
ಕೊಪ್ಪಳ(ಜು.01): 5 ಸಾವಿರ ವಿದ್ಯಾರ್ಥಿಗಳ ಪ್ರಸಾದ ಮತ್ತು ವಸತಿನಿಲಯ ನಿರ್ಮಾಣಕ್ಕೆ ಮುಂದಾಗಿರುವ ಗವಿಸಿದ್ದೇಶ್ವರ ಮಠಕ್ಕೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಅಮೆರಿಕದ ಬೋಸ್ಟನ್ ನಗರದಲ್ಲಿ 10ನೇ ತರಗತಿ ಓದುತ್ತಿರುವ ಗಂಗಾವತಿ ಮೂಲದ ದಿಶಾ ಬಸವರಾಜ ಮುದೇನೂರು, ತನ್ನ ಮೊದಲ ದುಡಿಮೆ ಹಣದಲ್ಲಿ .50 ಸಾವಿರ ನೀಡಿದ್ದಾಳೆ.
ಇನ್ನು ಯಲಬುರ್ಗಾ ತಾಲೂಕಿನ ಗುತ್ತೂರು ಗ್ರಾಮದ ಉದ್ಯೋಗ ಖಾತ್ರಿ ಯೋಜನೆಯ 105 ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ 35 ಸಾವಿರ ಸೇರಿ ಗ್ರಾಮಸ್ಥರ ಕಾಣಿಕೆ ಸೇರಿಸಿ 53895 ನೀಡಿದ್ದಾರೆ. ಬೆಳಗಾವಿಯ ಪಿಎಸ್‌ಐಯೊಬ್ಬರು ಹೆಸರು ಹೇಳದೆ 1 ಲಕ್ಷ ನೀಡಿದ್ದಾರೆ. ಆಟೋ ಚಾಲಕರೊಬ್ಬರು .1 ಲಕ್ಷ ನೀಡಿದ್ದರು. ಆತನ ಬಗ್ಗೆ ಪೂರ್ಣ ತಿಳಿದುಕೊಂಡ ಶ್ರೀಗಳು 5 ಸಾವಿರ ಸಾಕು, ಉಳಿದ 95 ಸಾವಿರವನ್ನು ನಿನ್ನ ಜೀವನಕ್ಕೆ ತೆಗೆದುಕೊ ಎಂದು ಮರಳಿಸಿದ್ದಾರೆ.
ಬಡ ಮಕ್ಕಳನ್ನ ಓದಿಸಲು ಗವಿಸಿದ್ಧ ನನ್ನ ಜೋಳಿಗೆಗೆ ಶಕ್ತಿ ಕೊಡಲಿ: ಕಣ್ಣೀರು ಹಾಕಿದ ಗವಿಮಠ ಶ್ರೀ
ಓದುತ್ತಿರುವಾಗಲೇ ದುಡಿಮೆಗೂ ಅಮೆರಿಕದಲ್ಲಿ ಅವಕಾಶವಿರುವುದರಿಂದ ದಿಶಾ ರಜಾ ದಿನಗಳಲ್ಲಿ ಮಕ್ಕಳಿಗೆ ಸ್ಕೇಟಿಂಗ್ ತರಬೇತಿ ನೀಡುವ ಶಾಲೆ ಪ್ರಾರಂಭಿಸಿದ್ದು, ಅದರ ಮೊದಲ ವರ್ಷದ ಆದಾಯವನ್ನು ಗವಿಮಠಕ್ಕೆ ನೀಡಿದ್ದಾಳೆ.