Latest Videos

ಸರ್ಕಾರಿ ಆಸ್ತಿ ಸಂರಕ್ಷಣೆಯಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿ

By Kannadaprabha NewsFirst Published Jun 26, 2024, 4:10 PM IST
Highlights

ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿಗಳು ಇರುವ ಒಟ್ಟು 1,04,192 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳ ಪೈಕಿ 79,628 ಸ್ಥಳಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. 

ಕಾರವಾರ (ಜೂ.26): ಸರ್ಕಾರಿ ಭೂಮಿ ಅತಿಕ್ರಮಣವಾಗದಂತೆ ರಕ್ಷಣೆ ಮಾಡುವಲ್ಲಿ ಉತ್ತರ ಕನ್ನಡ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಸರ್ಕಾರಿ ಆಸ್ತಿಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಇವು ಖಾಸಗಿಯವರ ಪಾಲಾಗದಂತೆ ರಕ್ಷಿಸಿ, ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲ್ಯಾಂಡ್ ಬೀಟ್ ಆ್ಯಪ್ ಬಳಸಿಕೊಂಡು, ವಿವಿಧ ಜಮೀನುಗಳಲ್ಲಿರುವ ಸರ್ಕಾರಿ ಭೂಮಿಯನ್ನು ಜಿಯೋ ಫೆನ್ಸಿಂಗ್ ಮಾಡಿ, ರಕ್ಷಣೆ ಮಾಡುವ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರಗತಿ ಸಾಧಿಸಿದೆ.

ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿಗಳು ಇರುವ ಒಟ್ಟು 1,04,192 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳ ಪೈಕಿ 79,628 ಸ್ಥಳಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಈ ಆಸ್ತಿಗಳಿಗೆ ಜಿಯೋ ಫೆನ್ಸಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇದು ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯಾಗಿದೆ. ಈ ಜಮೀನುಗಳಲ್ಲಿರುವ ಸರ್ಕಾರಿ ಆಸ್ತಿಗಳ ಬಗ್ಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಗೆ ಲ್ಯಾಂಡ್ ಬಿಟ್ ಆ್ಯಪ್ ಮೂಲಕ ವರದಿ ನೀಡಿದ್ದು, ಈ ವರದಿಯನ್ನು ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರು ಅಂತಿಮಗೊಳಿಸುತ್ತಿದ್ದಾರೆ. 

ನೀವೇನು ಇಲ್ಲಿ ಪಿಕ್‌ನಿಕ್‌ ಬಂದಿರೇನ್ರಿ: ಅಧಿಕಾರಿಗಳ ಬೆವರಿಳಿಸಿದ ಸಚಿವ ಸಂತೋಷ್‌ ಲಾಡ್‌

ಜಿಲ್ಲೆಯಲ್ಲಿ ಇದುವರೆಗೆ 62,163 ಸರ್ಕಾರಿ ಆಸ್ತಿಗಳಿಗೆ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದ್ದು, ಈ ಮೂಲಕ ಜಿಲ್ಲೆಯ ಈ ಸರ್ಕಾರಿ ಆಸ್ತಿಗಳ ಸಂಪೂರ್ಣ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಹೊನ್ನಾವರ ತಾಲೂಕಿನಲ್ಲಿನ 14,863 ಸರ್ಕಾರಿ ಆಸ್ತಿಗಳಲ್ಲಿ, 12,282 ಆಸ್ತಿಗಳಿಗೆ ಜಿಯೋ ಫೆನ್ಸಿಂಗ್ ಕಾರ್ಯ ಮಾಡಲು ಸ್ಥಳ ಭೇಟಿ ನಡೆಸಿ ವರದಿ ನೀಡಿದೆ. 11,609 ಆಸ್ತಿಗಳಿಗೆ ಈಗಾಗಲೇ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ಕುಮಟಾ ತಾಲೂಕಿನ 14014 ಸರ್ಕಾರಿ ಆಸ್ತಿಗಳಲ್ಲಿ 11,722 ಆಸ್ತಿಗಳಿಗೆ, ಸಿದ್ದಾಪುರ ತಾಲೂಕಿನ 14458 ಆಸ್ತಿಗಳಲ್ಲಿ 9837 ಆಸ್ತಿಗಳಿಗೆ.

ಕಾರವಾರ ತಾಲೂಕಿನ 13828 ಆಸ್ತಿಗಳಲ್ಲಿ 7696 ಆಸ್ತಿಗಳಿಗೆ, ಶಿರಸಿ ತಾಲೂಕಿನ 14880 ಆಸ್ತಿಗಳಲ್ಲಿ 3907 ಆಸ್ತಿಗಳಿಗೆ, ಯಲ್ಲಾಪುರ ತಾಲೂಕಿನ 6228 ಆಸ್ತಿಗಳಲ್ಲಿ 4259 ಆಸ್ತಿಗಳಿಗೆ, ಅಂಕೋಲಾ ತಾಲೂಕಿನ 8145 ಆಸ್ತಿಗಳಲ್ಲಿ 4402 ಆಸ್ತಿಗಳಿಗೆ, ಭಟ್ಕಳ ತಾಲೂಕಿನ 6225 ಆಸ್ತಿಗಳಲ್ಲಿ 3919 ಆಸ್ತಿಗಳಿಗೆ, ಜೋಯಿಡಾ ತಾಲೂಕಿನ 5270 ಆಸ್ತಿಗಳಲ್ಲಿ 1675 ಆಸ್ತಿಗಳಿಗೆ, ಮುಂಡಗೋಡ ತಾಲೂಕಿನ 3743 ಆಸ್ತಿಗಳಲ್ಲಿ 2024 ಆಸ್ತಿಗಳಿಗೆ, ಹಳಿಯಾಳ ತಾಲೂಕಿನ 2154 ಆಸ್ತಿಗಳಲ್ಲಿ 1002 ಆಸ್ತಿಗಳಿಗೆ ಹಾಗೂ ದಾಂಡೇಲಿ ತಾಲೂಕಿನ 384 ಆಸ್ತಿಗಳಲ್ಲಿ 111 ಆಸ್ತಿಗಳಿಗೆ ಈಗಾಗಲೇ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದೆ.

ಈ ಲ್ಯಾಂಡ್ ಬೀಟ್ ಆ್ಯಪ್‌ನಲ್ಲಿ, ಕಂದಾಯ ಇಲಾಖೆಯ ವ್ಯಾಪ್ತಿಯ ಜಮೀನುಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ಲ್ಯಾಂಡ್ ಬೀಟ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ ಮಾಡಿದ್ದಾರೆ. ಸರ್ಕಾರಿ ಜಮೀನುಗಳ ಪೈಕಿ ಅರಣ್ಯ ಜಮೀನುಗಳು, ಇತರೆ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳು(ಭೂಸ್ವಾಧೀನ), ಶಾಲೆಗಳು ಮತ್ತು ಆಸ್ಪತ್ರೆಗಳು ಇತ್ಯಾದಿಗಳಂತಹ ಇತರ ಇಲಾಖೆಗಳ ಜಮೀನುಗಳನ್ನು ಒಳಗೊಂಡಿದ್ದು, ಇಂತಹ ಜಮೀನುಗಳನ್ನು ಕ್ಷೇತ್ರ ಪರಿಶೀಲನೆಗಾಗಿ ಮುಂದಿನ ದಿನಗಳಲ್ಲಿ ಆಯಾ ಇಲಾಖೆಗಳಿಗೆ ಕಳುಹಿಸಲು ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಲಾಗುತ್ತಿದೆ.

ಅರ್ಬನ್ ಹೀಟ್ ಐಲ್ಯಾಂಡ್: ನಗರಗಳ ಕಾಂಕ್ರೀಟ್ ಗೂಡುಗಳು ಮತ್ತು ಸುಡುಸೆಖೆಯ ರಾತ್ರಿಗಳು

ಅತಿಕ್ರಮಣಕ್ಕೆ ಬ್ರೇಕ್: ಮುಂದಿನ ದಿನಗಳಲ್ಲಿ ಸರ್ಕಾರಿ ಭೂಮಿಯ ಅತಿಕ್ರಮಣವಾಗದಂತೆ ತಡೆಯುವ ಮೂಲಕ ಸಾರ್ವಜನಿಕ ಉದ್ದೇಶಗಳಿಗೆ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

click me!