟ್ರಾನಿಕ್ ಸಿಟಿ 1 ಮತ್ತು 2ನೇ ಹಂತ, 3ನೇ ಬ್ಲಾಕ್ ಕೋರಮಂಗಲ, ಮೈಕೋ ಲೇಔಟ್, ಎನ್.ಎಸ್.ಪಾಳ್ಯ ಸೇರಿದಂತೆ ಸುತ್ತಮುತ್ತಲಿನ 100ಕ್ಕೂ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ ಅಂತ ಜಲ ಮಂಡಳಿಯಿಂದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.