ಹೊನ್ನಾವರ ತೋಟದ ಬಾವಿಯಲ್ಲಿ ಯುವತಿ ಶವ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ!

Published : Oct 27, 2025, 06:52 PM IST
Honnavara Gayatri Keshava Gowda

ಸಾರಾಂಶ

ಹೊನ್ನಾವರದ ಚಿಕ್ಕನಕೋಡ ಗ್ರಾಮದಲ್ಲಿ ಗಾಯತ್ರಿ ಗೌಡ ಎಂಬ 25 ವರ್ಷದ ಯುವತಿ ಬಾವಿಗೆ ಹಾರಿ ಸಾವನ್ನಪ್ಪಿದ್ದಾಳೆ. ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಮಗಳ ಸಾವಿನ ಹಿಂದೆ ಬೇರೆ ಕಾರಣವಿರಬಹುದೆಂದು ತಾಯಿ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಉತ್ತರ ಕನ್ನಡ (ಅ.27): ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ಎಂಬಲ್ಲಿ ಭಾನುವಾರ ಸಂಜೆ ನಡೆದ ದುರಂತ ಘಟನೆಯೊಂದು ಕುಟುಂಬದಲ್ಲಿ ಆಕ್ರಂದನವನ್ನು ಸೃಷ್ಟಿಸಿದೆ. ತಮ್ಮ ಮನೆಯ ತೋಟದಲ್ಲಿರುವ ಬಾವಿಗೆ ಹಾರಿ ಗಾಯತ್ರಿ ಕೇಶವ ಗೌಡ (25) ಎಂಬ ಯುವತಿಯು ಸಾವಿಗೆ ಶರಣಾಗಿದ್ದಾಳೆ.

ಸಾವಿನ ಹಿಂದೆ ಅನುಮಾನದ ನೆರಳು

ಮೃತರಾದ ಗಾಯತ್ರಿ ಗೌಡ ಅವರು ತಮ್ಮ ಮನೆಯ ತೋಟದಲ್ಲಿರುವ ಬಾವಿಗೆ ಹಾರುವ ಮೂಲಕ ಬದುಕಿಗೆ ಮುಕ್ತಿ ಕಂಡುಕೊಂಡಿದ್ದಾರೆ. ಯುವತಿಯು ಸಾವಿಗೆ ಯಾವುದೇ ಸೂಕ್ತ ಕಾರಣವು ಲಭ್ಯವಾಗಿಲ್ಲವಾದರೂ, ಆಕೆ ಯಾವುದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಆದರೆ, ಮೃತ ಯುವತಿಯ ತಾಯಿ ಗಿರಿಜಾ ಗೌಡ ಅವರು ತಮ್ಮ ಮಗಳ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹ*ತ್ಯೆಯಲ್ಲ, ಬದಲಿಗೆ ಬೇರೆ ಯಾವುದಾದರೂ ಕಾರಣವಿರಬಹುದು ಅಥವಾ ಬೇರೆಯವರ ಪಾತ್ರವಿರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸ್‌ ಇಲಾಖೆಗೆ ಒತ್ತಾಯಿಸಿದ್ದಾರೆ. ಮಗಳ ಸಾವಿನ ಹಿಂದಿನ ಸತ್ಯಾಂಶ ಹೊರಬರಬೇಕು ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಪೊಲೀಸರಿಂದ ತನಿಖೆ ಆರಂಭ

ಈ ದುರಂತ ಘಟನೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಮೃತ ಯುವತಿಯಿಂದ ಯಾವುದೇ ಡೆತ್ ನೋಟ್ ದೊರೆತಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮೃತರ ತಾಯಿ ಗಿರಿಜಾ ಗೌಡ ಅವರ ದೂರಿನ ಆಧಾರದ ಮೇರೆಗೆ, ಯುವತಿ ಸಾವಿನ ಹಿಂದಿನ ನಿಖರ ಕಾರಣ ಮತ್ತು ಸಂಶಯದ ಮೂಲವನ್ನು ಕಂಡುಹಿಡಿಯಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಹೆಚ್ಚಿನ ವಿವರಗಳು ತಿಳಿಯಲಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈ ಘಟನೆ ಗ್ರಾಮದಲ್ಲಿ ತೀವ್ರ ದುಃಖ ಮತ್ತು ಆತಂಕ ಮೂಡಿಸಿದೆ.

PREV
Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!