ರಣಭೀಕರ ಮಳೆಯಿಂದ ಉತ್ತರ ಕನ್ನಡದಲ್ಲಿ ಇನ್ನೂ ತಗ್ಗದ ಸಾವಿನ ಸರಣಿ; ಸ್ಥಳದಲ್ಲೇ ಅಪ್ಪಚ್ಚಿಯಾದ ಸ್ಕೂಟರ್ ಸವಾರ

By Sathish Kumar KH  |  First Published Jul 24, 2024, 3:06 PM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ರಣಭೀಕರ ಮಳೆಯಿಂದ ಶಿರೂರು ಬಳಿ ಗುಡ್ಡ ಕುಸಿದು 10 ಜನರು ಸಾವನ್ನಪ್ಪಿದ ಘಟನೆ ಮಾಸುವ ಬೆನ್ನಲ್ಲಿಯೇ ಮತ್ತೊಂದು ಅವಘಢ ಸಂಭವಿಸಿದ್ದು, ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.


ಉತ್ತರ ಕನ್ನಡ (ಜು.24): ರಾಜ್ಯದ ಕರಾವಳಿ ಜಿಲ್ಲೆ ಉತ್ತರ ಕನ್ನಡದ ಶಿರೂರು ಬಳಿಯ ಗುಡ್ಡ ಕುಸಿದು 10 ಜನರು ದರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯಲ್ಲಿ ಇನ್ನೂ 3 ಜನರ ಮೃತದೇಹಗಳು ಪತ್ತೆಯಾಗಿಲ್ಲ. ಇಂಥದ್ದರಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಸ್ಕೂಟರ್ ಸವಾರ ಸಾವನ್ನಪ್ಪಿದ್ದಾನೆ.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಬಳಿಯ ಶಿರೂರು ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಈ ವೇಳೆ ಗುಡ್ಡದ ಪಕ್ಕದಲ್ಲಿದ್ದ ಶೆಡ್, ಒಂದು ಕಾರು, ಎರಡು ಲಾರಿಗಳ ಚಾಲಕರು ನಾಪತ್ತೆ ಆಗಿದ್ದರು. ಕಾರಿನಲ್ಲಿದ್ದ ಐದು ಜನರು, ಗ್ಯಾಸ್ ಟ್ಯಾಂಕರ್ ಹೊಂದಿದ್ದ ವಾಹನ ಚಾಲಕರ ಮೃತದೇಹಗಳು ಪತ್ತೆಯಾಗಿವೆ. ಇನ್ನು ಮನೆ ಕುಸಿತವೊಂದರಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹವೂ ಪತ್ತೆಯಾಗಿದೆ. ಆದರೆ, ಇನ್ನೂ ಮೂವರ ಮೃತದೇಹ ಪತ್ತೆಯಾಗಿಲ್ಲ. ರಾಜ್ಯ ವಿಪತ್ತು ನಿರ್ವಹಣೆ, ರಾಷ್ಟ್ರ ವಿಪತ್ತು ನಿರ್ವಹಣೆ, ಮಿಲಿಟರಿ ರಕ್ಷಣಾ ಪಡೆ ಹಾಗೂ ಕೇರಳದ ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡದಿಂದ ಶೋಧ ಕರ್ಯಾಚರಣೆ ನಡೆಯುತ್ತಿದೆ. ಆದರೆ, ಈಗ ಮತ್ತೊಂದು ಅವಘಡ ಸಂಭವಿಸಿದೆ.

Tap to resize

Latest Videos

undefined

ಮೊರಾರ್ಜಿ ವಸತಿ ಶಾಲೆಯಲ್ಲಿ ಹಲ್ಲಿ ಬಿದ್ದ ಪಲಾವ್‌ ತಿಂದು 45 ಮಕ್ಕಳು ಅಸ್ವಸ್ಥ; ಇಬ್ಬರ ಸ್ಥಿತಿ ಗಂಭೀರ

ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮರ ಬಿದ್ದು ಯುವಕ‌ ಸಾವನ್ನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ- ಶಿರಸಿ ರಸ್ತೆಯ ಬಾಚನಳ್ಳಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಯಲ್ಲಾಪುರದ ಯುವಕ ವಿನಯ ಗಾಡಿಗ(25) ಮೃತ ದುರ್ದೈವಿ ಆಗಿದ್ದಾನೆ. ಯಲ್ಲಾಪುರದ ಹಾಸಣಗಿ ಪಂಚಾಯತ್ ವ್ಯಾಪ್ತಿಯ ಕಬ್ಬಿನಗದ್ದೆ ನಿವಾಸಿಯಾಗಿದ್ದ ವಿನಯ್, ಯಲ್ಲಾಪುರದಿಂದ ಮಂಚಿಕೇರಿ ಕಡೆ ತೆರಳುತ್ತಿದ್ದನು. ಈ ವೇಳೆ ಸ್ಕೂಟಿಯಲ್ಲಿ ನಿಧಾನವಾಗಿ ಹೋಗುತ್ತಿದ್ದಾಗ ಧೊಪ್ಪನೇ ಮೈಮೇಲೆ ಮರ ಮುರಿದು ಬಿದ್ದಿದೆ. ಬೃಹತ್ ಗಾತ್ರದ ಮರದಡಿ ಸಿಲುಕಿದ ವಿನಯ್ ಹಾಗೂ ಸ್ಕೂಟರ್ ಅಪ್ಪಚ್ಚಿಯಾಗಿದೆ. ಈ ದುರ್ಘಟನೆಯಲ್ಲಿ ವಿನಯ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

25 ವರ್ಷದ ಮಹಿಳೆ ಮೇಲೆ ಗ್ಯಾಂಪ್ ರೇಪ್‌..! ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ

ಸ್ಕೂಟರ್ ಸವಾರನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇತರೆ ವಾಹನಗಳ ಸವಾರರು ದೃಶ್ಯ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಈ ರಸ್ತೆಯಲ್ಲಿ ಕೆಲವು ಹೊತ್ತು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಮರವನ್ನು ತುಂಡರಿಸಿ ತೆರವು ಮಾಡುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಘಟನೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

click me!