ಐದು ದಶಕಗಳ ಬಳಿಕ ಚಿತ್ರದುರ್ಗ ಪ್ರವೇಶಿಸಿದ ಭದ್ರಾ ನೀರು! ಬಾಗಿನ ಅರ್ಪಣೆ ವೇಳೆ ಪಂಡಿತಾರಾಧ್ಯ ಶ್ರೀ ಯಡವಟ್ಟು!

Published : Sep 09, 2026, 10:31 AM ISTUpdated : Sep 09, 2026, 11:03 AM IST
Upper Bhadra Project Trial

ಸಾರಾಂಶ

ಐದು ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಕೊನೆಗೂ ಫಲಿಸಿದ್ದು, ಚಿತ್ರದುರ್ಗ ಜಿಲ್ಲೆಗೆ ನೀರು ಹರಿದಿದೆ. ಈ ಸಂಭ್ರಮದ ವೇಳೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಬಾಗಿನ ಅರ್ಪಿಸುವಾಗ 'ಬೇಗ ಸಾಯಲಿ' ಎಂದು ಹೇಳಿದ್ದು, ಈ ವಿಡಿಯೋ ವೈರಲ್ ಆಗಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಚಿತ್ರದುರ್ಗ (ಸೆ.9): ಭದ್ರಾ ಜಲಾಶಯದಿಂದ ಚಿತ್ರದುರ್ಗದ ಶಾಖಾ ಕಾಲುವೆಗೆ ಪ್ರಯೋಗಿಕವಾಗಿ ನೀರು ಹರಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದ ಸಂದರ್ಭದಲ್ಲಿ ಸಾಣೇಹಳ್ಳಿ ಬಳಿ ಕಾಲುವೆಗೆ ಬಾಗಿನ ಅರ್ಪಣೆ ಮಾಡಲಾಯಿತು.

ಬಾಗಿನ ಅರ್ಪಣೆ ವೇಳೆ ಪಂಡಿತಾರಾಧ್ಯ ಶ್ರೀ ಯಡವಟ್ಟು

ಐದು ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಈಗ ಫಲಿಸಿದೆ. ಭದ್ರಾ ಜಲಾಶಯದ ನೀರು ಕೊನೆಗೂ ಚಿತ್ರದುರ್ಗ ಪ್ರವೇಶಿಸಿದೆ ಎಂಥ ಸುಸಂದರ್ಭದಲ್ಲಿ ಬಾಗಿನ ಅರ್ಪಿಸುವ ವೇಳೆ ಪಂಡಿತಾರಾಧ್ಯ ಶ್ರೀಗಳು ಯಡವಟ್ಟು ಮಾಡಿರುವ ಘಟನೆ ನಡೆದಿದೆ.

ಬಾಗಿನ ಅರ್ಪಣೆ ವೇಳೆ ಪಂಡಿತಾರಾಧ್ಯ ಶ್ರೀ ಯಡವಟ್ಟು

ಭದ್ರಾ ಜಲಾಶಯದಿಂದ ಚಿತ್ರದುರ್ಗದ ಶಾಖಾ ಕಾಲುವೆಗಳಿಗೆ ಪ್ರವೇಶಿಸಿದಾಗ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಬಳಿ ಇರುವ ಕಾಲುವೆಗೆ ಮಹಿಳೆಯರಿಂದ ಬಾಗಿನ ಅರ್ಪಣೆ ಮಾಡಲಾಯಿತು. ಈ ವೇಳೆ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು ಮುತ್ತೈದೆ ಭಾಗ್ಯ ಕರುಣಿಸು ಎಂದು ಮಹಿಳೆಯರು ಬಾಗಿನ ಅರ್ಪಣೆ ವೇಳೆ, 'ಬೇಗ ಸಾಯಲಿ' ಎಂದ ಶ್ರೀಗಳು! ಸಾಣೇಹಳ್ಳಿ ಶ್ರೀಗಳು 'ಬೇಗ ಸಾಯಲಿ' ಎಂದಾಗ ಸ್ಥಳದಲ್ಲಿ ಮಹಿಳೆಯರು ನಕ್ಕಿದ್ದಾರೆ. ಶ್ರೀಗಳು ಯಾವ ಅರ್ಥದಲ್ಲಿ ಹೇಳಿದ್ದಾರೋ ತಿಳಿದಿಲ್ಲ. ಶ್ರೀಗಳ ಹೇಳಿಕೆಯಿಂದ ಮಹಿಳೆಯರು ನಕ್ಕಿರುವುದರಿಂದು ಅದೊಂದು ತಮಾಷೆಯಂತೆ ಕಾಣುತ್ತದೆ. ಶ್ರೀಗಳು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ‘ಬೇಗ ಸಾಯಲಿ’ ಎಂಬ ಹೇಳಿಕೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಣೆಹಳ್ಳಿ ಶ್ರೀಗಳ ನಡೆಗೆ ಕೆಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇಂಥ ಶುಭ ಸಂದರ್ಭದಲ್ಲಿ'ಸಾಯುವ' ಮಾತು ಬೇಕಿತ್ತಾ ಶ್ರೀಗಳಿಗೆ ಎಂದು ಪ್ರಶ್ನಿಸಿದ್ದಾರೆ.

ಐದಾರು ದಶಕಗಳ ಕನಸು ಭದ್ರಾ ಜಲಾಶಯ:

ಭದ್ರಾ ಜಲಾಶಯ ನಿನ್ನೆ ಮೊನ್ನೆಯದಲ್ಲ. ಇದಕ್ಕಾಗಿ ಐದಾರು ದಶಕಗಳ ಹೋರಾಟವೇ ನಡೆದಿದೆ. ಇದೀಗ ಭದ್ರಾ ಮೇಲ್ದಂಡೆಯ ಕನಸು ನನಸಾಗಿದೆ. ಇದು ಬಯಲು ಸೀಮೆಯ ಜನರ ಭಗಿರಥ ಪ್ರಯತ್ನ ಸಫಲವಾದಂತಾಗಿದೆ. ಬರಗಾಲದಿಂದ ತತ್ತರಿಸಿದ್ದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಪ್ರವೇಶಿಸುವತಿದ್ದಂತೆ ಪಾಪ ವಿಮೋಚನೆಯಾದಂತಾಗಿದೆ.

PREV
Read more Articles on
click me!

Recommended Stories

15 ವರ್ಷದ ಬಳಿಕ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗಲ್ಲಿ, ಗಲ್ಲಿಗೂ ಬಿಎಂಟಿಸಿ ಸೇವೆ; 200 ಮಿನಿಬಸ್ ಸಂಚಾರ!
ಉಪ್ಪಿನಂಗಡಿ ಪಂಚಾಯಿತಿಯಲ್ಲಿ ‘ಚಪ್ಪಲಿ’ ವಿವಾದ: ಇದು PDO ಅಧಿಕಾರಿಯ ಮದ ಎಂದು ಖಂಡನೆ