ಕಾರ್ಕಳ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ಅಕಾಲಿಕ ಮಳೆ; ಉರಿ ಬಿಸಿಲಿನಿಂದ ಬೇಸತ್ತಿದ್ದ ತಂಪೆರೆದ ವರುಣ

Published : Mar 15, 2026, 08:38 AM IST
Rain Alert

ಸಾರಾಂಶ

ಕಾರ್ಕಳ ಮತ್ತು ಬೆಳ್ತಂಗಡಿ ತಾಲೂಕಿನ ಹಲವೆಡೆ ಶನಿವಾರ ಗುಡುಗು ಸಹಿತ ಅಕಾಲಿಕ ಮಳೆ ಸುರಿದಿದೆ. ಕಳೆದ ಕೆಲವು ದಿನಗಳ ಉರಿ ಬಿಸಿಲಿನಿಂದ ಬಳಲಿದ್ದ ಜನರಿಗೆ ಈ ಮಳೆಯು ತಂಪೆರೆದಿದ್ದು, ವಾತಾವರಣವನ್ನು ತಂಪಾಗಿಸಿದೆ. 

ಮಂಗಳೂರು: ಕಳೆದ ಕೆಲವು ದಿನಗಳಿಂದ ಭಾರಿ ಉರಿ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಶನಿವಾರ ಸುರಿದ ಮಳೆ ತಂಪು ನೀಡಿದೆ. ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರುವಾಶೆ, ಮಾಳ, ನೂರಲ್ ಬೆಟ್ಟು ಹಾಗೂ ಬಜಗೋಳಿ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಕೆಲವೆಡೆ ಗುಡುಗು–ಮಿಂಚಿನೊಂದಿಗೆ ಮಳೆ ಸುರಿದಿದ್ದು, ವಾತಾವರಣ ತಂಪಾಗಿದೆ.

ಹೆಬ್ರಿ ತಾಲೂಕಿನ ಮುನಿಯಾಲು, ಅಂಡಾರು, ಮುದ್ರಾಡಿ, ಕಬ್ಬಿನಾಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆಗೆ ಏಕಾಏಕಿ ಮಳೆ ಆರಂಭವಾಗಿ ಕೆಲಕಾಲ ಜೋರಾಗಿ ಸುರಿಯಿತು.

ಉರಿ ಬಿಸಿಲಿನಿಂದ ಬೇಸತ್ತಿದ್ದ ತಂಪೆರೆದ ಮಳೆ

ಏಕಾಏಕಿ ಸುರಿದ ಮಳೆಯಿಂದಾಗಿ ಹಳ್ಳಿಗಳಲ್ಲಿ ಒಣಗಿಸಲು ಹಾಕಲಾಗಿದ್ದ ಅಡಿಕೆ ಕೆಲವೆಡೆ ಒದ್ದೆಯಾಗಿದ್ದು ಹಪತಪಿಸುತ್ತಿದ್ದರು ಕಂಡುಬಂದಿತ್ತು. ಉರಿ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಮಳೆ ಸ್ವಲ್ಪ ಮಟ್ಟಿನ ಹಿತ ನೀಡಿದೆ. ಕಳೆದ ಕೆಲ ದಿನಗಳಿಂದ ಹೆಚ್ಚಿದ ತಾಪಮಾನದಿಂದ ಜನಜೀವನ ತೊಂದರೆಗೊಳಗಾಗಿದ್ದರೆ, ಈ ಮಳೆಯು ವಾತಾವರಣವನ್ನು ತಂಪಾಗಿಸಿದೆ.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ಗೆ ತಡವಾಗಿ ಬಂದ, ಮಾತಿನ ಭರದಲ್ಲಿ 'ಬಾಂಬ್ ಇದ್ರೆ..' ಅಂದ, ಖ್ಯಾತ ಗಾಯಕ ಅರೆಸ್ಟ್!

ಗುಡುಗು ಸಿಡಿಲು ಇಲ್ಲದೆ ಉತ್ತಮ ಮಳೆ

ಬೆಳ್ತಂಗಡಿ ವರದಿ: ಅಕಾಲಿಕ ಮಳೆ ಬೆಳ್ತಂಗಡಿ ತಾಲೂಕಿನ ಉಜಿರೆ, ಧರ್ಮಸ್ಥಳದಲ್ಲಿ ಶನಿವಾರ ಸಂಜೆ ಸುರಿದಿದೆ. ಮುಂಡಾಜೆ, ಗುರುವಾಯನಕೆರೆ ಮೊದಲಾದೆಡೆ ಹನಿ ಹನಿಯಾಗಿ ಬಿದ್ದಿದೆ. ಉಜಿರೆ, ಧರ್ಮಸ್ಥಳದಲ್ಲಿ ಸುಮಾರು ಅರ್ಧ ಗಂಟೆ ಗುಡುಗು ಸಿಡಿಲು ಇಲ್ಲದೆ ಉತ್ತಮ ಮಳೆ ಸುರಿದಿದೆ. ಗುರುವಾಯನಕರೆ ಪ್ರದೇಶದಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು ಬಳಿಕ ಮಳೆ ಸುರಿದಿದೆ. ಕಾಜೂರು-ಕಿಲ್ಲೂರು ಕಡೆ ಗುಡುಗು ಸಿಡಿಲು ಮಾತ್ರ ಇತ್ತು. ಶುಕ್ರವಾರ ಸಂಜೆ ನಾರಾವಿ ಸುತ್ತಮುತ್ತ ಉತ್ತಮ ಮಳೆ ಸುರಿದಿದೆ.

ಇದನ್ನೂ ಓದಿ: Belagavi: ಗೃಹಲಕ್ಷ್ಮಿಯಿಂದ ಬದುಕು ಕಟ್ಟಿಕೊಂಡ ಮಹಿಳೆಯರು; ಶಕ್ತಿ ಯೋಜನೆಯ ಸದ್ಬಳಕೆ

 

 

PREV
Read more Articles on
click me!

Recommended Stories

ಬೆಂಗಳೂರು ಏರ್‌ಪೋರ್ಟ್‌ಗೆ ತಡವಾಗಿ ಬಂದ, ಮಾತಿನ ಭರದಲ್ಲಿ 'ಬಾಂಬ್ ಇದ್ರೆ..' ಅಂದ, ಖ್ಯಾತ ಗಾಯಕ ಅರೆಸ್ಟ್!
ಇತಿಹಾಸ ಪುಟ ಸೇರಲಿದೆ ಬೆಳ್ತಂಗಡಿ ಸೋಮಾವತಿ ಸೇತುವೆ; 70 ವರ್ಷವಾದರೂ ಶಿಥಿಲವಾಗಿಲ್ಲ