ಸರ್, ನಮ್ಮೂರಿಗೆ 5 ವರ್ಷ ಹೊಸ ಆಟೋಗೆ ಪರ್ಮಿಟ್‌ ಕೊಡಬೇಡಿ: ಚಾಲಕರ ಸಂಘದ ಪ್ರತಿಭಟನೆ

Published : Oct 30, 2026, 04:14 PM IST
Sirsi Auto Drivers

ಸಾರಾಂಶ

ಜನಸಂಖ್ಯೆಗಿಂತ ಆಟೋಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಹಾಗೂ ಚಾಲಕರಿಗೆ ದುಡಿಮೆಯಿಲ್ಲದೆ ಸಂಕಷ್ಟ ಎದುರಾಗಿದೆ. 2ಕ್ಕಿಂತ ಹೆಚ್ಚು ಪರ್ಮಿಟ್ ಹೊಂದಿರುವವರ ಮೇಲೆ ಕ್ರಮ ಕೈಗೊಂಡು, ಮುಂದಿನ 5 ವರ್ಷ ಹೊಸ ಆಟೋ ಪರ್ಮಿಟ್ ಸ್ಥಗಿತಗೊಳಿಸುವಂತೆ ಆಟೋ ಚಾಲಕರ ಸಂಘ ಪ್ರತಿಭಟನೆ ನಡೆಸಿ ಆಗ್ರಹಿಸಿದೆ.

ಉತ್ತರ ಕನ್ನಡ: ಅನೇಕ ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಇನ್ನೂ ಅನೇಕ ಬೇಡಿಕೆಗಳು ಹಾಗೆಯೇ ಉಳಿದಿವೆ ಎಂದು ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಆರೋಪಿಸಿದರು.

ಚಾಲಕ ಮತ್ತು ಮಾಲೀಕರಿಗೆ ದುಡಿಮೆ ಇಲ್ಲದೆ ಸಂಕಷ್ಟ

ಬುಧವಾರ ನಗರದ ಸಹಾಯಕ ಆಯುಕ್ತರ ಕಚೇರಿ ಎದುರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ ಮತ್ತು ತಾಲೂಕುಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಆಟೋ ರಿಕ್ಷಾಗಳ ಸಂಖ್ಯೆಗಿಂತ ಬಹಳ ಹೆಚ್ಚಾಗಿದ್ದು, ಇದರಿಂದ ಆಟೋ ನಿಲ್ದಾಣಗಳಲ್ಲಿ ಸ್ಥಳಾವಕಾಶ ಇಲ್ಲದೆ ಆಟೋಗಳನ್ನು ನಿಲ್ಲಿಸಲು ಸಾಧ್ಯ ಆಗದೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಆಟೋ ರಿಕ್ಷಾಗಳ ಚಾಲಕ ಮತ್ತು ಮಾಲೀಕರಿಗೆ ದುಡಿಮೆ ಇಲ್ಲದೆ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಪರ್ಮಿಟ್ ತಾತ್ಕಾಲಿಕವಾಗಿ ನಿಷೇಧ ಮಾಡುವಂತೆ ಆಗ್ರಹ

ಜಿಲ್ಲೆಯಲ್ಲಿ ಕೆಲವರು ಆಟೋ ರಿಕ್ಷಾಗಳನ್ನು ಖರೀದಿಸಿ ಹಣದ ಆಸೆಗಾಗಿ ಹೆಚ್ಚಿನ ಹಣಕ್ಕೆ ಆಟೋ ರಿಕ್ಷಾಗಳನ್ನು ಮಾರುತ್ತಿರುವುದರಿಂದ ರಿಕ್ಷಾಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದ್ದು, ಆ ಹಿನ್ನೆಲೆ 2 ಪರ್ಮಿಟ್‌ಗಿಂತ ಹೆಚ್ಚಿನ ಪರ್ಮಿಟ್ ಹೊಂದಿರುವ ಆಟೋ ರಿಕ್ಷಾ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು. ಬೇರೆ ಬೇರೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪರ್ಮಿಟ್ ತಾತ್ಕಾಲಿಕವಾಗಿ ನಿಷೇಧ ಮಾಡಿದಂತೆ, ಜಿಲ್ಲೆಯಲ್ಲೂ ಕನಿಷ್ಠ 5 ವರ್ಷಗಳ ಕಾಲ ಹೊಸ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಉಪೇಂದ್ರ ಪೈ ಹಾಗೂ ಆಟೋ ರಿಕ್ಷಾ ಮಾಲೀಕರು ಮತ್ತು ಚಾಲಕರು ಹಾಗೂ ಆಟೋರಿಕ್ಷಾ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

Bengaluru: 50 ಕೋಟಿ ಮೌಲ್ಯದ 2 ನಿವೇಶನ ವಶಕ್ಕೆ ಪಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರಿನಲ್ಲಿ ದೆವ್ವಗಳ ಕಥೆಗಳದ್ದೇ ಸದ್ದು! ಕಣ್ಣಾರೆ ಕಂಡ ಭಯಾನಕ ಅನುಭವಗಳನ್ನು ಬಿಚ್ಚಿಟ್ಟ ಜನರು