ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಸ್ಫೋಟ ಸಂಭವಿಸಿದ್ದು, ಇದೇ ಮೊದಲ ಬಾರಿಗೆ ಅತಿಹೆಚ್ಚು- ಬರೋಬ್ಬರಿ 79 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಮಂಗಳವಾರ ರಾಜ್ಯದಲ್ಲಿ ಪತ್ತೆಯಾದ ಕೋವಿಡ್-19 ಸೋಂಕಿತರ ಪೈಕಿ ದ.ಕ. ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 368ಕ್ಕೆ ಏರಿಕೆಯಾಗಿದೆ.
ಮಂಗಳೂರು(ಜೂ.17): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಸ್ಫೋಟ ಸಂಭವಿಸಿದ್ದು, ಇದೇ ಮೊದಲ ಬಾರಿಗೆ ಅತಿಹೆಚ್ಚು- ಬರೋಬ್ಬರಿ 79 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಮಂಗಳವಾರ ರಾಜ್ಯದಲ್ಲಿ ಪತ್ತೆಯಾದ ಕೋವಿಡ್-19 ಸೋಂಕಿತರ ಪೈಕಿ ದ.ಕ. ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 368ಕ್ಕೆ ಏರಿಕೆಯಾಗಿದೆ. ಈ ನಡುವೆ 11 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
79 ಸೋಂಕಿತರ ಪೈಕಿ 75 ಮಂದಿ ಸೌದಿ ಅರೇಬಿಯಾದಿಂದ ಬಂದು ಕ್ವಾರಂಟೈನ್‌ನಲ್ಲಿದ್ದರು. ಮೂವರು ಮಹಾರಾಷ್ಟ್ರದಿಂದ ಬಂದವರು. ಆದರೆ ಸೋಂಕಿತರ ಸಂಪರ್ಕವಿಲ್ಲದ ಪುತ್ತೂರಿನ ನಿವಾಸಿಯೊಬ್ಬರಿಗೂ ಸೋಂಕು ತಗುಲಿರುವುದು ಆತಂಕ ಸೃಷ್ಟಿಸಿದೆ. ಪ್ರಸ್ತುತ ಇವರೆಲ್ಲರನ್ನೂ ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇಶದಲ್ಲಿ ಒಂದೇ ದಿನ 8122 ಮಂದಿಗೆ ಕೊರೋನಾ, 10400 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್!
ಬಹುತೇಕರು ಯುವಕರು: ಸೋಂಕಿತರಲ್ಲಿ ಬಹುತೇಕ ಮಂದಿ ಯುವಕರೇ ಆಗಿದ್ದಾರೆ. ಅದರಲ್ಲೂ ಅತೀಹೆಚ್ಚು 46 ಮಂದಿ 30 ವರ್ಷ ವಯಸ್ಸಿನೊಳಗಿನವರು ಆಗಿರುವುದು ಸಮಾಧಾನಕರ ಸಂಗತಿಯಾಗಿದೆ. 57 ಮಂದಿ ಪುರುಷರಿಗೆ ಕೊರೋನಾ ಅಂಟಿಕೊಂಡಿದ್ದರೆ, ಕೇವಲ 6 ಮಹಿಳೆಯರಲ್ಲಷ್ಟೇ ಪಾಸಿಟಿವ್ ಬಂದಿರುವುದು ವಿಶೇಷ. ಎಲ್ಲರೂ 57 ವರ್ಷದೊಳಗಿನವರೇ ಆಗಿದ್ದಾರೆ. ಸೌದಿಯಿಂದ ಆಗಮಿಸಿದ 2 ವರ್ಷದ ಮಗುವಿಗೆ ಕೂಡ ಸೋಂಕು ಹರಡಿದೆ.
ಸೌದಿ ಅರೇಬಿಯಾದಿಂದ ಜೂ.5, 7, 8, 11, 12ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಾರಿಟಿ ವಿಮಾನಗಳು ಬಂದಿದ್ದವು. ಪ್ರತಿಯೊಂದು ವಿಮಾನದಲ್ಲೂ ಸುಮಾರು 170ರಷ್ಟುಪ್ರಯಾಣಿಕರಿದ್ದರು. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಮಂದಿಗೆ ಸೋಂಕು ಹರಡುವ ಸಾಧ್ಯತೆಗಳು ದಟ್ಟವಾಗಿವೆ. ಉಳಿದಂತೆ ಸೋಂಕು ತಗುಲಿದ 24 ವರ್ಷದ ಮಹಿಳೆ ಜೂ.5ರಂದು ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ್ದು, ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. 20,23 ವರ್ಷದ ಇಬ್ಬರು ಯುವಕರು ಜೂ.15ರಂದು ಮುಂಬೈನಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದರು. ಆದರೆ ಪುತ್ತೂರಿನ 25 ವರ್ಷದ ವ್ಯಕ್ತಿಗೆ ಸೋಂಕು ಹೇಗೆ ತಗುಲಿದ್ದು ಎಂಬ ಸ್ಪಷ್ಟಮಾಹಿತಿ ಸಿಕ್ಕಿಲ್ಲ. ಈ ಪ್ರಕರಣವನ್ನು ಇನ್ಫೂ$್ಲ್ಯಯೆನ್ಜಾ ಲೈಕ್ ಇಲ್ನೆಸ್ ಎಂದು ವಿಭಾಗಿಸಲಾಗಿದೆ.
ಬೆಂಗ್ಳೂರಿಂದ ಊರು ತಲುಪ್ತಿದ್ದಂತೆ ನಾನು ಬರ್ತಿದ್ದೀನಿ ಅಪ್ಪಾ ಎಂದ ಮಗ ಅಪ್ಪ ಬಂದಾಗ ಇನ್ನಿಲ್ಲವಾಗಿದ್ದ..!
11 ಮಂದಿ ಡಿಸ್ಚಾಜ್‌ರ್: ಸಮಾಧಾನಕರ ಬೆಳವಣಿಗೆಯಲ್ಲಿ ಮಂಗಳವಾರ 11 ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾಜ್‌ರ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 174 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ. ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ 70 ವರ್ಷದ ವ್ಯಕ್ತಿಯೊಬ್ಬರು ಮಧುಮೇಹ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ 52 ವರ್ಷ ವಯಸ್ಸಿನ ವ್ಯಕ್ತಿ ಮಧುಮೇಹ ಮತ್ತು ಅರ್ಬುದ ರೋಗದಿಂದ ಬಳಲುತ್ತಿದ್ದು ಐಸಿಯುನಲ್ಲಿದ್ದಾರೆ.
ಗಲ್ಫ್ ಕನ್ನಡಿಗರೊಂದಿಗೆ ಕಿಚ್ಚ ಸುದೀಪ್, ಕಾರ್ಯಕ್ರಮ ಟ್ಯೂನ್ ಮಾಡಿ
ಮಂಗಳವಾರ ಒಟ್ಟು 217 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 79 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 84 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 329 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ.