ನೆಲಕ್ಕುರಳಿದ ಶತಮಾನದ ಮರ, ಅಧಿಕಾರಿಗಳು ಭೇಟಿ, ಗ್ರಾಮಸ್ಥರಲ್ಲಿ ಆತಂಕ!

By Kannadaprabha News  |  First Published Jul 14, 2023, 11:13 AM IST

ಬುಧವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲೂಕಿನ ಸುಳೇಕಲ್‌ ಗ್ರಾಪಂ ವ್ಯಾಪ್ತಿಯ ತಿಪ್ಪನಾಳ ಗ್ರಾಮದ ಶತಮಾನಕ್ಕೂ ಹಳೆಯದಾದ ಮರದ ಕೊಂಬೆಗಳು ಬಿದ್ದಿದ್ದು, ಗಿಡದ ಮೇಲ್ಭಾಗದ ತುಂಡು ಉಳಿದುಕೊಂಡಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.


ಕನಕಗಿರಿ (ಜು.14):  ಬುಧವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲೂಕಿನ ಸುಳೇಕಲ್‌ ಗ್ರಾಪಂ ವ್ಯಾಪ್ತಿಯ ತಿಪ್ಪನಾಳ ಗ್ರಾಮದ ಶತಮಾನಕ್ಕೂ ಹಳೆಯದಾದ ಮರದ ಕೊಂಬೆಗಳು ಬಿದ್ದಿದ್ದು, ಗಿಡದ ಮೇಲ್ಭಾಗದ ತುಂಡು ಉಳಿದುಕೊಂಡಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.

ಮರದ ಕೊಂಬೆಗಳೆರೆಡು ಅಂಗಡಿ ಹಾಗೂ ಮನೆಗಳ ಮೇಲೆ ಬಿದ್ದಿದ್ದು,ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಡಬ್ಬಾ ಅಂಗಡಿ ನಜ್ಜುಗುಜ್ಜಾಗಿದ್ದರೇ ಮನೆಯ ಮೇಲ್ಚಾವಣಿಗೆ ಧಕ್ಕೆಯಾಗಿದೆ. ಸದರಿ ಮರದ ಎತ್ತರ ಕೊಂಬೆಯೊಂದು ಬೀಳದ ಪರಿಣಾಮ ಗ್ರಾಮದಲ್ಲಿ ಭಯದ ವಾತಾವರಣ ಮೂಡಿತ್ತು.ಮರವಿರುವ ಸುತ್ತ-ಮುತ್ತಲಿನ ಮನೆಯವರು ತಮ್ಮ ಮಕ್ಕಳೊಂದಿಗೆ ಗ್ರಾಮದ ಶರಣಬಸವೇಶ್ವರ ದೇವಸ್ಥಾನ ಹಾಗೂ ಸಂಬಂಧಿಕರ ಮನೆಯಲ್ಲಿ ವಾಸವಿದ್ದು ಜೀವ ಉಳಿಸಿಕೊಂಡಿದ್ದಾರೆ.

Tap to resize

Latest Videos

ಕೊಪ್ಪಳದಲ್ಲಿ ವಿಂಡ್‌ಮಿಲ್‌ ಕಂಪೆನಿಗಳಿಂದ ರೈತರಿಗೆ ವಂಚನೆ ?

ಅಧಿಕಾರಿಗಳ ಭೇಟಿ

ವಿಷಯ ತಿಳಿದ ಲೆಕ್ಕಾಧಿಕಾರಿ ಶಿವರಾಜ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಬುಧವಾರವೇ ತಡರಾತ್ರಿವರೆಗೂ ಗ್ರಾಮದಲ್ಲಿದ್ದುಕೊಂಡು ಮರವಿರುವ ಸುತ್ತಮುತ್ತ ಯಾರೂ ಹೋಗದಂತೆ ಜಾಗೃತಿ ಮೂಡಿಸಿದ್ದಾರೆ. ಮರುದಿನ ಬೆಳಗ್ಗೆ ಪಿಡಿಒ ಶಂಶೀರ ಅಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.ಮಧ್ಯಾಹ್ನದ ವೇಳೆಗೆ ಸಮಸ್ಯೆ ಸರಿದೂಗಿಸುವುದಾಗಿ ತಿಳಿಸಿದ್ದರು.ಅದರಂತೆ ಅರಣ್ಯ,ಕಂದಾಯ ಹಾಗೂ ಗ್ರಾಪಂ ಸಿಬ್ಬಂದಿ ಸ್ಥಳದಲ್ಲಿದ್ದುಕೊಂಡು ಅನುಭವಿ ಕಾರ್ಮಿಕರು ಅಳಿದುಳಿದ ಮರವನ್ನು ಯಾವುದೇ ಅವಾಂತರಕ್ಕೆ ಆಸ್ಪದ ನೀಡದೆ ನೆಲಕ್ಕುರುಳಿಸುವಲ್ಲಿ ಯಶಸ್ವಿಯಾದರು.

ವಿದ್ಯುತ್‌ ಸಂಪರ್ಕ ಕಡಿತ:

ಘಟನೆ ನಡೆದ ಸಮಯದಿಂದಲೂ ಗ್ರಾಮದ ಒಂದು ಭಾಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಮರದ ಎರಡು ಕೊಂಬೆಗಳು ಬಿದ್ದಿದ್ದರಿಂದ ವಿದ್ಯುತ್‌ ತಂತಿಗಳು ಹರಿದು ಹೋಗಿವೆ. ಸದರಿ ವಿದ್ಯುತ್‌ ಲೈನ್‌ ಸರಿಪಡಿಸುವ ತನಕ ಗ್ರಾಮದ ಒಂದು ಭಾಗಕ್ಕೆ ವಿದ್ಯುತ್‌ ಕಡಿತವಾದ್ದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಸ್ಥಳದಲ್ಲಿದ್ದ ಪಿಡಿಒ ಅವರು,ಕೂಡಲೇ ವಿದ್ಯುತ್‌ ಸಂಪರ್ಕ ಸರಿಪಡಿಸುವಂತೆ ಲೈನ್‌ಮೆನ್‌ಗೆ ಸೂಚಿಸಿದರು.

ಗ್ರಾಮದ ಹನುಮಂತಪ್ಪ ಗೌರಿಪುರ ಹಾಗೂ ವೀರಭದ್ರಪ್ಪ ಹುಲಿಯಾಪುರ ಎನ್ನುವವರ ಮನೆಯ ಮೇಲೆ ಬೃಹತ್‌ ಪ್ರಮಾಣದ ಮರದ ಕೊಂಬೆಗಳು ಬಿದ್ದಿದ್ದರ ಪರಿಣಾಮ ಮೇಲ್ಚಾವಣಿ ಹಾಗೂ ಗೋಡೆಗಳು ಬಿರುಕು ಬಿಟ್ಟಿವೆ.ಮನೆಯೊಳಗಿನ ಕಂಬಗಳು ಬಾಗಿದ ಸ್ಥಿತಿಯಲ್ಲಿರುವ ಕುರಿತು ಲೆಕ್ಕಾಧಿಕಾರಿ ಶಿವರಾಜ, ಕಂದಾಯ ನೀರಿಕ್ಷಕ ಬಸಿರುದ್ದೀನ್‌ ಕಚೇರಿಗೆ ವರದಿ ಸಲ್ಲಿಸಿರುವ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.

ಪರಿಹಾರ ಕೊಡಿ

ಗ್ರಾಮದ ದುರ್ಗಾದೇವಿಯ ಮರ ಬಿದ್ದಿದ್ದರಿಂದ ಎರಡು ಮನೆಗಳಿಗೆ ಹಾಗೂ ಅಂಗಡಿಗೆ ಹಾನಿಯಾಗಿದೆ.ಈ ಬಗ್ಗೆ ತಹಸೀಲ್ದಾರರ ನೇತೃತ್ವದಲ್ಲಿ ಪರಿಶೀಲಿಸಿ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡಬೇಕು.ಎನ್‌ಡಿಆರ್‌ಎಫ್‌ನಡಿ ಪರಿಹಾರ ನೀಡಲು ಅವಕಾಶ ಇದೆ. ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.

 

Karnataka budget 2023: ಕೊಪ್ಪಳದಲ್ಲಿ ತಲೆ ಎತ್ತಲಿದೆ ಜಾನಪದ ಲೋಕ!

ತಿಪ್ಪನಾಳ ಗ್ರಾಮಸ್ಥರು.

ಈ ವೇಳೆ ಅರಣ್ಯ, ಕಂದಾಯ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.

click me!