ಅಸ್ಪೃಶ್ಯತೆ ಇನ್ನೂ ಜೀವಂತವಿರುವುದು ನೋವಿನ ಸಂಗತಿ: ಪೂಜಾರಿ

Published : Nov 07, 2022, 01:10 PM ISTUpdated : Nov 07, 2022, 01:11 PM IST
ಅಸ್ಪೃಶ್ಯತೆ ಇನ್ನೂ ಜೀವಂತವಿರುವುದು ನೋವಿನ ಸಂಗತಿ: ಪೂಜಾರಿ

ಸಾರಾಂಶ

ನಾಟಕ ಕಲೆ ಜೀವಂತಿಕೆ ಮೂಲಕ ವ್ಯಕ್ತಿಗಳ ತಲುಪುವ ಏಕೈಕ ಮಾರ್ಗ ಸಾಣೆಹಳ್ಳಿ ರಾಷ್ಟ್ರೀಯ ನಾಟಕೋತ್ಸವದ 5 ನೇ ದಿನದ ಸಭಾಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

 ಹೊಸದುರ್ಗ (ನ.7) : ಜೀವಂತಿಕೆಯ ಮೂಲಕ ವ್ಯಕ್ತಿಗಳನ್ನು ತಲುಪುವ ಏಕೈಕ ಮಾರ್ಗ ನಾಟಕ ಕಲೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 5 ನೇ ದಿನ ಭಾನುವಾದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅಸ್ಪೃಶ್ಯತೆ ಹೋಗಲಾಡಿಸಲು ಸಂವಿಧಾನ ಅನೇಕ ಕಾನೂನುಗಳ ಕೊಟ್ಟಿದೆ. ಅಸ್ಪೃಶ್ಯತೆ ವಿರುದ್ಧ ಇಂದಿಗೂ ಅನೇಕ ಹೋರಾಟಗಳು ನಡೆಯುತ್ತಿವೆ. ಇಷ್ಟಾದರೂ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಮುಟ್ಟಲಾರದಂತಹ ಮನಸ್ಥಿತಿ ಇನ್ನೂ ಜೀವಂತವಾಗಿರುವುದು ನೋವಿನ ಸಂಗತಿ ಎಂದರು.

ಸಾಣೇಹಳ್ಳಿ ನಾಟಕೋತ್ಸವದಲ್ಲಿ ಕಾಳಿದಾಸನ ದೃಶ್ಯ ಕಾವ್ಯ- ಮೇಘದೂತ ದರ್ಶನ

ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕಾಲಘಟ್ಟದಲ್ಲಿ ವಾಕ್‌ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ದಮನಗೊಂಡು ಅದರ ವಿರುದ್ದ ಹೋರಾಟ ಮಾಡಿದವರೆಲ್ಲಾ ಜೈಲು ಸೇರಿದ್ದರು. ಈ ಸಮಯದಲ್ಲಿ ಮಾಸ್ಟರ್‌ ಹಿರಿಣ್ಣಯ್ಯ ಎನ್ನುವ ಕಲಾವಿದ ನಾಟಕದ ಮೂಲಕ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದು ಇತಿಹಾಸ. ಅಂತಹ ಶಕ್ತಿ ನಾಟಕಕ್ಕಿದೆ ಎಂದರು.

ದಲಿತ ಕುಟುಂಬದ ಪುಟ್ಟಬಾಲಕನೋರ್ವ ದೇವಾಲಯ ಪ್ರವೇಶಿಸಿದ್ದಕ್ಕೆ ಅವರ ಪೋಷಕರಿಗೆ ದಂಡ ಹಾಕುವ ಪ್ರವೃತ್ತಿ ಕಂಡು ನಿಜಕ್ಕೂ ನನ್ನ ಮನ ನೊಂದಿತ್ತು. ಆ ಬಾಲಕನ್ನು ದತ್ತು ತೆಗದುಕೊಂಡು ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಂಡಿದೆ. ಆ ಬಾಲಕ ವಿನಯ್‌ ಹೆಸರಿನಲ್ಲಿ ಜನಾಂದೋಲನ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಮಹಿಳೆ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಹೆಚ್‌ ಎಲ್‌ ಪುಷ್ಪ, ಅನಾದಿಕಾಲದಿಂದಲೂ ಧಾರ್ಮಿಕ ಕೇಂದ್ರಗಳು ಜನತೆ, ಪ್ರಭುತ್ವ ತಪ್ಪು ಮಾಡಿದಾಗ ತಿದ್ದುವ ಕೆಲಸವನ್ನು ಮಾಡಿವೆ. ಉತ್ತಮ ಸಾಮಾಜಿಕತೆಯನ್ನು ರೂಪಿಸಿಕೊಂಡು ಬರುತ್ತಿವೆ ಎಂದರು.

ಜನಪದ ಎಲ್ಲಾ ಸಾಹಿತ್ಯಗಳ ತಾಯಿ ಬೇರು, ಮಹಿಳೆಯ ಬದುಕು, ನೋವು, ಸಂಕಷ್ಟವನ್ನು ಕಟ್ಟಿಕೊಡುವ ಕೆಲಸ ಜನಪದದಲ್ಲಿದೆ. ಮಹಿಳೆ ಮತ್ತು ಸಾಹಿತ್ಯದ ಸಂಬಂಧÜ ಅನಾದಿ ಕಾಲದಿಂದಲೂ ಇದೆ. ಜನಪದರ ಕಾಲದಿಂದಲೂ ಸಾಹಿತ್ಯದ ಮೂಲ ಹೆಣ್ಣು ಆಗಿದ್ದಾಳೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಬದಲಾವಣೆ: ಪೂಜಾರಿ

ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್‌ ಲಿಂಗಮೂರ್ತಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಡಾ ಪುಷ್ಪಲತಾ, ಷಣ್ಮುಖಪ್ಪ, ಎನ್‌ಎಸ್‌ ಚಂದ್ರಶೇಖರ್‌, ಡಿಓ ಸದಾಶಿವ ದೇವಿಗೆರೆ, ಎಸ್‌ ಎನ್‌ ಸಿದ್ದರಾಮಪ್ಪ ಇದ್ದರು. ದೇವಿಗೆರೆ ಡಿಓ ಸದಾಶಿವ ಬರೆದಿರುವ ಈರ್ಷೆ ಕಥಾ ಸಂಕಲನ ಬಿಡುಗಡೆ ಮಾಡಲಾಯಿತು. ನಾರಾಯಣಘಟ್ಟರಚನೆಯ ಮಾಲತೇಶ ಬಡಿಗೇರಾ ನಿರ್ದೇಶನದ ಮೇಘದೂತ ದರ್ಶನಂ ನಾಟಕವನ್ನು ಬೆಂಗಳೂರಿನ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್‌ ಕಲಾವಿದರು ಅಭಿನಯಿಸಿದರು. ಪೋಟೋ, 6ಎಚ್‌ಎಸ್‌ಡಿ3 : ನಾಟಕೋತ್ಸವದಲ್ಲಿ ಮಕ್ಕಳು ಪ್ರದರ್ಶೀಸಿದ ವಚನ ನೃತ್ಯ ರೂಪಕ.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ