ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಯುಪಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಕರೆ

By Suvarna NewsFirst Published Mar 1, 2022, 12:50 AM IST
Highlights

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಒಡೆತನದ ತೇಜಸ್ ಅಂತಾರಾಷ್ಟ್ರೀಯ ವಸತಿ ಶಿಕ್ಷಣ ಸಂಸ್ಥೆಯು ಸೋಮವಾರ ಲೋಕಾರ್ಪಣೆಗೊಂಡಿತು.

ಬಾಗಲಕೋಟೆ (ಮಾ.01):  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murugesh Nirani) ಒಡೆತನದ ತೇಜಸ್ ಅಂತಾರಾಷ್ಟ್ರೀಯ ವಸತಿ ಶಿಕ್ಷಣ ಸಂಸ್ಥೆಯು (Tejas International School) ಸೋಮವಾರ ಲೋಕಾರ್ಪಣೆಗೊಂಡಿತು. ಬಾಗಲಕೋಟೆಯ (Bagalkot) ನವನಗರದಲ್ಲಿರುವ ತೇಜಸ್ ಇಂಟರ್ನ್ಯಾಷನಲ್ ಶಿಕ್ಷಣ ಅಂಗ ಸಂಸ್ಥೆಗಳ ಉದ್ಘಾಟನೆ  ಕಾರ್ಯಕ್ರಮವನ್ನು ಉತ್ತರ ಪ್ರದೇಶ ರಾಜ್ಯಪಾಲೆ ಹಾಗು ಗುಜರಾತ್ ಮಾಜಿ ಸಿಎಂ ಆನಂದಿಬೆನ್ ಪಟೇಲ್ (Anandiben Patel) ಉದ್ಘಾಟನೆ ಮಾಡಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.

ಯುಪಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮಾತನಾಡಿ,  ಮಕ್ಕಳ ಶಿಕ್ಷಣಕ್ಕೆ ಹೆಚ್ಚು ನೀಡಬೇಕು. ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಅತ್ಯವಶ್ಯಕ. ನಿರಾಣಿ ಅವ್ರು ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ನಿರಾಣಿ ಅವರ ಕುಟುಂಬದ ಸಾಧನೆ ಅಭಿನಂದನೀಯವಾಗಿದೆ. ಸಕ್ಕರೆ ಜೊತೆಗೆ ವಿವಿಧ ಪ್ರೊಡೆಕ್ಟ್ ಉತ್ಪಾದಿಸಿ ನಿರಾಣಿ ಗಮನ ಸೆಳೆದಿದ್ದಾರೆ ಎಂದರು.

Latest Videos

ಶ್ರೀಮಂತ ಮಕ್ಕಳಂತೆ ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಸ್ಕೂಲ್ ಮಕ್ಕಳನ್ನ ಗುಜರಾತಿಗೆ ಕರೆ ತನ್ನಿ. ಸದಾ೯ರ್ ವಲ್ಲಭಾಯ್ ಪಟೇಲ್ ರ ಮೂತಿ೯ ಸೇರಿದಂತೆ ಎಲ್ಲವನ್ನು ನೋಡಿ ಬರಲಿ. ನಾನು ಗುಜರಾತಿಗೆ ಬರಲು ಆಹ್ವಾನ ನೀಡುತ್ತೇನೆ. ಮಕ್ಕಳು ದೇಶದ ವಿವಿಧ ಪ್ರದೇಶದಲ್ಲಿ ಸಂಚಾರ ಮಾಡಿ,ಎಲ್ಲದು ಮಾಹಿತಿಯನ್ನು ಪಡೆದುಕೊಳ್ಳುವುದು ಅಗತ್ಯವಿದೆ ಆನಂದಿಬೆನ್ ಪಟೇಲ್ ಹೇಳಿದರು.

Puneeth Rajkumar: ಪುನೀತ್‌ ಹೆಸರಿನಲ್ಲಿ ಉಪಗ್ರಹ, ಆಕಾಶದಲ್ಲಿ ಅಪ್ಪು!

ಸಚಿವ ಮುರುಗೇಶ ನಿರಾಣಿ ಕಾರ್ಯಕ್ರಮದಲ್ಲಿ ಮಾತನಾಡಿ, ತಾವು ಬೆಳೆದು ಬಂದ ದಾರಿಯನ್ನು ವಿವರಿಸಿದರು. ನಿರಾಣಿ ಸಂಸ್ಥೆ ೭೨ ಸಾವಿರ ಜನರಿಗೆ ಕೆಲಸ ಕೊಟ್ಟಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿಯನ್ನಾಗಿಸಿಕೊಂಡು ಬಾಗಲಕೋಟೆಯಲ್ಲಿ ಶಿಕ್ಷಣ, ನೀರಾವರಿ ಹಾಗೂ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ನೂರು ಕಾರ್ಖಾನೆಗಳನ್ನು ನಿರ್ಮಿಸಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದ್ದೇವೆ ಎಂದರು.

ಈ ಸಂದರ್ಭದಲ್ಲಿ ದಾವಣಗೆರೆ ಸಂಸದ ಜಿ.ಎಂ. ಸಿದ್ದಶ್ವರ್ಹ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ  ಸೇರಿ ಹಲವರು ಭಾಗಿಯಾಗಿದ್ದರು.

ಸಚಿವ ನಿರಾಣಿ ಮನೆಗೆ ಭೇಟಿ: ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌ ಅವರು ಭಾನುವಾರ ಮುಧೋಳದಲ್ಲಿರುವ ಸಚಿವ ಮುರುಗೇಶ ನಿರಾಣಿ ಅವರ ನಿವಾಸಕ್ಕೆ ಆಗಮಿಸಿದರು. ಬಾಗಲಕೋಟೆ ನಗರದಲ್ಲಿ ಸೋಮವಾರ ನಡೆಯಲಿರುವ ತೇಜಸ್‌ ಅಂತಾರಾಷ್ಟ್ರೀಯ ಶಿಕ್ಷಣ ಸಮೂಹದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರಾದ ಆನಂದಿಬೆನ್‌ ಅವರು ಆಗಮಿಸಿದ್ದಾರೆ. 

Mekedatu Padayatre: ಕಾಂಗ್ರೆಸ್‌ ಮೇಕೆದಾಟು ನಡಿಗೆ 2ನೇ ಕಂತು ಅದ್ಧೂರಿ ಆರಂಭ

ಮುಧೋಳದಲ್ಲಿರುವ ಸಚಿವ ನಿರಾಣಿ ಅವರ ನಿವಾಸಕ್ಕೆ ಆಗಮಿಸುತ್ತಿದ್ದಂತೆ ನಿರಾಣಿ ಕುಟುಂಬದವರು ಆನಂದಿಬೆನ್‌ ಪಟೇಲ್‌ ಅವರಿಗೆ ಆರತಿ ಎತ್ತಿ ಸ್ವಾಗತ ಕೋರಿದರು. ಬಳಿಕ ಅವರು ನಿರಾಣಿ ಅವರ ಸಕ್ಕರೆ ಕಾರ್ಖಾನೆ ವೀಕ್ಷಿಸಿದರು. ನಂತರ ಸಚಿವರ ಕುಟುಂಬದೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದ ಆನಂದಿಬೆನ್‌ ಪಟೇಲ್‌ ಅವರು ಸಚಿವ ನಿರಾಣಿ ಅವರ ಸಕ್ಕರೆ ಕಾರ್ಖಾನೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಚಿವ ನಿರಾಣಿ, ಉದ್ಯಮಿ ಸಂಗಮೇಶ ನಿರಾಣಿ ಸೇರಿದಂತೆ ಕಾರ್ಖಾನೆಯ ಅಧಿಕಾರಿಗಳು ಕೂಡ ಹಾಜರಿದ್ದರು.

click me!