ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್ ನಿವಾಸಿ ಯುವಕನೊಬ್ಬನಿಗೆ ಕೋವಿಡ್-19 ದೃಢವಾಗಿದ್ದು, ಕಂದಾಯ ಇಲಾಖೆ, ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಉಪ್ಪಿನಂಗಡಿ(ಜೂ.17): ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್ ನಿವಾಸಿ ಯುವಕನೊಬ್ಬನಿಗೆ ಕೋವಿಡ್-19 ದೃಢವಾಗಿದ್ದು, ಕಂದಾಯ ಇಲಾಖೆ, ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಯುವಕನ ಮನೆ ಮತ್ತು ಇತರ 2 ಪ್ರಾಥಮಿಕ ಸಂಪರ್ಕ ಹೊಂದಿರುವ ಮನೆ ಸೇರಿದಂತೆ 3 ಮನೆ ಸೀಲ್‌ಡೌನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಮಂಗಳೂರಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 79 ಪಾಸಿಟಿವ್
ಕೊಳ್ಳೇಜಾಲ್ ನಿವಾಸಿ 24 ವರ್ಷ ಪ್ರಾಯದ ಯುವಕನಿಗೆ 15 ದಿನಗಳ ಹಿಂದೆ ಮೆದುಳು ಜ್ವರ ಕಾಣಿಸಿಕೊಂಡಿತ್ತು. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿದ್ದರೆನ್ನಲಾಗಿದೆ.
ಮತ್ತೆ 5 ದಿನಗಳ ಹಿಂದೆ ಮತ್ತೆ ಜ್ವರ ಕಾಣಿಸಿಕೊಂಡು, ಪುತ್ತೂರು ಆಸ್ಪತ್ರೆಗೆ ತೆರಳಿ ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದೀಗ ಪಾಸಿಟಿವ್ ವರದಿ ಬಂದಿದ್ದು, ಯುವಕನಿಗೆ ಕೋವಿಡ್-19 ದೃಢವಾಗಿರುವುದಾಗಿ ವರದಿಯಾಗಿದೆ.