24ಗಂಟೆಯಲ್ಲಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

By Kannadaprabha NewsFirst Published Aug 6, 2019, 12:23 PM IST
Highlights

ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದಲ್ಲಿ ನಡೆದಿದ್ದ ವಿದ್ಯಾರ್ಥಿನಿಯೋರ್ವಳ ಕೊಲೆ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸುವಲ್ಲಿ ಹೊಸಮನೆ ಶಿವಾಜಿ ಸರ್ಕಲ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂ​ಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

ಶಿವಮೊಗ್ಗ(ಆ.06): ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದಲ್ಲಿ ನಡೆದಿದ್ದ ವಿದ್ಯಾರ್ಥಿನಿಯೋರ್ವಳ ಕೊಲೆ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸುವಲ್ಲಿ ಹೊಸಮನೆ ಶಿವಾಜಿ ಸರ್ಕಲ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂ​ಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸ್‌ ಉಪಾ​ಧೀಕ್ಷಕ ಓಂಕಾರನಾಯ್ಕ, ಕಾಳಿಂಗನಹಳ್ಳಿ ಗ್ರಾಮದ ನಿವಾಸಿ ಪೇಂಟಿಂಗ್‌ ಕೆಲಸ ಮಾಡುವ ಶಿವಕುಮಾರ್‌ ಅಲಿಯಾಸ್‌ ಶಿವು ಅಲಿಯಾಸ್‌ ಮರ್ಡರ್‌ ಶಿವು (21) ಎಂಬಾತನನ್ನು ಬಂಧಿ​ಸಲಾಗಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಬಿ.ಆರ್‌. ಇಂದಿರಾ(16) ಈತನನ್ನು ಪ್ರೀತಿಸಲು ಒಪ್ಪದ ಕಾರಣ ಕೊಲೆ ಮಾಡಿರುವುದಾಗಿ ಶಿವಕುಮಾರ್‌ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.

ಅನಾಥ ಶವಕ್ಕೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್ರು..!

ಪ್ರಕರಣದ ತನಿಖೆಗಾಗಿ ಜಿಲ್ಲಾ ರಕ್ಷಣಾ​ಧಿಕಾರಿ ಎಂ.ಎನ್‌. ಶಾಂತರಾಜ್‌, ಹೆಚ್ಚುವರಿ ರಕ್ಷಣಾ​ಧಿಕಾರಿ ಎಚ್‌.ಟಿ. ಶೇಖರ್‌, ಪೊಲೀಸ್‌ ಉಪಾಧೀಕ್ಷಕ ಓಂಕಾರ ನಾಯ್ಕ ಮಾರ್ಗದರ್ಶನದಲ್ಲಿ ನಗರ ಪೊಲೀಸ್‌ ವೃತ್ತ ನಿರೀಕ್ಷಕ ನಂಜಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಿಬ್ಬಂದಿ ಕಲೀಂವುಲ್ಲಾ ಖಾನ್‌, ವೆಂಕಟೇಶ್‌, ಕುಮಾರ್‌, ಅನಿಲ್‌ಕುಮಾರ್‌, ವಿಶಾಲಾಕ್ಷಿ ಮತ್ತು ಇನ್ನಿತರರು ಪಾಲ್ಗೊಂಡಿದ್ದರು. ಪ್ರಕರಣವನ್ನು ಭೇದಿಸಿದ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ತಿಳಿಸಿದರು.

click me!