ಅಮಲಿನಲ್ಲಿದ್ದವನ ಎತ್ತಲು ಹೋದರೆ ಕಚ್ಚಲು ಬಂದ!, ಇದು ಗೋಕರ್ಣದ ಸ್ಥಿತಿ

By Kannadaprabha NewsFirst Published Oct 23, 2018, 3:17 PM IST
Highlights

ಪ್ರವಾಸಿ ತಾಣ ಗೋಕರ್ಣದಲ್ಲಿ ವಿದೇಶಿಗರ ಹಾವಳಿ ದಿನೇ ದಿನೇ ಹೆಚ್ಚುತ್ತಿರುವ ಬಗ್ಗೆ ಸಾಕಷ್ಟು ವರದಿಗಳು ಬರುತ್ತಿದ್ದವು. ಈಗ ಅದು ಒಂದು ಹಂತ ಮುಂದಕ್ಕೆ ಹೋಗಿದ್ದು ವಿದೇಶಿಗರು ತೂರಾಡುತ್ತ ರಸ್ತೆಯಲ್ಲೇ ಬೀಳುತ್ತಿದ್ದಾರೆ.

ಗೋಕರ್ಣ(ಅ.23)  ವಿದೇಶಿ ಪ್ರವಾಸಿಯೊಬ್ಬ ರಸ್ತೆಯಲ್ಲಿ ಬಿದ್ದು ತೂರಾಡುತ್ತಿದ್ದ ಘಟನೆ ಸೋಮವಾರ ಇಲ್ಲಿನ ಹೋಟೆಲ್ ಗೋಕರ್ಣ ಇಂಟರ್‌ನ್ಯಾಶನಲ್ ಬಳಿ ನಡೆದಿದೆ. ತಕ್ಷಣ ಪೊಲೀಸರು ಮತ್ತು ಪತ್ರಕರ್ತ ಗಣೇಶ ಇತರರು ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ತಂದಿದ್ದು, ಇಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗೆ ಕಾರವಾರಕ್ಕೆ ಹೋಗಲು ಸೂಚಿಸಿದ್ದಾರೆ.

ವೈದ್ಯರು ಹೇಳುವ ಪ್ರಕಾರ ಅತಿಯಾದ ಗಾಂಜಾ ಅಥವಾ ಇತರ ಮಾದಕ ಪದಾರ್ಥ ಸೇವಿಸಿದ್ದರಿಂದ ಅರೆಪ್ರಜ್ಞಾ ಸ್ಥಿತಿ ತಲುಪಿದ್ದಾನೆ. ಆದರೆ ಆತನ ಹೆಸರೇನು? ಯಾವ ದೇಶದವನು ಎಂಬ ಮಾಹಿತಿ ಲಭ್ಯವಾಗಿಲ್ಲ.

ಚಿಕಿತ್ಸೆ ಕೊಡಲು ಮುಂದಾದಾಗ ಏಕಾಏಕಿ ವೈದ್ಯರ ಕೈ ಕಚ್ಚಲು ಬಂದಿದ್ದು, ನರ್ಸ್‌ಗಳ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ. ನಶೆಯಲ್ಲಿದ್ದವನ್ನು ಅಂತೂ ಇಂತೂ ಹಿಡಿದು ಹೆಚ್ಚಿನ ಚಿಕಿತ್ಸೆಗೆ ಕಾರವಾರಕ್ಕೆ ರವಾನಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣ ಮೋಜು-ಮಸ್ತಿ ತಾಣವಾಗುತ್ತಿದೆ. ಅಲ್ಲದೆ ಈ ತಿಂಗಳಿಂದ ವಿದೇಶಿಗರ ಆಗಮಿಸುತ್ತಿದ್ದು, ಪ್ರತಿ ವರ್ಷ ವಿದೇಶಿಗರಿಂದ ನಶೆಯಲ್ಲಿ ಇದೇ ರೀತಿ ಅನೇಕ ಘಟನೆಗಳು ನಡೆಯುತ್ತವೆ.

 

click me!