ಶಿವಮೊಗ್ಗ: ಕೆನರಾ ಬ್ಯಾಂಕ್ ಗ್ರಾಹಕರ ಹಣ ಕದ್ದು ಶೋಕಿ ಜೀವನ ಮಾಡುತ್ತಿದ್ದ ಉದ್ಯೋಗಿ ಸಾವು!

By Sathish Kumar KH  |  First Published Sep 25, 2024, 3:29 PM IST

ಶಿವಮೊಗ್ಗದ ಕೆನರಾ ಬ್ಯಾಂಕ್‌ನಲ್ಲಿ ಗ್ರಾಹಕರ ಖಾತೆಯಿಂದ ಹಣ ವಂಚಿಸಿ ಐಷಾರಾಮಿ ಜೀವನ ಬ್ಯಾಂಕ್ ಉದ್ಯೋಗಿ ಆನ್‌ಲೈನ್ ವ್ಯವಹಾರದಲ್ಲಿ ಹಣ ಕಳೆದುಕೊಂಡ ಸಾವಿಗೀಡಾಗಿದ್ದಾನೆ.


ಶಿವಮೊಗ್ಗ (ಸೆ.25): ಶಿವಮೊಗ್ಗದ ಕೆನರಾ ಬ್ಯಾಂಕ್‌ನಲ್ಲಿ ಗ್ರಾಹಕರ ಖಾತೆಯಿಂದ ಹಣ ವಂಚಿಸಿ ಐಷಾರಾಮಿ ಜೀವನ ಬ್ಯಾಂಕ್ ಉದ್ಯೋಗಿ ಆನ್‌ಲೈನ್ ವ್ಯವಹಾರದಲ್ಲಿ ಹಣ ಕಳೆದುಕೊಂಡ ಸಾವಿಗೀಡಾಗಿದ್ದಾನೆ. ಕೈಯಲ್ಲಿದ್ದರೆ ಹಣ ಖರ್ಚಾಗಿ ಹೋಗುತ್ತದೆ ಎಂದು ಕೆನರಾ ಬ್ಯಾಂಕ್‌ ಖಾತೆಯಲ್ಲಿದ್ದ ಜನರ ಹಣವನ್ನು ವಾಮ ಮಾರ್ಗದಲ್ಲಿ ಲಪಟಾಯಿಸಿ ಐಷಾರಾಮಿ ಜೀವನ ಮಾಡುತ್ತಿದ್ದವ ಈಗ ಇಹಲೋಕ ತ್ಯಜಿಸಿದ್ದಾನೆ.

ಹೌದು, ಬ್ಯಾಂಕ್ ನೌಕರ ಎಂದರೆ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಕುಟುಂಬಸ್ಥರಂತೆ ಜೀವನ ಮಾಡಬಹುದು. ಆದರೆ, ಇಲ್ಲೊಬ್ಬ ಬ್ಯಾಂಗ್ ನೌಕರ ನಾನು ಐಷಾರಾಮಿ ಜೀವನ ಮಾಡಬೇಕೆಂದು ಬ್ಯಾಂಕ್‌ನಲ್ಲಿ ಗ್ರಾಹಕರು ಇಟ್ಟಿದ್ದ ಹಣವನ್ನು ಫೋರ್ಜರಿ ಸಹಿ ಮಾಡಿ ಹಣ ಬಿಡಿಸಿಕೊಂಡು ಮಜಾ ಉಡಾಯಿಸಿದ್ದಾರೆ. ದಿಡೀರ್ ಹಣ ಮಾಡುವ ದುರಾಸೆಗೆ ಬಿದ್ದು ಬ್ಯಾಂಕಿನಲ್ಲಿ ಜನರು ಠೇವಣಿ ಇಟ್ಟಿದ್ದ ಹಣವನ್ನು ಪೋರ್ಜರಿ ಮಾಡಿ ಕೆಲಸ ಮಾಡುತ್ತಿದ್ದ ಬ್ಯಾಕ್‌ಗೆ ಹಾಗೂ ಗ್ರಾಹಕರಿಗೆ ವಂಚನೆ ಮಾಡಿದ್ದಾನೆ. 

Tap to resize

Latest Videos

undefined

ಬೆಂಗಳೂರು ವೈಯಾಲಿಕಾವಲ್ ನೇಪಾಳಿ ಕನ್ನಡತಿ ಮಹಾಲಕ್ಷ್ಮಿ ಕೊಲೆ ಆರೋಪಿ ಇವನೇ ನೋಡಿ..!

ತೀರ್ಥಹಳ್ಳಿ ತಾಲೂಕಿನ ಆರಗದ ಸುನಿಲ್ (35) ಮೃತ ದುರ್ದೈವಿ. ಈತ ಯಡೂರಿನ ಕೆನರಾ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದನು. ಈ ಸಂದರ್ಭದಲ್ಲಿ 8 ಅಕೌಂಟ್ ಗಳಿಂದ ಠೇವಣಿ ಇಟ್ಟಿದ್ದ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದನು. ಈ ಬಗ್ಗೆ 2023 ಡಿಸೆಂಬರ್ ನಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಸುನಿಲ್ ಜೈಲಿಗೆ ಸಹ ಹೋಗಿದ್ದನು. ನಂತರ ಬೇಲ್ ಮೇಲೆ ಹೊರ ಬಂದಿದ್ದ ಈತ ಆನ್‌ಲೈನ್ ವ್ಯವಹಾರದಲ್ಲಿ ಹಣ ಕಳೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಬ್ಯಾಂಕ್ ವ್ಯವಹಾರದ ಬಗ್ಗೆ ಜ್ಞಾನವಿದ್ದ ಕಾರಣ ಈತ ಆನ್‌ಲೈನ್‌ನಲ್ಲಿಯೂ ಹಣದ ವ್ಯವಹಾರ ನಡೆಸಲು ಮುಂದಾಗಿದ್ದನು. ಆದರೆ, ಆನ್‌ಲೈನ್‌ನಲ್ಲಿ ಹಣ ವ್ಯವಹಾರ ಮಾಡುವಾಗ ಈತನಿಗೆ ಸೈಬರ್ ವಂಚನೆ ಆಗಿದ್ದು, ಹಣ ಕಳೆದುಕೊಂಡ ಕಾರಣ ಸುನಿಲ್ ಮೊನ್ನೆ ಗುರುವಾರ ವಿಷ ಸೇವಿಸಿದ್ದಾನೆ. ಈತ ವಿಷ ಸೇವನೆ ಮಾಡುತ್ತಿದ್ದಂತೆ, ಈ ವಿಚಾರ ತಿಳಿದ ಆತನ ಮನೆಯವರು ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಘಟನೆ ಕುರಿತಂತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಆಗಿದೆ.

click me!