ವರಮಹಾಲಕ್ಷ್ಮಿ ಹಬ್ಬ, ಮಾರ್ಕೆಟಲ್ಲಿ ಜನವೋ ಜನ: ಹೂ-ಹಣ್ಣು ಬೆಲೆ ಏರಿಕೆ

Published : Aug 25, 2023, 07:02 AM IST
ವರಮಹಾಲಕ್ಷ್ಮಿ ಹಬ್ಬ, ಮಾರ್ಕೆಟಲ್ಲಿ ಜನವೋ ಜನ: ಹೂ-ಹಣ್ಣು ಬೆಲೆ ಏರಿಕೆ

ಸಾರಾಂಶ

ಶುಕ್ರವಾರದ ವರಮಹಾಲಕ್ಷ್ಮಿ ಪೂಜೆಗಾಗಿ ನಗರ ಸಜ್ಜಾಗಿದ್ದು, ಹಬ್ಬದ ಮುನ್ನಾ ದಿನವಾದ ಗುರುವಾರ ನಗರದ ಮಾರುಕಟ್ಟೆಗಳಿಗೆ ಜನರು ಭಾರೀ ಪ್ರಮಾಣದಲ್ಲಿ ಆಗಮಿಸಿ ಹೂ ಹಣ್ಣು, ಪೂಜಾ ಪರಿಕರಗಳ ಖರೀದಿಸಿದರು. 

ಬೆಂಗಳೂರು (ಆ.25): ಶುಕ್ರವಾರದ ವರಮಹಾಲಕ್ಷ್ಮಿ ಪೂಜೆಗಾಗಿ ನಗರ ಸಜ್ಜಾಗಿದ್ದು, ಹಬ್ಬದ ಮುನ್ನಾ ದಿನವಾದ ಗುರುವಾರ ನಗರದ ಮಾರುಕಟ್ಟೆಗಳಿಗೆ ಜನರು ಭಾರೀ ಪ್ರಮಾಣದಲ್ಲಿ ಆಗಮಿಸಿ ಹೂ ಹಣ್ಣು, ಪೂಜಾ ಪರಿಕರಗಳ ಖರೀದಿಸಿದರು. ಹಬ್ಬದ ಸಂಭ್ರಮದಲ್ಲಿದ್ದವರಿಗೆ ಬೆಲೆಯೇರಿಕೆ ಬಿಸಿ ತಟ್ಟಿದೆ. ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹೂಗಳ ದರ ಹೆಚ್ಚಾಗಿದ್ದರಿಂದ ಎಲ್ಲೆಡೆ ಗ್ರಾಹಕರು ಚೌಕಾಸಿಯಲ್ಲಿ ತೊಡಗಿದ್ದರು. ಬುಧವಾರಕ್ಕಿಂತಲೂ ಗುರುವಾರ ಹಣ್ಣು, ಪೂಜಾ ಪರಿಕರಗಳ ಬೆಲೆ .10-20 ದುಬಾರಿಯಾಗಿತ್ತು.

ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಗ್ರಾಹಕರು ಭರ್ಜರಿ ಖರೀದಿ ಮಾಡಿದ್ದಾರೆ. ಕಾಲಿಡಲು ಆಗದಷ್ಟು ಜನರಿಂದ ಮಾರುಕಟ್ಟೆ ಪ್ರದೇಶ ತುಂಬಿಕೊಂಡಿತ್ತು. ಇಡೀ ಕೆ.ಆರ್‌.ಮಾರುಕಟ್ಟೆಸಮೀಪದ ಸುತ್ತ ಹೂವು, ಹಣ್ಣು, ಮಾವಿನ ಎಲೆ, ಬಾಳೆ ದಿಂಡುಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಇದೇ ರೀತಿ ಮಲ್ಲೇಶ್ವರ, ಯಶವಂತಪುರ ಮಾರುಕಟ್ಟೆ, ದಾಸರಹಳ್ಳಿ, ಮಡಿವಾಳ, ವಿಜಯನಗರ, ಜಯನಗರ, ಗಾಂಧಿ ಬಜಾರ್‌ ಸೇರಿ ಎಲ್ಲ ಮಾರುಕಟ್ಟೆಗಳಲ್ಲೂ ಹೂವು-ಹಣ್ಣು, ಮಾವಿನ ಎಲೆ, ಬಾಳೆ ದಿಂಡು, ಲಕ್ಷ್ಮಿ ಮೂರ್ತಿ, ಅಲಂಕಾರಿಕ ವಸ್ತುಗಳು ಮಾರಾಟವಾದವು.

ಕಾಂಗ್ರೆಸ್‌ಗೆ ಎಷ್ಟು ಜನರ ಬರ್ತಾರೆಂದು ಕಾಲವೇ ಹೇಳುತ್ತದೆ: ಡಿಕೆಶಿ

ಲಕ್ಷ್ಮಿ ಮಂಟಪದ ಅಲಂಕಾರಕ್ಕಾಗಿ, ವಿದ್ಯುತ್‌ ಬಲ್ಬುಗಳ ಸರ, ಬಣ್ಣದ ಕಾಗದಗಳು, ಬಲೂನು, ಕೃತಕ ಹಾರ, ಹೂವುಗಳನ್ನು ಖರೀದಿ ಮಾಡಿದರು. ಲಕ್ಷ್ಮಿ ಮೂರ್ತಿಗಳು 2500 -5 ಸಾವಿರವರೆಗೆ ಮಾರಾಟವಾದವು. ಮಾರುಕಟ್ಟೆಗೆ ತಮಿಳುನಾಡು ಸೇರಿ ಸುತ್ತಮುತ್ತಲಿಂದ ಹೂವುಗಳ ವ್ಯಾಪಾರಸ್ಥರು ಲಗ್ಗೆ ಇಟ್ಟಿದ್ದರು. ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ತುಮಕೂರಿನಿಂದಲೂ ವ್ಯಾಪಾರಿಗಳು ಬಂದು ಭರ್ಜರಿ ವ್ಯಾಪಾರ ಮಾಡಿದ್ದಾರೆ. ಜನತೆ ಲಕ್ಷ್ಮಿಗೆ ಪ್ರಿಯವಾದ ತಾವರೆ, ಕೇದಗೆ, ಮಲ್ಲಿಗೆ ಹೂವು, ಮಳ್ಳೆ ಹೂವು, ಸುಗಂಧರಾಜ ಸೇರಿ ನಾನಾ ಸುಗಂಧಿತ ಹೂವನ್ನು ಖರೀದಿ ಜೋರಾಗಿತ್ತು. 

ಬಾಳೆ ಹಣ್ಣು, ಸೀಬೆ, ಸೇಬು, ಸೀತಾಫಲ, ಅನಾನಸ್‌, ದ್ರಾಕ್ಷಿ ಇತ್ಯಾದಿ ಹಣ್ಣುಗಳ ದರ ಹೆಚ್ಚಿದ್ದರೂ ಖರೀದಿ ಮಾತ್ರ ಕಡಿಮೆಯಾಗಿರಲಿಲ್ಲ. ಗ್ರಾಹಕ ಸೋಮಶೇಖರ್‌ ರೆಡ್ಡಿ ಮಾತನಾಡಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಎಲ್ಲದರ ಬೆಲೆಯೂ ಶೇ.5ರಿಂದ ಶೇ.10ರಷ್ಟುಹೆಚ್ಚಾಗಿದೆ. ಹಬ್ಬ ಮಾಡಬೇಕು, ಸಂಪ್ರದಾಯ ಬಿಡಬಾರದು ಎಂಬ ದೃಷ್ಟಿಯಿಂದ ಮಾಡುತ್ತಿದ್ದೇವಷ್ಟೇ. ಆದರೆ ಹಿಂದಿನ ವರ್ಷದಷ್ಟುಪ್ರಮಾಣದಲ್ಲಿ ಹೂ ಹಣ್ಣು ಖರೀದಿ ಮಾಡಿಲ್ಲ ಎಂದರು. ಸಗಟು ದರ ಹೆಚ್ಚಳವಾಗಿರುವುದು, ಸಾಗಾಟ ದರ ಏರಿಕೆ ಕಾರಣದಿಂದ ನಾವು ಬೆಲೆ ಹೆಚ್ಚಿಸುವುದು ಅನಿವಾರ್ಯ. ಇಲ್ಲದಿದ್ದರೆ ಬಂದ ಖರ್ಚೂ ನಮಗೆ ದಕ್ಕುವುದಿಲ್ಲ ಎಂದು ವ್ಯಾಪಾರಸ್ಥ ಮಣಿ ಪ್ರತಿಕ್ರಿಯಿಸಿದರು.

ಹೂವಿನ ದರ
ಕನಕಾಂಬರ- ಕೇಜಿಗೆ .1,200 ರಿಂದ .1,500
ಮಲ್ಲಿಗೆ ಕೇಜಿಗೆ .600 ರಿಂದ .800
ಗುಲಾಬಿ- .150 ರಿಂದ .200
ಚಿಕ್ಕ ಹೂವಿನ ಹಾರ- .150ರಿಂದ .200
ದೊಡ್ಡ ಹೂವಿನ ಹಾರ- .300 ರಿಂದ .500
ಸೇವಂತಿಗೆ- .250 ರಿಂದ .300
ತಾವರೆ ಹೂ-ಜೋಡಿ- .50 ರಿಂದ .100

ಹಣ್ಣಿನ ಬೆಲೆ
ಏಲಕ್ಕಿ ಬಾಳೆ- .120 ರಿಂದ .140
ಸೀಬೆ-.120
ಸೇಬು- .200-.300
ಕಿತ್ತಳೆ- .150 ರಿಂದ .200
ದ್ರಾಕ್ಷಿ- .180- .200
ಪೈನಾಪಲ್‌- .80-.100
ದಾಳಿಂಬೆ- .150-.200

ಚಂದ್ರನ ಮೇಲೆ ಭಾರತದ ನಡಿಗೆ ಆರಂಭ: ರೋವರ್‌ ಅಧ್ಯಯನ ಶುರು

ಪೂಜಾ ಪರಿಕರ
-ಬಾಳೆ ಕಂಬ -ಜೋಡಿಗೆ- .50
-ಮಾವಿನ ತೋರಣ- .20
-ವೀಳ್ಯದೆಲೆ- 100ಕ್ಕೆ .150
-ತೆಂಗಿನಕಾಯಿ-5ಕ್ಕೆ .100

PREV
Read more Articles on
click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!