ಕಲಬುರಗಿಯಲ್ಲಿ ಸ್ಥಾಪಿತವಾಗುತ್ತಿರುವ ವಚನ ಮಂಟಪ ಬಸವ ತತ್ವದ ಹೆಗ್ಗುರುತಾಗಲಿದೆ: ಸಚಿವ ಪ್ರಿಯಾಂಕ್ ಖರ್ಗೆ

Published : Feb 24, 2025, 05:39 PM ISTUpdated : Feb 24, 2025, 05:59 PM IST
ಕಲಬುರಗಿಯಲ್ಲಿ ಸ್ಥಾಪಿತವಾಗುತ್ತಿರುವ ವಚನ ಮಂಟಪ ಬಸವ ತತ್ವದ ಹೆಗ್ಗುರುತಾಗಲಿದೆ: ಸಚಿವ ಪ್ರಿಯಾಂಕ್ ಖರ್ಗೆ

ಸಾರಾಂಶ

ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ‘ವಚನ ಮಂಟಪ’ವನ್ನು ಮುಂದಿನ ಪೀಳಿಗೆಗೆ ಬಸವ ತತ್ವದ ದಾರಿದೀಪವಾಗಿ ನಿಲ್ಲುವ ಹೆಗ್ಗುರುತಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.  

ಕಲಬುರಗಿ (ಫೆ.24): ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ‘ವಚನ ಮಂಟಪ’ವನ್ನು ಮುಂದಿನ ಪೀಳಿಗೆಗೆ ಬಸವ ತತ್ವದ ದಾರಿದೀಪವಾಗಿ ನಿಲ್ಲುವ ಹೆಗ್ಗುರುತಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಉದ್ದೇಶಿತ ಕಟ್ಟಡದ ಚಿತ್ರಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಗುರು ಬಸವಣ್ಣನವರ ಬೋಧನೆಗಳ ಕೇಂದ್ರಬಿಂದುವಾಗಿರುವ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಗತಿಪರ ಚಿಂತನೆಯ ಸಾರವನ್ನು ಪ್ರತಿಬಿಂಬಿಸಲು ವಚನಮಂಟಪದ ಕಟ್ಟಡದ ರಚನೆಯ ಸ್ವರೂಪವನ್ನು ಒದಗಿಸಲಾಗಿದೆ. 

ವಚನ ಮಂಟಪ ಕೇವಲ ಕಲಿಕೆ ಮತ್ತು ಪ್ರವಚನದ ಸ್ಥಳವಾಗಿರದೆ ಕರ್ನಾಟಕದ ಶ್ರೀಮಂತ ಆಧ್ಯಾತ್ಮಿಕ ಮತ್ತು ತಾತ್ವಿಕ ಪರಂಪರೆಯ ಸಂಕೇತವಾಗಿರಲಿದೆ ಎಂದಿದ್ದಾರೆ. ಸಮಾನತೆ, ಒಳಗೊಳ್ಳುವಿಕೆ ಮತ್ತು ನೈತಿಕ ಸಮಗ್ರತೆ ಒತ್ತಿಹೇಳುವ ಶರಣರ ವಚನಗಳ ಆದರ್ಶಗಳನ್ನು ಅಧ್ಯಯನ ಮಾಡಲು, ಪ್ರತಿಬಿಂಬಿಸಲು ಮತ್ತು ಪ್ರಚಾರ ಮಾಡಲು ವಿದ್ವಾಂಸರು, ಚಿಂತಕರು ಮತ್ತು ಅನುಯಾಯಿಗಳು ಒಟ್ಟಾಗಿ ಸೇರುವ ಕೇಂದ್ರವಾಗಿ ಮಾಡಲು ಉದ್ದೇಶಿಸಲಾಗಿದೆ.

ಬುದ್ಧ, ಬಸವ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳು ಭಾರತದ ಸಾಮಾಜಿಕ-ರಾಜಕೀಯ ಚೌಕಟ್ಟಿನೊಂದಿಗೆ ಆಳವಾಗಿ ಹೆಣೆದುಕೊಂಡಿವೆ. ಸಮಾನತೆ, ನ್ಯಾಯ ಮತ್ತು ಸಬಲೀಕರಣದ ಕುರಿತು ಅವರ ಬೋಧನೆಗಳು ಇಂದಿಗೂ ಕೂಡಾ ಸ್ಫೂರ್ತಿ ಮತ್ತು ಹೆಚ್ಚು ಪ್ರಸ್ತುತವಾಗಿವೆ. ವಚನ ಮಂಟಪವನ್ನು ಸ್ಥಾಪಿಸುವ ಮೂಲಕ, ಕರ್ನಾಟಕವು ತನ್ನದೇ ಆದ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವುದು ಮಾತ್ರವಲ್ಲದೆ ನ್ಯಾಯಯುತ ಮತ್ತು ಸಮಾನ ಸಮಾಜದ ಅಡಿಪಾಯವನ್ನು ರೂಪಿಸುವ ಮೌಲ್ಯಗಳನ್ನು ಬಲಪಡಿಸುತ್ತದೆ.

ಜೈವಿಕ ಇಂಧನ ಕ್ಷೇತ್ರದ ಸಮಾವೇಶ ನಡೆಸಿ: ಸಚಿವ ಪ್ರಿಯಾಂಕ್‌ ಖರ್ಗೆ

ಈ ಮಹಾನ್ ಚಿಂತಕರು ಪ್ರತಿಪಾದಿಸಿದ ಪ್ರಗತಿಪರ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ಬಯಸುವವರಿಗೆ ಈ ಕ್ರಮ ಮಾರ್ಗದರ್ಶಕವಾಗಲಿದೆ ಎಂದು ನಾನು ತುಂಬಾ ಭರವಸೆ ಹೊಂದಿದ್ದೇನೆ ಎಂದಿರುವ ಸಚಿವರು ಅಂದಹಾಗೆ, ಇವುಗಳಲ್ಲಿ ನೀವು ಯಾವುದನ್ನು ಇಷ್ಟಪಡುತ್ತೀರಿ ಎಂದು ಕೇಳಿದ್ದಾರೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ