ಖ್ಯಾತ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ, ದೂರು ಕೊಡಲು ಹೋದ ಮಹಿಳೆ ನಾಪತ್ತೆ

By Sathish Kumar KH  |  First Published Sep 25, 2024, 11:05 AM IST

ರಾಜ್ಯದ ಖ್ಯಾತ ಮಠದ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಸಂತ್ರಸ್ತೆ ದೂರು ನೀಡಲು ಪೊಲೀಸ್ ಠಾಣೆಗೆ ಅಲೆದಾಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂತ್ರಸ್ತೆ ಮತ್ತು ಆಕೆಯ ಮಗಳು ನಾಪತ್ತೆಯಾಗಿದ್ದಾರೆ.


ರಾಯಚೂರು (ಸೆ.25): ರಾಜ್ಯದ ಖ್ಯಾತ ಸ್ವಾಮೀಜಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ‌ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವಾಮೀಜಿ ವಿರುದ್ಧ ದೂರು ಕೊಡಲು ವಿವಿಧ ಪೊಲೀಸ್ ಠಾಣೆಗೆ 6 ತಿಂಗಳ ಕಾಲ ಅಲೆದಾಡಿದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಇದೀಗ ಪ್ರಕರಣ ಬಯಲಾಗುತ್ತಿದ್ದಂತೆ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಮಗಳು ನಾಪತ್ತೆ ಆಗಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ತಾ. ಸುಲ್ತಾನಪುರ ಮಠದ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಸ್ವಾಮೀಜಿ ವಿರುದ್ಧ ದೂರು ನೀಡಲು‌ ಮಹಿಳೆ ಪೊಲೀಸ್ ಠಾಣೆಗಳಿಗೆ ಅಲೆದಾಡಿದ್ದಾರೆ. ಪೊಲೀಸ್ ಠಾಣೆಯ ವಿಜಿಟರ್  ರಿಜಿಸ್ಟರ್‌ನ ಬುಕ್ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಸ್ವಾಮೀಜಿ ವಿರುದ್ಧ ದೂರು ನೀಡಲು ಬಂದಿರುವುದಾಗಿ ರಿಜಿಸ್ಟರ್‌ನಲ್ಲಿ ಮಹಿಳೆ ದಾಖಲು ಮಾಡಿದ್ದಾಳೆ. ಸುಲ್ತಾನಪುರ ಮಠದ ಸ್ವಾಮೀಜಿ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ದೂರು ಕೊಡಲು ಬಂದಿದ್ದಾಗಿ ಮಾಹಿತಿ ಲಭ್ಯವಾಗಿದೆ.

Tap to resize

Latest Videos

undefined

ಮುಂಡರಗಿ ಕಾಳಮ್ಮ ಮೆಹಬೂಬ್ ಮದ್ವೆಯಾಗಿ ಖುರ್ಷಿದಾ ಆದಳು: ಆಸ್ತಿ ಕೇಳಿದ್ದಕ್ಕೆ ಈಶ್ವರಣ್ಣ ಕೊಲೆ ಮಾಡಿದ!

ಸುಲ್ತಾನಪುರ ಮಠದಲ್ಲಿ ಕಳೆದ 6 ತಿಂಗಳಿಂದ ‌ಮಠದಲ್ಲಿಯೇ ಸಂತ್ರಸ್ತೆ ಮಹಿಳೆ ಮತ್ತು ಆಕೆಯ ಮಗಳು ಮಠದ ಸೇವೆ ಮಾಡುತ್ತಿದ್ದರು. ಈ ವೇಳೆ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂದು ಮಗಳನ್ನ ಮಠದ ಪಕ್ಕದ  ಖಾಸಗಿ ಶಾಲೆಗೆ ದಾಖಲು ಮಾಡಿಸಿದ್ದಳು. ಆದರೆ, ಇದೀಗ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಸಂತ್ರಸ್ತೆ ಮತ್ತು ಆಕೆಯ ಮಗಳು ನಾಪತ್ತೆ ಆಗಿದ್ದಾರೆ.ಸಂತ್ರಸ್ತೆ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಗೆ ತೆರಳಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಿಳೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ, ಘಟನೆ ಬಳಿಕ ಸುಲ್ತಾನಪುರ ಮಠದ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಈ ಘಟನೆ ದೇವದುರ್ಗ ತಾಲೂಕಿನ ಗಬ್ಬೂರು ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

ಸುಲ್ತಾನಪುರ ಮಠದ ಆಪ್ತರು ಹಾಗೂ ಭಕ್ತರು ಕಳೆದ ಮೂರ್ನಾಲ್ಕು ದಿನಗಳಿಂದ ಮೇಲಿಂದ ಮೇಲೆ ಸಭೆ ಮಾಡಲಾಗುತ್ತಿದೆ. ಈ ಪ್ರಕರಣದ ಬಗ್ಗೆ ಶ್ರೀ ಶಂಭು ಸೋಮನಾಥ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಇದು ನನ್ನ ಮೇಲೆ ಸುಳ್ಳು ಆರೋಪಗಳನ್ನ ಹೊರಿಸಿದ್ದಾರೆ ಎಂದು ಹೇಳಿದ್ದಾರೆ. ಅನುಷ್ಠಾನದಲ್ಲಿರೋವಾಗ ಮಠದಲ್ಲಿ ಸೇವೆ ಮಾಡಲು ಬರ್ತಿನಿ ಅಂದಿದ್ದರು. ಮಠದಲ್ಲಿ ಗೋಶಾಲೆ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇದ್ದರು. ಮಠದಲ್ಲಿ ನಮ್ಮ ಭಕ್ತರಿಗೂ ಮತ್ತೆ ಅವರಿಗೂ ಸ್ವಲ್ಪ ಜಗಳ ಆಗಿತ್ತು. ನೀವು ಇಲ್ಲಿರೋದು ಬೇಡವೆಂದು ನಾವೇ ಹೇಳಿ ಕಳುಹಿಸಿ ಕೊಟ್ಟಿದ್ದೀವಿ ಎಂದು ಹೇಳಿದ್ದಾರೆ.

Raichur: ತರಗತಿಯಲ್ಲೇ ಏಕಾಏಕಿ‌ ಲೋ ಬಿಪಿಯಿಂದ 5ನೇ ತರಗತಿ ವಿದ್ಯಾರ್ಥಿ ಸಾವು!

ಮುಂದುವರೆದು, ನಾವು ಮಠದಿಂದ ಕಳಿಸಿದ್ದಕ್ಕೆ ಸಿಟ್ಟಾಗಿ ಪೊಲೀಸ್ ಠಾಣೆ ಹೋಗಿರುವ ವಿಚಾರ ಕೂಡ ಗೊತ್ತಾಯಿತು. ಈ ವೇಳೆ ಆಕೆಯನ್ನು ಕರೆದು ಬುದ್ದಿಮಾತು ಹೇಳಿ ಸಹ ಕಳುಹಿಸಿ ಕೊಟ್ಟಿದ್ದೀವಿ. ಮಠ‌ ಮಂದಿರ ಅಂದ್ಮೆಲೆ ಆಶ್ರಯ ಅನ್ನೋದು ಇರುತ್ತದೆ. ಅದನ್ನ ತಪ್ಪು ಕಲ್ಪನೆ ತಿಳಿದುಕೊಂಡು ಅಪಪ್ರಚಾರ ಮಾಡುವುದು ಲಕ್ಷಣವಲ್ಲ. ಯಾರೋ ಗೊತ್ತಿಲ್ಲದವರು ಅಪಪ್ರಚಾರ ಹುಟ್ಟಿಸಿದ್ದಾರೆ ಎಂದು ಶ್ರೀ ಶಂಭು ಸೋಮನಾಥ ಸ್ವಾಮೀಜಿ  ಹೇಳಿದ್ದಾರೆ.

click me!