ಉತ್ತರಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಮತ್ತು ಚಾಲಕ ಅರ್ಜುನ್ ಶವ ಪತ್ತೆಯಾಗಿದೆ. ಬರೋಬ್ಬರಿ ಮೂರು ತಿಂಗಳ ನಂತರ ಲಾರಿ ಅವಶೇಷ ಪತ್ತೆಯಾಗಿದೆ.
ಕಾರವಾರ (ಸೆ.25): ಉತ್ತರಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ ಮತ್ತು ಚಾಲಕ ಅರ್ಜುನ್ ಶವ ಪತ್ತೆಯಾಗಿದೆ. ಲಾರಿಯಲ್ಲೇ ಅರ್ಜುನ್ ಶವ ಇರುವುದು ಕಂಡುಬಂದಿದೆ. ಅರ್ಜುನ್ ಮೃತ ದೇಹ ಎರಡು ತುಂಡಾಗಿ ಪತ್ತೆಯಾಗಿದೆ. ಲಾರಿಯಲ್ಲಿ ಎರಡು ತುಂಡಾಗಿ ಬಿದ್ದಿದ್ದ ಅರ್ಜುನ ಮೃತ ದೇಹ ಕಂಡುಬಂದಿದ್ದು, ಗುಡ್ಡ ಕುಸಿತದ ಭೀಕರತೆ ತಿಳಿಸುತ್ತಿದೆ. ಇನ್ನೂ ಇಬ್ಬರು ಕಣ್ಮರೆಯಾದವರ ಬಗ್ಗೆ ಶೋಧ ನಡೆಯಬೇಕಿದೆ. ಕೆಲ ದಿನಗಳಿಂದ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಪುನಃ ಆರಂಭವಾಗಿ ಕಳೆದ ಆರು ದಿನಗಳಿಂದ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು.
ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಈ ವೇಳೆ ಅರ್ಜುನ್ ಹಾಗೂ ಲಾರಿ ಪತ್ತೆಯಾಗಿದೆ. ಗುಡ್ಡಕುಸಿತ ಭೀಕರತೆ ತೋರಿಸುತ್ತಿರುವ ಲಾರಿ ಗುಡ್ಡಕುಸಿತಕ್ಕೆ ಸಿಕ್ಕಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮಣ್ಣಿನ ಒಳಗೆ ಸಿಲುಕಿರುವ ಕೇರಳದ ಅರ್ಜುನ ಚಲಾಯಿಸುತ್ತಿದ್ದ ಭಾರತ ಬೆಂಜ್ ಲಾರಿಯ ಹುಡುಕಾಟ ನಡೆಸಲಾಗಿತ್ತು. ಆದರೆ ಟ್ಯಾಂಕರ್ ಬಿಡಿಭಾಗಗಳು ದೊರಕಿದ್ದವು. ಹಿಂದೆಯೇ ಈ ಟ್ಯಾಂಕರ್‌ನ ಟ್ಯಾಂಕ್ ದೊರೆತಿತ್ತು. ಬಳಿಕ ಅರ್ಜುನ ಚಲಿಸುತ್ತಿದ್ದ ಭಾರತ ಬೆಂಜ್ ಲಾರಿಯಲ್ಲಿ ನಾಟಾ ತುಂಬಿದ್ದು, ಆರಂಭದಲ್ಲಿಯೇ ನಾಟಾದ ಒಂದು ತುಂಡು ದೊರೆತಿತ್ತು. ಹಾಗಾಗಿ ಅರ್ಜುನ ಅವರ ಲಾರಿಯೂ ಅದೇ ಸ್ಥಳದಲ್ಲಿ ಇರಬಹುದೆಂದು ಹೆಚ್ಚಿನ ಕಾರ್ಯಾಚರಣೆ ನಡೆಸಲಾಗಿತ್ತು.
undefined
ಮುಡಾ ಹಗರಣದಲ್ಲಿ ಸಿಎಂಗೆ ಮತ್ತೆ ಶಾಕ್, ಲೋಕಾಯುಕ್ತ ತನಿಖೆಗೆ ಆದೇಶಿಸಿದ ಜನಪ್ರತಿನಿಧಿಗಳ ಕೋರ್ಟ್!
ಶಿರೂರು ಗುಡ್ಡ ಕುಸಿತವಾದ ದಿನದಿಂದ ಇಲ್ಲಿಯವರೆಗೆ ಈಶ್ವರ್ ಮಲ್ಪೆ ಕಾರ್ಯಾಚರಣೆಗೆ ಅನೆಬಲ ತುಂಬಿದ್ದರು. ಸುರಿವ ಮಳೆ, ರಭಸದ ನದಿಯ ಒಳಹರಿವು, ನೀರಿನೊಳಗೆ ಕಣ್ಣು ಬಿಡಲು ಆಗದ ಪರಿಸ್ಥಿತಿಯಲ್ಲೂ ಅವರು ಕಾರ್ಯಾಚರಣೆ ನಡೆಸಿದ್ದರು. ಅದೇ ರೀತಿ ಪ್ರಸ್ತುತ 3ನೇ ಹಂತದ ಕಾರ್ಯಾಚರಣೆಯಲ್ಲೂ ಅವರು ಉತ್ತಮ ಸಹಕಾರ ನೀಡಿದ್ದರು.
ಅರ್ಜುನ್ ನಾಪತ್ತೆಯಾಗಿ ಇಂದಿಗೆ 71 ದಿನಗಳು ಪೂರ್ಣಗೊಂಡಿದೆ. ಡ್ರೆಡ್ಜರ್ ಬಳಸಿ ನಡೆಸಿದ ಶೋಧ ಕಾರ್ಯದಲ್ಲಿ ಲಾರಿಯ ಕ್ಯಾಬಿನ್ ಪತ್ತೆಯಾಗಿದೆ. ಅರ್ಜುನ್ ಅವರ ಸಹೋದರಿ ಪತಿ ಜಿತಿನ್ ಸ್ಥಳದಲ್ಲೇ ಇದ್ದರು. ಹೊರತೆಗೆದ ವಾಹನ ಅರ್ಜುನ್ ಅವರದ್ದೇ ಎಂದು ಜಿತಿನ್ ಮತ್ತು ವಾಹನದ ಮಾಲೀಕ ಮನಾಫ್ ದೃಢಪಡಿಸಿದ್ದಾರೆ. ಈ ಸಂದರ್ಭದಲ್ಲಿ ಶಿರೂರಿನಲ್ಲಿ ಭಾವುಕ ಕ್ಷಣಗಳು ಕಂಡುಬಂದವು. ಅರ್ಜುನ್ ಅವರ ಸಹೋದರಿ ಪತಿ ಜಿತಿನ್ ಕಣ್ಣೀರು ಹಾಕುತ್ತಾ ಮಾತನಾಡಿದರು. "ಅರ್ಜುನ್ ಮರಳಿ ಬರುವುದಿಲ್ಲ ಎಂದು ನಮಗೆ ತಿಳಿದಿತ್ತು, ಆದರೆ ಅವರ ಏನಾದರೂ ಕುರುಹುಗಳು ಸಿಗಬಹುದು ಎಂಬ ಭರವಸೆ ಇತ್ತು" ಎಂದು ಜಿತಿನ್ ಮಾಧ್ಯಮಗಳಿಗೆ ತಿಳಿಸಿದರು. ಲಾರಿಯ ಕ್ಯಾಬಿನ್ನಲ್ಲಿ ಮೃತದೇಹ ಇದೆ ಎಂದು ಶಾಸಕರು ದೃಢಪಡಿಸಿದ್ದಾರೆ. ಮೃತದೇಹವನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ.
ಜುಲೈ 16 ರಂದು ಅರ್ಜುನ್ ನಾಪತ್ತೆಯಾಗಿದ್ದರು. ಆ ದಿನ ಬೆಳಿಗ್ಗೆ 8.45 ಕ್ಕೆ ಶಿರೂರಿನಲ್ಲಿ ಭೂಕುಸಿತ ಸಂಭವಿಸಿತ್ತು. ಜುಲೈ 23 ರಂದು ರಾಡಾರ್ ಮತ್ತು ಸೋನಾರ್ ಸಿಗ್ನಲ್‌ಗಳಲ್ಲಿ ಲಾರಿ ಎಂದು ಶಂಕಿಸಲಾದ ಲೋಹದ ಭಾಗದ ಸಿಗ್ನಲ್‌ಗಳು ದೊರೆತಿದ್ದವು. ನದಿಯ ಮಧ್ಯದಲ್ಲಿ ಮಣ್ಣಿನ ದಿಬ್ಬದ ಬಳಿ CP 4 ಎಂದು ಗುರುತಿಸಲಾಗಿತ್ತು. ಜುಲೈ 28 ರಂದು ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಆಗಸ್ಟ್ 14 ರಂದು ಎರಡನೇ ಹಂತದ ಶೋಧ ಕಾರ್ಯ ಆರಂಭವಾಯಿತು.
ಆಗಸ್ಟ್ 17 ರಂದು ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಶೋಧ ಕಾರ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಕೇರಳದಿಂದ ಡ್ರೆಡ್ಜರ್ ತರಿಸುವ ಪ್ರಯತ್ನವೂ ವಿಫಲವಾಯಿತು. ಈಶ್ವರ್ ಮಾಲ್ಪೆ ಸೇರಿದಂತೆ ಹಲವರು ಮೊದಲ ಮತ್ತು ಎರಡನೇ ಹಂತದ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು. ಆದರೆ ನದಿಯ ತಳದಲ್ಲಿ ಮರಗಳು ಮತ್ತು ಬಂಡೆಗಳು ಸಿಲುಕಿಕೊಂಡಿದ್ದವು ಮತ್ತು ಪ್ರವಾಹ ಹೆಚ್ಚಾಗಿದ್ದರಿಂದ ಹೆಚ್ಚು ಆಳಕ್ಕೆ ಹೋಗಲು ಸಾಧ್ಯವಾಗಲಿಲ್ಲ.