Chikkodi: ಕೋರ್ಟ್ ಆದೇಶ ಮಾಡಿದರೂ ಪರಿಹಾರ ನೀಡದ ಅಧಿಕಾರಿಗಳ ವಾಹನಗಳು ಸೀಜ್!

By Suvarna News  |  First Published Nov 17, 2022, 5:04 PM IST

ರೈತನ ಫಲವತ್ತಾದ 35 ಗುಂಟೆ ಜಾಗವನ್ನ ಕಂದಾಯ ಹಾಗೂ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು ಭೂಮಿ ಪಡೆದು   ರೈತನಿಗೆ ನೀಡಬೇಕಾದ ಹಣ ನೀಡದೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳಿಗೆ ಕೋರ್ಟ್ ಬಿಸಿ ಮುಟ್ಟಿಸಿದ್ದು ನಡು ರಸ್ತೆಯಲ್ಲಿಯೇ ಇಬ್ಬರು ಅಧಿಕಾರಿಗಳ ವಾಹನ ಸೀಜ್ ಮಾಡಿದೆ.


ಚಿಕ್ಕೋಡಿ (ನ.17): ಅಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಅಂತ ರೈತನ ಫಲವತ್ತಾದ 35 ಗುಂಟೆ ಜಾಗವನ್ನ ಕಂದಾಯ ಹಾಗೂ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು ಭೂಮಿ ಪಡೆದುಕೊಂಡಿದ್ದರು. ಭೂಮಿ ಪಡೆದು ವರ್ಷ ಕಳೆದರೂ ಸಹ ಆ ರೈತನಿಗೆ ನೀಡಬೇಕಾದ ಹಣ ನೀಡದೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳಿಗೆ ಕೋರ್ಟ್ ಬಿಸಿ ಮುಟ್ಟಿಸಿದ್ದು ನಡು ರಸ್ತೆಯಲ್ಲಿಯೇ ಇಬ್ಬರು ಅಧಿಕಾರಿಗಳ ವಾಹನ ಸೀಜ್ ಮಾಡಿದೆ.  ಬೆಳಗಾವಿ ‌ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗೂರು ಗ್ರಾಮದಲ್ಲಿನ ಬುದ್ದಿರಾಜ್ ಪಾಟೀಲ್ ಎನ್ನುವ ರೈತನ 35 ಗುಂಟೆ ಜಮೀನನ್ನು ರಸ್ತೆ ನಿರ್ಮಾಣ ಮಾಡೋಕೆ ಅಂತ ಕಂದಾಯ ಇಲಾಖೆ ಹಾಗೂ ಲೋಕೊಪಯೋಗಿ ಇಲಾಖೆ ಪಡೆದುಕೊಂಡಿತ್ತು. ಭೂಮಿ ಪಡೆದುಕೊಂಡ ಮೇಲೆ ಅದರ ಪರಿಹಾರವನ್ನು ರೈತನಿಗೆ ಇಲಾಖೆಗಳು ನ್ಯಾಯಯುತವಾಗಿ ನೀಡಬೇಕಿತ್ತು ಆದರೆ ಕೋರ್ಟ್ ಆದೇಶ ಮಾಡಿದರೂ ಸಹ ಪರಿಹಾರ ನೀಡಿದ ಅಧಿಕಾರಿಗಳಿಗೆ ಇಂದು ಕೋರ್ಟ್ ಶಾಕ್ ನೀಡಿದ್ದು ಕಚೇರಿ ಹಾಗೂ ವಾಹನ ಪಿಠೋಪಕರಣ ಸಮೇತ ಸೀಜ್ ‌ಮಾಡಲು ಆದೇಶ ಮಾಡಿದೆ.

ಚಿಕ್ಕೋಡಿ ಉಪವಿಭಾಗದ ಹಲವು ಸರಕಾರಿ ಕಛೇರಿಯ ವಾಹನಗಳಿಗೆ ನೋ ಇನ್ಸೊರೆನ್ಸ್

Tap to resize

Latest Videos

ರೈತ ಬುದ್ದಿರಾಜ್ ಪಾಟೀಲ್ ರಿಂದ ಭೂಮಿ ಪಡೆದ ಇಲಾಖೆಗಳು ಆ ಭೂಮಿಗೆ ಅತ್ಯಂತ ಕಡಿಮೆ ಬೆಲೆ ನಿಗಧಿ ಮಾಡಿ ಖರೀದಿಗೆ ಮುಂದಾಗಿದ್ದವು. ಬಳಿಕ ಬುದ್ಧಿರಾಜ್ ಪಾಟೀಲ್ ಇದನ್ನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು.. ಅರ್ಜಿ ಪರಿಶೀಲಿಸಿದ ಕೋರ್ಟ್ ಬುದ್ದಿರಾಜ್ ಪಾಟೀಲ್ ಅವರಿಗೆ  ಸರ್ಕಾರದಿಂದ ಬರೊಬ್ಬರಿ 11,70,757 ರೂಪಾಯಿ ನೀಡಬೇಕು ಎಂದು ಆದೇಶ ಹೊರಡಿಸಿತ್ತು. ಈ ಆದೇಶ ಜಾರಿಯಾಗಿ ಒಂದು ವರ್ಷ ಕಳೆದರೂ ಸಹ ದಪ್ಪ ಚರ್ಮದ ಅಧಿಕಾರಿಗಳು ಸುಮ್ಮನೆ ಇದ್ದರು. ಇದನ್ನು ಪ್ರಶ್ನಿಸಿ ಬುದ್ದಿರಾಜ್ ಪಾಟೀಲ್ ಮತ್ತೆ ಕೋರ್ಟ್ ‌ಮೊರೆ ಹೋದಾಗ ಚಿಕ್ಕೋಡಿಯ ಹಿರಿಯ ದಿನಾಣಿ ನ್ಯಾಯಾಲಯ ಎರಡೂ ಇಲಾಖೆಯ ಪಿಠೋಪಕರಣ ಸೇರಿದಂತೆ ಕಾರುಗಳನ್ನು ಸೀಜ್ ಮಾಡಲು ಆದೇಶ ಮಾಡಿದ್ದು ಇದರಂತೆ ಕೋರ್ಟ್ ಸಿಬ್ಬಂದಿ ಚಿಕ್ಕೋಡಿ ಎಸಿ ಮಹಾದೇವರಾವ್  ಗಿತ್ತೆ ಕಾರು ಹಾಗೂ ‌ಲೋಕೊಪಯೋಗಿ ಇಲಾಖೆ ಇಂಜೀನಿಯರ್ ಗಣೇಶ ಬೇಡಿಕಿಹಾಳ ಅವರ  ಕಾರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯಲ್ಲಿ ಅತಿಕ್ರಮಣ ತೆರವು ಹೈಡ್ರಾಮಾ, ದಾಖಲೆ ಕೇಳಿ ರಸ್ತೆಯಲ್ಲೇ ಕುಳಿತ ಶಾಸಕರು!

ಇಬ್ಬರು ಅಧಿಕಾರಿಗಳ‌ ಕಾರುಗಳನ್ನು ಸೀಜ್ ಮಾಡಿರುವ ಕೋರ್ಟ್ ಸಿಬ್ಬಂಧಿಗಳು ಉಪವಿಭಾಗಾಧಿಕಾರಿಗಳ‌ ಕಚೇರಿಯನ್ನು ಸೀಜ್ ಮಾಡಲು ಹೋದಾಗ ಚಿಕ್ಕೋಡಿ ಎಸಿ ಮಹಾದೇವ ಗಿತ್ತೆ ಅವರು ಮನವಿ ಮಾಡಿ ಸಂಜೆಯೊಳಗೆ  ರೈತನಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರಿಂದ ಕಚೇರಿ ಸೀಜ್ ಮಾಡದೆ ಕೋರ್ಟ್ ಸಿಬ್ಬಂಧಿ ಹಾಗೆಯೇ ತೆರಳಿದ್ದಾರೆ..

click me!