ಶಿವಮೊಗ್ಗ: ವರದಾ, ದಂಡಾವತಿಯಲ್ಲಿ ಪ್ರವಾಹ

By Kannadaprabha NewsFirst Published Aug 6, 2019, 12:44 PM IST
Highlights

ಶಿವಮೊಗ್ಗದ ವರದಾನದಿ, ದಂಡಾವತಿ ನದಿ ಪ್ರವಾಹ ಏರಲಾರಂಭಿಸಿದ್ದು, ಇದೇ ಮಳೆ ಮುಂದುವರಿದರೆ ಮಂಗಳವಾರ ಸಂಜೆಯ ವೇಳೆಗೆ ನದಿಗಳು ಅಪಾಯದ ಮಟ್ಟಮೀರುವ ಸಾಧ್ಯತೆ ಇದೆ. ಕಸಬಾ, ಚಂದ್ರಗುತ್ತಿ ಭಾಗದ ಬಹುತೇಕ ಕೆರೆಗಳು ತುಂಬಿದ್ದು, ಕೋಡಿಮೂಲಕ ನೀರು ಹರಿಯಲಾರಂಭಿಸಿರುವ ಪರಿಣಾಮ ಈ ಭಾಗದ ಅನೇಕ ಹಳ್ಳಗಳು ತುಂಬಿಹರಿಯುತ್ತಿವೆ.

ಶಿವಮೊಗ್ಗ(ಆ.06): ಸೊರಬ ತಾಲೂಕಿನಾದ್ಯಂತ ಉತ್ತಮ ಮಳೆ ಬೀಳುತ್ತಿದ್ದು, ಬೆಟ್ಟ-ಕಾಡು ಪ್ರದೇಶ ಚಂದ್ರಗುತ್ತಿಯಲ್ಲಿ ಹೆಚ್ಚುಮಳೆಯಾಗಿದೆ. ಭಾನುವಾರ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಬೀಳುತ್ತಿದ್ದು, ರಾತ್ರಿಯಿಡಿ ಮುಂದುವರಿದು ಸೋಮವಾರವೂ ಧಾರಾಕಾರವಾಗಿ ಸುರಿದಿದೆ.

ವರದಾನದಿ, ದಂಡಾವತಿ ನದಿ ಪ್ರವಾಹ ಏರಲಾರಂಭಿಸಿದ್ದು, ಇದೇ ಮಳೆ ಮುಂದುವರಿದರೆ ಮಂಗಳವಾರ ಸಂಜೆಯ ವೇಳೆಗೆ ನದಿಗಳು ಅಪಾಯದ ಮಟ್ಟಮೀರುವ ಸಾಧ್ಯತೆ ಇದೆ. ಕಸಬಾ, ಚಂದ್ರಗುತ್ತಿ ಭಾಗದ ಬಹುತೇಕ ಕೆರೆಗಳು ತುಂಬಿದ್ದು, ಕೋಡಿಮೂಲಕ ನೀರು ಹರಿಯಲಾರಂಭಿಸಿರುವ ಪರಿಣಾಮ ಈ ಭಾಗದ ಅನೇಕ ಹಳ್ಳಗಳು ತುಂಬಿಹರಿಯುತ್ತಿವೆ.

ಉತ್ತರ ಕರ್ನಾಟಕದಲ್ಲಿ ಮಹಾಮಳೆ: ನೆರೆ ಪ್ರದೇಶಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ

ಮಳೆಯ ಜೊತೆಗೆ ಗಾಳಿಯ ರಭಸವೂ ಹೆಚ್ಚಿದ್ದು, ಸಿದ್ದಾಪುರ ಕಡಸೂರು ಮಾರ್ಗ ಹಾಗೂ ಹುಣಸವಳ್ಳಿ ಹಿರೇಕೆರೂರು ಮಾರ್ಗದ ಎಣ್ಣೆಕೊಪ್ಪದ ಬಳಿ ಮರ ಉರಳಿ ರಸ್ತೆ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಗಿತ್ತು.

ಮಳೆ ಉತ್ತಮವಾಗಿ ಬೀಳುತ್ತಿರುವುದರಿಂದ ಬತ್ತದ ನಾಟಿ ಕೆಲಸ ಭರದಿಂದ ಸಾಗುತ್ತಿದ್ದು, ಅಧಿಕ ಮಳೆ ಬಿದ್ದಿರುವುದರಿಂದ ನಾಟಿ ಕಾರ್ಯಕ್ಕೆ ಅಲ್ಲಲ್ಲಿ ಅಡಚಣೆಯುಂಟಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!