'ಘಟಾನುಘಟಿಗಳು, ಮುತ್ಸದ್ಧಿಗಳು, ಇಸ್ಲಾಂ ಅಪಾಯ ಅಂದಾಜಿಸುವಲ್ಲಿ ವಿಫಲರಾದರೇ?'  ಹೆಗಡೆ ಪ್ರಶ್ನೆ ಒಳಾರ್ಥ!

By Suvarna NewsFirst Published Apr 8, 2020, 5:23 PM IST
Highlights

ಕೊರೋನಾ ವೈರಸ್ ಹಾವಳಿ/ ಬರಹ ಶೇರ್ ಮಾಡಿಕೊಂಡ ಸಂಸದ ಅನಂತ್ ಕುಮಾರ್ ಹೆಗಡೆ/ ಅನೇಕ ಪ್ರಶ್ನೆ ಎತ್ತಿದ್ದಾರೆ/ ಅನಂತ್ ಕುಮಾರ್ ಹೆಗಡೆ ಬರಹದ ಯಥಾವಥ್ ನಿಮ್ಮ ಮುಂದೆ

ಬೆಂಗಳೂರು(ಏ. 08)  'ಕೊರೋನಾ ವೈರಸ್ ಮತ್ತು ಅದು ಮಾಡಬಹುದಾದ ಅಪಾಯವನ್ನು  ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು ವಿಫಲರಾದ ರೀತಿಯಲ್ಲೇ ಜಗತ್ತಿನ ಘಟಾನುಘಟಿ ರಾಜಕಾರಣಿಗಳು, ಮುತ್ಸದ್ಧಿಗಳು, ಇಸ್ಲಾಮಿನ ಅಪಾಯವನ್ನು ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದರೇ?'  ಹೀಗೆಂದು ಪ್ರಶ್ನೆ ಮಾಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ತಮ್ಮ ಸೋಶಿಯಲ್ ಮೀಡಿಯಾ ಖಾತಯಲ್ಲಿ ಬರಹವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ - ತಬ್ಲೀಘಿ ಜಮಾತ್ ಒಳಗಿನ ಒಳಸುಳಿಗಳು ಎಂದು ಅನೇಕ ವಿಚಾರಗಳನ್ನು ಬರೆದಿದ್ದಾರೆ. ಕೊರೋನಾ ವೈರಸ್, ಇಸ್ಲಾಂ ಮತ್ತು ತಬ್ಲಿಘಿ ಜಮಾತ್ ಕುರಿತ ವಿಚಾರ ಶೇರ್ ಮಾಡಿಕೊಂಡಿದ್ದಾರೆ. ಅನಂತ್ ಕುಮಾರ್ ಹೆಗಡೆ ಏನು ಬರೆದಿದ್ದಾರೆ ಎನ್ನುವುದನ್ನು ಯಥಾವತ್ ಆಗಿ ನಿಮ್ಮ ಮುಂದೆ ಇಡುತ್ತಿದ್ದೇವೆ. 

18 ಜಿಲ್ಲೆಗೆ ಹರಡಿದ ಕೊರೋನಾ ಮಾರಿ

ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ - ತಬ್ಲೀಘಿ ಜಮಾತ್ ಒಳಗಿನ ಒಳಸುಳಿಗಳು...  

 ಪ್ರಪಂಚದ ಅಷ್ಟೂ ದೇಶಗಳ ಅದೆಷ್ಟೋ ಮಂದಿ ಪ್ರಚಂಡ ವಿಜ್ಞಾನಿಗಳಿಗೂ ಸವಾಲಾಗಿರುವ, ಎಲ್ಲಾ ವೈದ್ಯರಿಗೂ ಕಗ್ಗಂಟಾಗಿರುವ, ಜಗತ್ತಿನ ಅಷ್ಟೂ ಬಲಾಢ್ಯ ದೇಶಗಳೇ ಬೆಚ್ಚಿಬಿದ್ದಿರುವ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಭಯಭೀತರಾಗಿರುವ ಕೊರೋನಾ ಎಂಬ ಮಹಾಮಾರಿಯಂಥ ವೈರಸ್ಸು ಎಲ್ಲ ಕಡೆ ಹಬ್ಬುತ್ತಿದೆ...! ಈ ಮಾರಣಾಂತಿಕ ಸೋಂಕುರೋಗ ವ್ಯಾಪಕವಾಗಿ ಯಾರೂ ಊಹಿಸದಷ್ಟು ವೇಗದಲ್ಲಿ  ಹರಡುತ್ತಿದೆ...! ಅದು ಪ್ರಸರಣವಾದೆಡೆಯಲ್ಲೆಲ್ಲಾ ಮರಣ ತಾಂಡವವಾಡುತ್ತಿದೆ. ಬರಿಗಣ್ಣಿಗೆ ಕಾಣಿಸದ ಈ ಭೀಕರ ಹೆಮ್ಮಾರಿಯನ್ನು ಮಣಿಸುವುದು ಹೇಗೆಂಬ ಉಪಾಯಗಾಣದೆ ಆಧುನಿಕ ಮನುಷ್ಯ ತಲ್ಲಣಿಸಿ ಮನೆಯೊಳಗೇ ಅವಿತುಕುಳಿತಿದ್ದಾನೆ. ತೀರಾ ಅಸಹಾಯಕನಾಗಿದ್ದಾನೆ... 

 ನಾವು ಬುದ್ಧಿವಂತ ಮನುಷ್ಯರು ಕಟ್ಟಿಕೊಂಡಿರುವ ಆ ಅತ್ಯಾಧುನಿಕ ಜಗತ್ತಿಗೆ ಇಂಥದ್ದೊಂದು ಗಂಡಾಂತರ ಬರಬಹುದು, ಅದರಲ್ಲೂ ಕಣ್ಣಿಗೆ ಕಾಣಿಸದ ಒಂದು ಯಕಶ್ಚಿತ್ ವೈರಸ್ಸಿನ ಎದುರು ಹೀಗೆ ಮಾನವ ಜನಾಂಗವೇ ಮರಣಭಯದಿಂದ ಶರಣಾಗಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ... ! 

 ಅದೇ ರೀತಿ  ಕೊರೋನಾ ಎಂಬ ಮಾಹಾಮಾರಿ ವೈರಾಣುವನ್ನು ಮಣಿಸಲು, ಅದು ಹರಡುವುದನ್ನು ತಡೆಗಟ್ಟಲು ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಿ, ಪ್ರಪಂಚದ ಬೇರೆಲ್ಲಾ ಮುಂದುವರಿದ ದೇಶಗಳಿಗೆ ಹೋಲಿಸಿದರೆ, ಬಹಳಷ್ಟು ಯಶಸ್ಸುಗಳಿಸಿ, ಅತ್ಯಂತ ಕಡಿಮೆ ಸಂಖ್ಯೆಯ ಸೋಂಕಿತರನ್ನು ಹೊಂದಿ ಇನ್ನೇನು ಈ ಯುದ್ಧದಲ್ಲಿ ನಾವು ನಿಶ್ಚಿತವಾಗಿಯೂ ಜಯಗಳಿಸುತ್ತೇವೆ ಎಂಬ ದೃಢನಂಬಿಕೆಯಲ್ಲಿರುವಾಗಲೇ ಇಂಥಾದ್ದೊಂದು ದೇಶ ದ್ರೋಹದ ಕೆಲಸ ನಡೆಯಬಹುದು, ಗಂಭೀರ ಮಾರಣಾಂತಿಕ ಖಾಯಿಲೆಯೊಂದನ್ನು ದೇವರ ಹೆಸರಿನಲ್ಲಿ, ನಂಬಿಕೆಯ ಹೆಸರಿನಲ್ಲಿ ದೇಶದ ಮೂಲೆ ಮೂಲೆಗೂ ಹರಡಬಹುದು... ಆ ಮೂಲಕ ಭಾರತದ ಕೋಟ್ಯಂತರ ಪ್ರಜೆಗಳಿಗೆ ಗಂಡಾಂತರ ಉಂಟುಮಾಡಬಹುದೆನ್ನುವ  ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ... ! 

ದೇಶಕ್ಕೆ ಕೊರೋನಾ ಹರಡಿದ ದೆಹಲಿ ಮಸೀದಿ

 ಭಾರತದಲ್ಲಿ ಮೂಲವನ್ನು ಹೊಂದಿರುವ  ತಬ್ಲೀಘಿ ಜಮಾತ್ ಇವತ್ತು ಪಾಕಿಸ್ತಾನದಲ್ಲಿ, ಬಾಂಗ್ಲಾದೇಶದಲ್ಲಿ ಮಲೇಷ್ಯಾದಲ್ಲಿ, ಇಂಡೋನೇಷ್ಯಾದಲ್ಲಿ, ಫಿಲಿಪೀನ್ಸ್ ನಲ್ಲಿ ಇಂಗ್ಲೆಂಡಿನಲ್ಲಿ, ಯುರೋಪಿನಲ್ಲಿ, ಅಮೆರಿಕಾ ಖಂಡದಲ್ಲಿ ಹಿಂದಿನ ಸೋವಿಯತ್ ರಷ್ಯಾ ದ  ಹಲವಾರು ದೇಶಗಳಲ್ಲಿ,  ಹೀಗೆ ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ  ಹಬ್ಬಿ ನಿಂತಿದೆ.  

 ತಬ್ಲೀಘಿ ಜಮಾತ್ ಸಂಘಟನೆ ಸಂಪೂರ್ಣ ಧಾರ್ಮಿಕ ಸಂಘಟನೆ ಮತ್ತು ಸಂಪೂರ್ಣ ರಾಜಕೀಯೇತರ ಸಂಘಟನೆ ಅಂತಲೇ ಹೇಳಲಾಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ  ತಬ್ಲೀಘಿ ಜಮಾತ್ ಗೆ ಅಲ್ಲಿನ ರಾಜಕೀಯ ಪಕ್ಷಗಳು, ಅಲ್ಲಿನ ಮಂತ್ರಿಗಳು, ಅಲ್ಲಿನ ಸರಕಾರಗಳು ಸಂಪೂರ್ಣ ಬೆಂಬಲ ನೀಡಿವೆ ಮತ್ತು ಮೂಲಭೂತವಾದೀ ಇಸ್ಲಾಮನ್ನು ಪ್ರಚುರ ಪಡಿಸಲು ಯಥೇಚ್ಛ ಹಣಕಾಸಿನ ಮತ್ತು ಆಡಳಿತಾತ್ಮಕ ನೆರವು ನೀಡಿದೆ. ಪಾಕಿಸ್ತಾನವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವನ್ನಾಗಿಸಿದ್ದ ಜಿಯಾ ಉಲ್ ಹಕ್  ತಬ್ಲೀಘಿ ಜಮಾತ್ ಗೆ ಮತಪ್ರಚಾರಕ್ಕೆ ಬೇಕಾದ ಎಲ್ಲ ನೆರವು ಸೌಲಭ್ಯಗಳನ್ನು ಒದಗಿಸಿದ್ದ. ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ನ ಅಪ್ಪ ಮುಹಮ್ಮದ್ ಷರೀಫ್  ತಬ್ಲೀಘಿ ಜಮಾತ್ ಗೆ ದೊಡ್ಡ ಫೈನಾನ್ಷಿಯರ್ ಆಗಿದ್ದರು. ಆತನ ಮಗ ಪ್ರಧಾನಿ ಆದ ಮೇಲೆ ಜಮಾತ್ ಸದಸ್ಯರಿಗೆ ಪಾಕಿಸ್ತಾನ ಸರಕಾರದ ಉನ್ನತ ಹುದ್ದೆಗಳು ಲಭಿಸಿದ್ದವು ಪಾಕಿಸ್ತಾನದ ಒಂಭತ್ತನೇ  ರಾಷ್ಟ್ರಪತಿಯಾಗಿದ್ದ ಮುಹಮ್ಮದ್ ರಫೀಕ್ ತರಾರ್  ಮತ್ತು ಐ ಎಸ್ ಐ ಮುಖ್ಯಸ್ಥ ಜಾವೇದ್ ನಾಸಿರ್  ತಬ್ಲೀಘಿ ಜಮಾತ್ ನ ಕ್ಯಾಂಡಿಡೇಟುಗಳಾಗಿದ್ದರು. ಬೆನಜಿರ್ ಭುಟ್ಟೋ ಸರಕಾರವನ್ನು ಕಿತ್ತೊಗೆಯುವ ಸಂಚಿನಲ್ಲೂ  ತಬ್ಲೀಘಿ ಜಮಾತ್ ಪಾತ್ರ ಇತ್ತು. 

 ಈಗ ಇದೆ  ತಬ್ಲೀಘಿ ಜಮಾತ್ ಭಾರತಕ್ಕೇ ಗಂಡಾಂತರ ಉಂಟುಮಾಡುವ ಭಾರೀ ಸಂಚು ನಡೆಸಿದ ಆರೋಪ ಎದುರಿಸುತ್ತಿದೆ. ಕೊರೋನಾ ವೈರಸ್ ಭಯಾನಕ ಸಾಂಕ್ರಾಮಿಕವಾಗಿ ಹರಡುತ್ತಿರುವ ಹೊತ್ತಿನಲ್ಲೇ ದೆಹಲಿಯ ನಿಜಾಮುದ್ದೀನ್ ನ ತಮ್ಮ ಹೆಡ್ ಕ್ವಾರ್ಟರ್ಸ್ ನಲ್ಲಿ ಸಾವಿರಾರು ಮತಪ್ರಚಾರಕರನ್ನು ಸೇರಿಸಿಕೊಂಡು ಸೋಂಕನ್ನು ದೇಶಾದಾದ್ಯಂತ ಹರಡುವ ಒಂದು ವಿಕೃತ ಸಂಚು ನಡೆಸಲಾಯಿತೇ ? ಮೇಲ್ನೋಟಕ್ಕೆ ಸಂಚು ನಿಜ ಅಂತಲೇ ಅನ್ನಿಸುತ್ತದೆ ಯಾಕೆಂದರೆ ಈ ಸಭೆಯಲ್ಲಿ ಹಲವಾರು ವಿದೇಶೀ ಮತಪ್ರಚಾರಕರಿದ್ದರು. ಅವರಿಗಿದ್ದ ವೈರಸ್ಸಿನ ಸೋಂಕು ಇತರರಿಗೂ ಹರಡಿದ್ದು, ಹಾಗೆ ಸೋಂಕಿತರಾದ  ತಬ್ಲೀಘಿ ಜಮಾತ್ ಸದಸ್ಯರು ಎಲ್ಲೆಂದರಲ್ಲಿ ದೇಶಪೂರ್ತಿ ಓಡಾಡಿದ್ದಾರೆ ತಮ್ಮಲ್ಲಿರುವ ಸೋಂಕನ್ನು ಎಲ್ಲೆಲ್ಲಿಗೋ ಹರಡಿಬಿಟ್ಟಿದ್ದಾರೆ. ಆ ಮೂಲಕ ಭಾರತ ಸರಕಾರ ದೇಶವನ್ನೇ ಸಂಪೂರ್ಣ ಲಾಕ್ ಡೌನ್ ಮಾಡಿ ವೈರಾಣುವಿನ ಹರಡುವಿಕೆಗೆ ಕಡಿವಾಣ ಹಾಕಲು ಮಾಡಿದ ಪ್ರಯತ್ನ ವನ್ನು ವಿಫಲಗೊಳಿಸಿದ್ದಾರೆ. 

ಕ್ವಾರಂಟೈನ್ ಸ್ಥಳದಲ್ಲಿ ಮಲವಿಸ್ರ್ಜನೆ; ತಬ್ಲಿಘಿಗಳ ಹುಚ್ಚಾಟ

ಅಷ್ಟೇ ಅಲ್ಲ,  ತಬ್ಲೀಘಿ ಜಮಾತ್ ನ ಅಧ್ಯಕ್ಷನನ್ನು ಸೇರಿಸಿ ಅದೆಷ್ಟೋ ಮಂದಿ ತಲೆತಪ್ಪಿಸಿ ಎಲ್ಲೆಲ್ಲೋ ಮಸೀದಿಗಳಲ್ಲಿ ಅವಿತು ಕುಳಿತಿದ್ದಾರೆ. ಎಷ್ಟೇ ವಿನಂತಿ ಮಾಡಿಕೊಂಡರೂ ಇವರ್ಯಾರೂ ಕೊರೋನಾ ವೈರಸ್ ತಪಾಸಣೆಗೆ ಒಪ್ಪುತ್ತಿಲ್ಲ ಅದಕ್ಕಿಂತಲೂ ಹೀನವೆಂದರೆ ಈಗಾಗಲೇ ಕೊರೋನಾಗೆ ತುತ್ತಾಗಿರುವ  ತಬ್ಲೀಘಿ ಜಮಾತ್ ಸದಸ್ಯರು ಆಸ್ಪತ್ರೆಗಳಲ್ಲಿ ದುರ್ವರ್ತನೆ ತೋರುತ್ತಿದ್ದಾರೆ, ವೈದ್ಯರ ಮೇಲೆ ದಾದಿಯರ ಮೇಲೆ ಉಗುಳುತ್ತಿದ್ದಾರೆ, ನಗ್ನವಾಗಿ ಓಡಾಡುತ್ತ ಮುಜುಗರ ಸೃಷ್ಟಿಸುತ್ತಿದ್ದಾರೆ. ಚಿಕಿತ್ಸೆಗೆ ಸಹಕಾರ ನೀಡುತ್ತಿಲ್ಲ.... ತಮಗೆ ಯಾವುದೇ ವೈರಸ್ ಸೋಂಕೂ ಇಲ್ಲವೆಂದೇ ಹಠಹಿಡಿಯುತ್ತಿದ್ದಾರೆ. ಇದೆಲ್ಲವೂ ಒಂದು ವ್ಯವಸ್ಥಿತ ಸಂಚು ಅಂತಲೇ ಅನ್ನಿಸತೊಡಗಿದೆ... 

 ಇವತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ತುಂಬಾ, ದೇಶದ ಉದ್ದಗಲಕ್ಕೂ ಸುಮಾರು ಹದಿನೈದು ಸಾವಿರ  ತಬ್ಲೀಘಿ ಜಮಾತ್ ಮತಪ್ರಚಾರಕರು ಕಾರ್ಯಾಚರಿಸುತ್ತಿದ್ದಾರೆ..! ಅದೇ ಹೊತ್ತಿಗೆ  ಕಾಕತಾಳೀಯವಾಗಿ ಕೊರೋನಾ ವೈರಸ್ ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಿ ಅಮೆರಿಕಾ ಈಗ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸೋಂಕಿತರನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಹಾಗಾಗಿ ಭಾರತದಲ್ಲಿ ಮಾಡಿದ ರೀತಿಯ ಸಂಚನ್ನೇ  ತಬ್ಲೀಘಿ ಜಮಾತ್  ಅಮೆರಿಕಾದಲ್ಲಿಯೂ ಮಾಡಿತೇ,, ? ಜಗತ್ತನ್ನೇ ಇಸ್ಲಾಮೀಕರಣಗೊಳಿಸುವ ಬೃಹತ್ ಷಡ್ಯಂತ್ರದ ಭಾಗವಾಗಿಯೇ ಇದೆಲ್ಲವೂ ನಡೆಯುತ್ತಿದೆಯೇ ? ಇಸ್ಲಾಮಿಕ್  ಮೂಲಭೂತವಾದಿಗಳ ಕೈಯಲ್ಲಿ  ಕೊರೋನಾದಂಥಾ ಅಪಾಯಕಾರೀ ವೈರಾಣು ಕೂಡಾ ಒಂದು ಅಸ್ತ್ರವಾಯಿತೇ? 

ಕೊರೋನಾ ವೈರಸ್ಸನ್ನು ಮತ್ತು ಅದು ಮಾಡಬಹುದಾದ ಅಪಾಯವನ್ನು  ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು ವಿಫಲರಾದ ರೀತಿಯಲ್ಲೇ   ಜಗತ್ತಿನ ಘಟಾನುಘಟಿ ರಾಜಕಾರಣಿಗಳು, ಮುತ್ಸದ್ಧಿಗಳು, ಇಸ್ಲಾಮಿನ ಅಪಾಯವನ್ನು ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದರೇ?            

 ಪ್ರಪಂಚದ ಅಷ್ಟೂ ದೇಶಗಳ ಅದೆಷ್ಟೋ ಮಂದಿ ಪ್ರಚಂಡ ವಿಜ್ಞಾನಿಗಳಿಗೂ ಸವಾಲಾಗಿರುವ, ಎಲ್ಲಾ ವೈದ್ಯರಿಗೂ ಕಗ್ಗಂಟಾಗಿರುವ, ಜಗತ್ತಿನ ಅಷ್ಟೂ ಬಲಾಢ್ಯ ದೇಶಗಳೇ ಬೆಚ್ಚಿಬಿದ್ದಿರುವ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಭಯಭೀತರಾಗಿರುವ ಕೊರೋನಾ ಎಂಬ ಮಹಾಮಾರಿಯಂಥ ವೈರಸ್ಸು ಎಲ್ಲ ಕಡೆ ಹಬ್ಬುತ್ತಿದೆ...! ಈ ಮಾರಣಾಂತಿಕ ಸೋಂಕುರೋಗ ವ್ಯಾಪಕವಾಗಿ ಯಾರೂ ಊಹಿಸದಷ್ಟು ವೇಗದಲ್ಲಿ  ಹರಡುತ್ತಿದೆ...! ಅದು ಪ್ರಸರಣವಾದೆಡೆಯಲ್ಲೆಲ್ಲಾ ಮರಣ ತಾಂಡವವಾಡುತ್ತಿದೆ. ಬರಿಗಣ್ಣಿಗೆ ಕಾಣಿಸದ ಈ ಭೀಕರ ಹೆಮ್ಮಾರಿಯನ್ನು ಮಣಿಸುವುದು ಹೇಗೆಂಬ ಉಪಾಯಗಾಣದೆ ಆಧುನಿಕ ಮನುಷ್ಯ ತಲ್ಲಣಿಸಿ ಮನೆಯೊಳಗೇ ಅವಿತುಕುಳಿತಿದ್ದಾನೆ. ತೀರಾ ಅಸಹಾಯಕನಾಗಿದ್ದಾನೆ... 

 ನಾವು ಬುದ್ಧಿವಂತ ಮನುಷ್ಯರು ಕಟ್ಟಿಕೊಂಡಿರುವ ಆ ಅತ್ಯಾಧುನಿಕ ಜಗತ್ತಿಗೆ ಇಂಥದ್ದೊಂದು ಗಂಡಾಂತರ ಬರಬಹುದು, ಅದರಲ್ಲೂ ಕಣ್ಣಿಗೆ ಕಾಣಿಸದ ಒಂದು ಯಕಶ್ಚಿತ್ ವೈರಸ್ಸಿನ ಎದುರು ಹೀಗೆ ಮಾನವ ಜನಾಂಗವೇ ಮರಣಭಯದಿಂದ ಶರಣಾಗಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ... ! 


click me!