ಗ್ರಹಣವನ್ನು ನೋಡಬಾರದು ಎಂಬ ನಂಬಿಕೆ ಇದೆ. 26ರಂದು ನಡೆಯುವ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಹಾಗೆಯೇ ಪ್ರತಿಯೊಬ್ಬರು ಸೂರ್ಯಗ್ರಹಣವನ್ನು 25 ಸೆಕೆಂಡ್‌ಗಳಷ್ಟುಮಾತ್ರ ವೀಕ್ಷಿಸಬಹುದು. ಗ್ರಹಣ ನೋಡುವಾಗ ನೀವು ಮಾಡಬೇಕಾಗಿರುವುದೇನು..? ಇಲ್ಲಿ ಓದಿ.
ಚಾಮರಾಜನಗರ(ಡಿ.22): ಡಿ. 26ರಂದು ಬೆಳಗ್ಗೆ 8.4 ಗಂಟೆಯಿಂದ 11.3 ಗಂಟೆವರೆಗೆ ಸೂರ್ಯಗ್ರಹಣ ನಡೆಯಲಿದ್ದು, ಪ್ರತಿಯೊಬ್ಬರು ಸೂರ್ಯಗ್ರಹಣವನ್ನು 25 ಸೆಕೆಂಡ್‌ಗಳಷ್ಟುಮಾತ್ರ ವೀಕ್ಷಿಸಬಹುದು. ಹೆಚ್ಚು ಕಾಲ ವೀಕ್ಷಣೆ ಮಾಡಿದರೆ ತೊಂದರೆಯಾಗಲಿದೆ ಎಂದು ಕರಾವಿಪ ರಾಜ್ಯ ಸಮಿತಿ ಉಪಾಧ್ಯಕ್ಷ ಎಸ್.ಎಂ. ಗುರುನಂಜಯ್ಯ ಎಚ್ಚರಿಕೆ ನೀಡಿದ್ದಾರೆ.
ನಗರದ ಡಿಡಿಪಿಐ ಸಭಾಂಗಣದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸೂರ್ಯೋತ್ಸವ ಅಂಗವಾಗಿ ಶಿಕ್ಷಕರಿಗೆ ಹಾಗೂ ವಿಜ್ಞಾನಾಸಕ್ತರಿಗೆ ಏರ್ಪಡಿಸಿದ್ದ ಕಂಕಣ ಸೂರ್ಯಗ್ರಹಣ ಕುರಿತು ಜಾಗೃತಿ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ.
ಸೂರ್ಯಗ್ರಣದ ಮಾಹಿತಿಗೆ ವೆಬ್‌ಸೈಟ್ ಆರಂಭ
ಸೂರ್ಯಗ್ರಹಣ ನೈಸರ್ಗಿಕ ಕ್ರಿಯೆಯಾದರೂ ಬರಿಗಣ್ಣಿನಲ್ಲಿ ನೋಡವುದರಿಂದ ಅಪಾಯ ಉಂಟಾಗುತ್ತದೆ. ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಬರಿಗಣ್ಣಿನ ಮೇಲೆ ಬಿದ್ದಾಗ ಕಣ್ಣಿನ ನ್ಯೂನತೆ ಅಲ್ಲದೇ ದೇಹದ ಒಳಭಾಗದಲ್ಲಿ ನ್ಯೂನತೆಗಳು ಉಂಟಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.
ರಾಜ್ಯದಲ್ಲಿ 60ರಿಂದ 70 ಸಾವಿರ ವಿದ್ಯಾರ್ಥಿಗಳು ಕಂಕಣ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡಬಹುದು. ಸೂರ್ಯಗ್ರಹಣ ನೋಡಬಾರದು ಎಂಬುದು ಮೂಢನಂಬಿಕೆ ಎಂಬ ಮನೋಭಾವನೆಯಿಂದ ಸೂರ್ಯಗ್ರಹಣವನ್ನು ನೋಡುವುದಕ್ಕೆ ಪ್ರಯತ್ನ ಮಾಡಬಾರದು ಇದರಿಂದ ನ್ಯೂನತೆಗಳಿಗೆ ತುತ್ತಾಗುವುದು ಕಂಡಿತ ಎಂದಿದ್ದಾರೆ.
ಅಪರೂಪಕ್ಕೆ ಸಂಭವಿಸಲಿದೆ ಕಂಕಣ ಗ್ರಹಣ; ಯಾರಿಗೆ ಕೆಡುಕು, ಯಾರಿಗೆ ಒಳಿತು?
ಸಂಪನ್ಮೂಲ ವ್ಯಕ್ತಿ ಮಂಡ್ಯ ಜಿಲ್ಲೆಯ ಶಿಕ್ಷಣ ಇಲಾಖೆಯ ವಿಜ್ಞಾನ ಪರಿವೀಕ್ಷಕ ಲೋಕೇಶ್ ಮಾತನಾಡಿ, ನೈಸರ್ಗಿಕವಾಗಿ ನಡೆಯುವ ಕ್ರಿಯೆ ಸೂರ್ಯಗ್ರಹಣವಾಗಿರುವುದರಿಂದ ಮುಂದಿನ ಸೂರ್ಯಗ್ರಹಣವನ್ನು ನೋಡಲು 2064ರ ವರೆಗೆ ಕಾಯಬೇಕು. ಆದ್ದರಿಂದ ಸುರಕ್ಷಿತ ವಿಧಾನದ ಮೂಲಕ ಸೂರ್ಯಗ್ರಹಣವನ್ನು ಡಿ. 26ರಂದು ನೋಡಿ ಸೂರ್ಯಗ್ರಹಣದ ಕುರಿತು ಅರಿತುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಪಿ. ಮಂಜುನಾಥ್, ಬಿಇಒ ಎನ್. ಲಕ್ಷ್ಮೇಪತಿ, ಕರಾವಿಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್, ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ವೀರಭದ್ರಸ್ವಾಮಿ, ಉಪಾಧ್ಯಕ್ಷ ಎಂ. ಭವಾನಿ ಶಂಕರ್, ಕಾರ್ಯದರ್ಶಿ ಬಿ.ಎನ್. ಶಂಕರ್, ಶಿಕ್ಷಣ ಇಲಾಖೆ ವಿಜ್ಞಾನ ವಿಷಯ ಪರಿವೀಕ್ಷಕ ಪಿ. ಶಂಕರ್ ಇದ್ದರು.
ಡಿ. 26ರಂದು ಕಂಕಣ ಸೂರ್ಯಗ್ರಹಣ ವೀಕ್ಷಣೆ ಹೇಗೆ?
1. ಸೂರ್ಯನನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು.
2. ಸೋಲಾರ್ ಫಿಲ್ಟರ್ ಅಥವಾ ಸೌರ ಕನ್ನಡಕಗಳನ್ನು ಬಳಸಿಯೇ ಸೂರ್ಯನನ್ನು ವೀಕ್ಷಿಸಬೇಕು.
3. ಗ್ರಹಣ ವೀಕ್ಷಣೆಗೆ ತಜ್ಞರ ಅಥವಾ ಮಾರ್ಗದರ್ಶಕರ ಸಲಹೆಗಳನ್ನು ಪಡೆಯಬೇಕು.
4. ಗ್ರಹಣ ವೀಕ್ಷಣೆಗೆ ಗುಣಮಟ್ಟದ ಸೋಲಾರ್ ಫಿಲ್ಟರ್‌ಗಳನ್ನು ಉಪಯೋಗಿಸಬೇಕು.
5. ಮಾರ್ಗದರ್ಶಕರ ಉಪಸ್ಥಿತಿಯಲ್ಲಿ ಮಕ್ಕಳು ಸೋಲಾರ್ ಪಿಲ್ಟರ್‌ಗಳನ್ನು ಬಳಸಿ ವೀಕ್ಷಿಸುವುದು ಸೂಕ್ತ.
6. ಸೂರ್ಯನನ್ನು ಕೇವಲ ಕೆಲವೇ ಸೆಕೆಂಡ್‌ಗಳಲ್ಲಿ ವೀಕ್ಷಿಸಬೇಕು. ಪದೇ ಪದೇ ವೀಕ್ಷಿಸಬಾರದು.
7. ಕಣ್ಣುಗಳ ಕಾಯಿಲೆ ಇರುವವರು ಸೂರ್ಯನನ್ನು ವೀಕ್ಷಿಸಬಾರದು.
8. ಸೋಲಾರ್ ಫಿಲ್ಟರ್‌ಗಳ ಫಿಲ್ಮ್ ಭಾಗವನ್ನು ಮುಟ್ಟಬಾರದು ಹಾಗೂ ಮಡಚಬಾರದು.
9. ಸೋಲಾರ್ ಫಿಲ್ಟರ್‌ಗಳು ಹಾಳಾಗಿದ್ದಲ್ಲಿ ಅವುಗಳನ್ನು ಬಳಸಿ ಸೂರ್ಯನನ್ನು ನೋಡಬಾರದು.Useful tips for rare solar eclipse