ಉತ್ತರಕನ್ನಡ: ಬ್ರಾಹ್ಮಣ ಸಮುದಾಯದ ಅವಹೇಳನ; ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ಎಫ್‌ಐಆರ್

Published : Feb 27, 2026, 09:00 PM IST
Uttara Kannada FIR Filed Against Sigandur Trustee Ramappa for Insulting Brahmin Community

ಸಾರಾಂಶ

ಸಾಗರದ ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರು ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ  ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನವರಿ 31ರಂದು ಮೋಳ್ಕೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು 'ಬ್ರಾಹ್ಮಣ ಮುಂಡೆಮಕ್ಕಳು' ಎಂದು ನಿಂದಿಸಿದ್ದರು.

ಶಿವಮೊಗ್ಗ/ಉತ್ತರಕನ್ನಡ (ಫೆ.27): ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಸಾಗರದ ಪ್ರಸಿದ್ಧ ಸಿಗಂದೂರು ದೇವಸ್ಥಾನದ ಧರ್ಮದರ್ಶಿ ವಿರುದ್ಧ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮೋಳ್ಕೋಡಿನಲ್ಲಿ ಜನವರಿ 31ರಂದು ನಡೆದ ಶ್ರೀರಾಮ ಮಂದಿರ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಸೀತಾರಾಮ ಕಲ್ಯಾಣೋತ್ಸವ ನಡೆದಿತ್ತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಾಗರದ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರು, ಬ್ರಾಹ್ಮಣ ಸಮುದಾಯದ ವಿರುದ್ಧ ಅತ್ಯಂತ ಅವಹೇಳನಕಾರಿ ಮತ್ತು ತುಚ್ಛ ಪದಗಳನ್ನು ಬಳಸಿದ್ದರು. ಸಾವಿರಾರು ಭಕ್ತರ ಸಮ್ಮುಖದಲ್ಲೇ ನಡೆದ ಈ ಭಾಷಣ ಈಗ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗುವಂತೆ ಮಾಡಿದೆ.

ಬ್ರಾಹ್ಮಣ ಮುಂಡೆಮಕ್ಕಳು.. ಅವಾಚ್ಯ ನಿಂದನೆ

ಧರ್ಮದರ್ಶಿ ರಾಮಪ್ಪ ಅವರು ತಮ್ಮ ಭಾಷಣದ ಉದ್ದಕ್ಕೂ ಬ್ರಾಹ್ಮಣರನ್ನು 'ಭಟ್ಟ ಮುಂಡೆಮಕ್ಕಳು', 'ಬ್ರಾಹ್ಮಣ ಮುಂಡೆಮಕ್ಕಳು' ಎಂದು ಏಕವಚನದಲ್ಲಿ ನಿಂದಿಸಿದ್ದಲ್ಲದೆ, 'ಬ್ರಾಹ್ಮಣರು ಸಗಣಿ ಹುಳುವಾಗಿ ಸಾಯ್ತಾರೆ' ಎಂಬ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದರು. ಈ ವಿವಾದಾತ್ಮಕ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಸಮುದಾಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಧಾರ್ಮಿಕ ಕೇಂದ್ರದ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿ ವರ್ತಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಸಾಗರದಿಂದ ಹೊನ್ನಾವರಕ್ಕೆ ವರ್ಗಾವಣೆಯಾದ ಪ್ರಕರಣ

ಈ ಅವಹೇಳನಕಾರಿ ಹೇಳಿಕೆಯ ವಿರುದ್ಧ ಸಾಗರದ ನಿವಾಸಿ ರಾಜೇಂದ್ರ ಪ್ರಸಾದ್ ಎಂಬುವವರು ಮೊದಲು ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ನಡೆದಿದ್ದು ಹೊನ್ನಾವರ ತಾಲೂಕಿನ ವ್ಯಾಪ್ತಿಯಲ್ಲಿ ಇರುವುದರಿಂದ, ತಾಂತ್ರಿಕ ಕಾರಣಗಳಿಗಾಗಿ ಈ ಪ್ರಕರಣವನ್ನು ಸಾಗರದಿಂದ ಹೊನ್ನಾವರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಇದೀಗ ಹೊನ್ನಾವರ ಪೊಲೀಸರು ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಮುಂದಾಗಿದ್ದಾರೆ.

PREV
Read more Articles on
click me!

Recommended Stories

ಹಿರೇಬೆಣಕಲ್: 9ನೇ ಶತಮಾನದ ವೀರಗಲ್ಲು ಪತ್ತೆ, ಹುತಾತ್ಮನಾದ ವೀರನನ್ನು ಅಪ್ಸರೆಯರು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ!
ಇದೊಂದು ಅಪರೂಪದ ಕನಕಾಭಿಷೇಕ; ಉತ್ತರ ಕನ್ನಡ-ಸಿದ್ದಾಪುರದ ಗೋಳಿಕೈನಲ್ಲಿ 'ಮರಿಮಗ'ನನ್ನು ನೋಡಿದ ಅಜ್ಜ-ಅಜ್ಜಿಗೆ ಅದೆಷ್ಟು ಖುಷಿ!