ನನ್ನ ₹50 ಸಾವಿರ ವೇತನ ಗೃಹಲಕ್ಷ್ಮೀ ಯೋಜನೆಗೆ ಬಳಕೆ: ರಾಯರಡ್ಡಿ

Published : Jul 26, 2023, 07:35 AM IST
ನನ್ನ ₹50 ಸಾವಿರ ವೇತನ ಗೃಹಲಕ್ಷ್ಮೀ ಯೋಜನೆಗೆ ಬಳಕೆ: ರಾಯರಡ್ಡಿ

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಗೃಹಲಕ್ಷ್ಮೇ’ ಯೋಜನೆಗೆ ನನ್ನ ಶಾಸಕ ಸ್ಥಾನದ ₹50 ಸಾವಿರ ವೇತನವನ್ನು ಪ್ರತಿ ತಿಂಗಳು ನೀಡುತ್ತೇನೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಯಲಬುರ್ಗಾ (ಜು.26) :  ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಗೃಹಲಕ್ಷ್ಮೇ’ ಯೋಜನೆಗೆ ನನ್ನ ಶಾಸಕ ಸ್ಥಾನದ .50 ಸಾವಿರ ವೇತನವನ್ನು ಪ್ರತಿ ತಿಂಗಳು ನೀಡುತ್ತೇನೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಕರಮುಡಿ ಗ್ರಾಮಗಳÜಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಪ್ರಚಾರ ಪಡೆಯುವ ಉದ್ದೇಶದಿಂದ ಈ ವೇತನ ನೀಡಿಲ್ಲ. ಎಲ್ಲವನ್ನು ಸರ್ಕಾರವೇ ನೀಡುವುದಾದರೆ ಅದರಲ್ಲಿ ನನ್ನದೊಂದು ಸಣ್ಣ ಸೇವೆ ಇರಲೆಂದು ಇದನ್ನು ನೀಡಿದ್ದೇನೆ ಎಂದರು.

ರಾಜ್ಯ ಸರ್ಕಾರ ದೊಡ್ಡ ಯೋಜನೆ ಜಾರಿಗೆ ತಂದಿದೆ. ನಾನು ಕೂಡ ಸರ್ಕಾರದೊಂದಿಗೆ ಕೈ ಜೋಡಿಸಲು ನನ್ನ ವೇತನವನ್ನು ಪ್ರತಿ ತಿಂಗಳು ಯೋಜನೆಗೆ ನೀಡುವಂತೆ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದ್ದೇನೆ. ಈ ಹಿಂದೆಯೂ ನಾನು ವೇತನ ಪಡೆದಿಲ್ಲ. ಆಗಲೂ ಬೇರೆ ಯೋಜನೆಗೆ ಬಿಟ್ಟುಕೊಟ್ಟದ್ದೆ ಎಂದರು.

 

Congress guarantee:  ಗೃಹಲಕ್ಷ್ಮೀ ಯೋಜನೆಗೆ ನೋಂದಣಿ; ಇಂದಿನಿಂದ ಪುನಃ ಆರಂಭ 

ಮುಕ್ತ ವಿಶ್ವವಿದ್ಯಾಲಯ ತರುವೆ:

ಈ ಭಾಗದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಕುಕನೂರು ಪಟ್ಟಣದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ .25 ಕೋಟಿ ವೆಚ್ಚದಲ್ಲಿ ಹೊಸದಾಗಿ ‘ಮುಕ್ತ ವಿಶ್ವವಿದ್ಯಾಲಯ’ ಸ್ಥಾಪನೆಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಬಹುಗ್ರಾಮ ಕುಡಿವ ನೀರಿನ ಯೋಜನೆ ಪೂರ್ಣಗೊಂಡಿದ್ದು ಸೆಪ್ಟಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಯಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ಕ್ಷೇತ್ರದ ಬಡ, ನಿವೇಶನ ರಹಿತರಿಗೆ ಮನೆ ಶೀಘ್ರದಲ್ಲೇ ಮಂಜೂರು ಮಾಡಿಸುತ್ತೇನೆ. ಆಯಾ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಯಾರಿಂದಲೂ ಲಂಚ ಪಡೆಯದೇ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಮನೆಗಳನ್ನು ವಿತರಿಸಬೇಕು ಎಂದು ಕಿವಿಮಾತು ಹೇಳಿದರು.

ಗೃಹಲಕ್ಷ್ಮೀ: ಸರ್ವರ್‌ ಸಮಸ್ಯೆ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ!

ತಹಸೀಲ್ದಾರ ವಿಠ್ಠಲ್‌ ಚೌಗಲೆ, ತಾಪಂ ಇಒ ಸಂತೋಷ ಪಾಟೀಲ್‌, ಅಧಿಕಾರಿಗಳಾದ ಪ್ರಾಣೇಶ ಹಾದಿಮನಿ, ಚಿದಂಬರಂ, ಅಮರೇಶ ರಡ್ಡಿ, ಚೆನ್ನಪ್ಪ ಪಟ್ಟಣಶೆಟ್ಟಿ, ಪದ್ಮನಾಭ ಕರ್ಣಂ, ರಿಜ್ವಾನ್‌ ಬೇಗಂ, ಸಚಿನ್‌ ಪಾಟೀಲ್‌, ಬಿ.ಎಂ. ಶಿರೂರ, ವೀರನಗೌಡ ಬಳೂಟಗಿ, ಎ.ಜಿ. ಭಾವಿಮನಿ, ರಾಮಣ್ಣ ಪ್ರಭಣ್ಣನವರ್‌, ಕೆರಿಬಸಪ್ಪ ನಿಡಗುಂದಿ, ಅಂದಾನಗೌಡ ಪೊಲೀಸ್‌ ಪಾಟೀಲ್‌, ಈರಪ್ಪ ಕುಡಗುಂಟಿ, ಸಂಗಣ್ಣ ಟೆಂಗಿನಕಾಯಿ, ಕಳಕಪ್ಪ ಕುರಿ, ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರಡ್ಡಿ, ಮಲ್ಲು ಜಕ್ಕಲಿ, ಈಶ್ವರ ಅಟಮಾಳಗಿ, ಶರಣಗೌಡ ಪಾಟೀಲ್‌, ಹುಲಗಪ್ಪ ಬಂಡಿವಡ್ಡರ್‌, ನಿಂಗಪ್ಪ ಕಮತರ, ಸುರೇಶ ದಾನಕೈ, ರಾಜಶೇಖರ ನಿಂಗೋಜಿ ಮತ್ತಿತರರು ಇದ್ದರು.

PREV
Read more Articles on
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?