ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಅವರಿಗೆ ಅತ್ಯುತ್ತಮ ಚುನಾವಣಾಧಿಕಾರಿ ಪುರಸ್ಕಾರ/ ಬೆಂಗಳೂರಿನಲ್ಲಿ ರಾಜ್ಯಪಾಲರಿಂದ ಗೌರವ / ರಾಜ್ಯಮಟ್ಟದಲ್ಲಿ ಇಬ್ಬರಿಗೆ ಪುರಸ್ಕಾರ/ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ
ಉತ್ತರ ಕನ್ನಡ/ ಬೆಂಗಳೂರು(ಜ. 24) ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಚುನಾವಣಾ ಅಧಿಕಾರಿ ಪುರಸ್ಕಾರಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಪಾತ್ರರಾಗಿದ್ದಾರೆ. ಹರೀಶ್ ಕುಮಾರ್ ಅವರಿಗೆ ಜ. 25 ರಂದು ರಾಜ್ಯಪಾಲರು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಚುನಾವಣಾ ಆಯೋಗ ಸಂಸ್ಥಾಪನೆ ದಿನದ ನೆನಪಿಗೆ ಮತದಾರರ ದಿನಾಚರಣೆ ಮಾಡಲಾಗುತ್ತದೆ. ಪಾರದರ್ಶಕ ಚುನಾವಣೆ, ಮತದಾನ ಜಾಗೃತಿ ಅಂಶಗಳನ್ನು ಪರಿಗಣಿಸಿ ಪುರಸ್ಕಾರ ನೀಡಲಾಗುತ್ತದೆ. ರಾಜ್ಯಮಟ್ಟದಲ್ಲಿ ಇಬ್ಬರು ಪುರಸ್ಕಾರಕ್ಕೆ ಪಾತ್ರವಾಗಿದ್ದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರಿಗೆ ಮತದಾರರ ಜಾಗೃತಿ ಮೂಡಿಸುವ ವಿಚಾರದಲ್ಲಿ ಪುರಸ್ಕಾರ ದೊರೆತಿದ್ದರೆ ಹರೀಶ್ ಕುಮಾರ್ ಜಿಲ್ಲಾ ಮಟ್ಟದ ಅತ್ಯುತ್ತಮ ಚುನಾವಣಾಧಿಕಾರಿ ಪುರಸ್ಕಾರಕ್ಕೆ ಪಾತ್ರವಾಗಿದ್ದಾರೆ.
undefined
ಅಮೆರಿಕ ಅಧ್ಯಕ್ಷೀಯ ಚುನಾವಣೆ; ಏನೆಲ್ಲಾ ಆಗೋಯ್ತು?
ಏಷ್ಯಾನೆಟ್ ಸುವರ್ಣ ನ್ಯೂಸ್. ಕಾಂ ಹರೀಶ್ ಕುಮಾರ್ ಅವರಿಗೆ ಅಭಿನಂದನೆ ತಿಳಿಸಿತು. ಕಳೆದ ಎರಡು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇನೆ. ಲೋಕಸಭಾ ಚುನಾವಣೆ, ಯಲ್ಲಾಪುರ ಕ್ಷೇತ್ರದ ಉಪಚುನಾವಣೆ, ಪಶ್ಚಿಮ ಪದವಿಧರರ ಕ್ಷೇತ್ರದ ಚುನಾವಣೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಬಗೆಯನ್ನು ಹರೀಶ್ ಕುಮಾರ್ ತಿಳಿಸಿದರು.
ಆರ್ಗಾನೆಕ್ ಕೆಮೆಸ್ಟ್ರಿಯಲ್ಲಿ (ಜೈವಿಕ ರಸಾಯನಶಾಸ್ತ್ರ) ಎಂಎಸ್ಸಿ ಪಡೆದುಕೊಂಡ ಹರೀಶ್ ಕುಮಾರ್ ಮಂಗಳೂರು ವಿಶ್ವವಿದ್ಯಾನಿಯದಿಂದ ಆರ್ಗಾನಿಕ್ ಕೆಮೆಸ್ಟ್ರಿಯಲ್ಲಿಯೇ ಪಿಎಚ್‌ಡಿ ಮಾಡಿದ್ದಾರೆ. ಐಎಎಸ್ ಅಧಿಕಾರಿಯಾಗಿ ಹಲವಾರು ಕಡೆ ಕೆಲಸ ಮಾಡಿದ್ದಾರೆ.
ಭಟ್ಕಳದ ಎಸಿಯಾಗಿ, ಮಂಗಳೂರು-ಪೂತ್ತೂರು ವಿಭಾಗದ ಎಸಿಯಾಗಿ ಮೊದಲು ಕಾರ್ಯನಿರ್ವಹಿಸಿದರು. ಮಂಗಳೂರು ಸಿಟಿ ಕಾರ್ಪೋರೇಶನ್ ಕಮಿಷನರ್ ಆಗಿ ಕಾರ್ಯಮಾಡಿದರು. ಚಾಮರಾಜನಗರ ಜಿಲ್ಲಾ ಪಂಚಾಯಿತಿ ಸಿಇಒ ಆಗಿಯೂ ಸೇವೆ ಸಲ್ಲಿಸಿದರು. ಇದೀಗ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಹರೀಶ್ ಕುಮಾರ್ ವಿಶೇಷ ಆಸಕ್ತಿ ಉಳ್ಳವರು.
ಎಸಿಯಾಗಿದ್ದಾಗ ಚುನಾವಣಾ ನೋಂದಣಿ ಅಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಿದರು. ಜಿಲ್ಲಾಧಿಕಾರಿಗಳಿಗೆ ಆಯಾ ಜಿಲ್ಲೆಯ ಚುನಾವಣೆ ನಿರ್ವಹಿಸುವ ಹೊಣೆಗಾರಿಗೆ ನೀಡಲಾಗುತ್ತದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹರೀಶ್ ಕುಮಾರ್ ಅವರಿಗೆ ಪುರಸ್ಕಾರ ಸಂದಿದ್ದು ನಮ್ಮ ಕಡೆಯಿಂದಲೂ ಅಭಿನಂದನೆ ....
ರಾಷ್ಟ್ರೀಯ ಮತದಾರರ ದಿನದ ವಿಶೇಷ; ಭಾರತದ ಚುನಾವಣಾ ಆಯೋಗ ಸ್ಥಾಪನೆಯಾಗಿದ್ದು 1950ರ ಜನವರಿ 25ರಂದು. ಹೀಗಾಗಿ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ. ಮತದಾನ ಸಂವಿಧಾನಬದ್ಧವಾಗಿ ದೊರೆತಿರುವ ಹಕ್ಕು... ಪ್ರತಿ ಚುನಾವಣೆಯಲ್ಲಿಯೂ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಿಕೊಂಡೆ ಬರಲಾಗುತ್ತಿದೆ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ವೋಟಿಂಗ್ ಪರ್ಸಂಟೇಜ್ ಕಡಿಮೆಯಾಗುತ್ತಿದ್ದು ಅದನ್ನು ಹೆಚ್ಚಳ ಮಾಡಲು ಶ್ರಮವಹಿಸಲಾಗುತ್ತಿದೆ.
ಮುಖ್ಯ ಚುನಾವಣಾ ಆಯೋಗ ಜ 25 ರಂದು 11ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುತ್ತಿದ್ದು, 'ಮತದಾರರ ಸಬಲೀಕರಣ, ಜಾಗರೂಕತೆ, ಸುರಕ್ಷಿತ ಮತ್ತು ಮಾಹಿತಿ ನೀಡುವುದು' ಈ ವರ್ಷದ ದಿನಾಚರಣೆಯ ಘೋಷವಾಕ್ಯ. ನವದೆಹಲಿಯ ಪ್ರಮುಖ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪಾಲ್ಗೊಳ್ಳಲಿದ್ದಾರೆ.