Bengaluru: ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!

Published : Mar 15, 2026, 08:00 AM IST
Bengaluru Uber

ಸಾರಾಂಶ

ಬೆಂಗಳೂರಿನಲ್ಲಿ ಪಾರ್ಟಿ ಮುಗಿಸಿ ಉಬರ್ ಕ್ಯಾಬ್‌ನಲ್ಲಿ ಮನೆಗೆ ಮರಳುತ್ತಿದ್ದ ಪ್ರಯಾಣಿಕ ನಿದ್ರೆಗೆ ಜಾರಿದ್ದಾರೆ. ಇದೇ ಸಮಯ ಸಾಧಿಸಿದ ಚಾಲಕ, ಪ್ರಯಾಣಿಕನ ಚಿನ್ನಾಭರಣ ಹಾಗೂ ಐಪೋನ್ ದೋಚಿ, ಮಾರ್ಗ ಮಧ್ಯದಲ್ಲೇ ಇಳಿಸಿ ಪರಾರಿಯಾಗಿದ್ದಾನೆ. 

ಬೆಂಗಳೂರು: ನಿದ್ರೆಗೆ ಜಾರಿದ ಪ್ರಯಾಣಿಕನಿಂದ ಚಿನ್ನಾಭರಣ ಹಾಗೂ ಐಪೋನ್ ದೋಚಿ ಮಾರ್ಗ ಮಧ್ಯದಲ್ಲಿಯೇ ಕ್ಯಾಬ್‌ನಿಂದ ಇಳಿಸಿ ಉಬರ್ ಚಾಲಕನೊಬ್ಬ ಪರಾರಿಯಾಗಿರುವ ಘಟನೆ ನಗರ ಹೊರ ವಲಯದಲ್ಲಿ ನಡೆದಿದೆ.

ಈ ಬಗ್ಗೆ ಆ‍ವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ದೂರು ನೀಡಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಉಬರ್ ಚಾಲಕನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ತಮ್ಮ ಸ್ನೇಹಿತರ ಜತೆ ರಾತ್ರಿ ಪಾರ್ಟಿ ಮುಗಿಸಿ ಸಂತ್ರಸ್ತ ಮನೆಗೆ ಮರಳುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ದೂರಿನ ವಿವರ

ಇತ್ತೀಚೆಗೆ ತಮ್ಮ ಐವರು ಸ್ನೇಹಿತರ ಜತೆ ಬೂದಿಗೆರೆ ಸಮೀಪದ ಡಾಬಾದಲ್ಲಿ ರಾತ್ರಿ ದೂರುದಾರರು ಪಾರ್ಟಿ ಮಾಡಿದ್ದರು. ನಂತರ ಅಲ್ಲಿಂದ ಮನೆಗೆ ಮರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕ್ಯಾಬ್ ಚಾಲಕ, ಸಂತ್ರಸ್ತನನ್ನು ಕ್ಯಾಬ್ ಹತ್ತಿಸಿಕೊಂಡು ಹೊರಟನು. ಅಲ್ಲದೆ ಆತನಿಂದ ಮುಂಗಡ ಹಣ ಸಹ ಪಡೆದಿದ್ದ. ‘ಪಾರ್ಟಿ’ ಪರಿಣಾಮ ಕ್ಯಾಬ್ ಹತ್ತಿದ ಕೆಲವೇ ನಿಮಿಷಗಳಲ್ಲಿ ದೂರುದಾರರು ನಿದ್ರೆಗೆ ಜಾರಿದ್ದಾರೆ. ಆಗ ಕಾಟಂನಲ್ಲೂರಿನ ಓರಿಯನ್‌ ಅಪ್‌ಟೌನ್‌ ಬಳಿ ಕ್ಯಾಬ್‌ ನಿಲ್ಲಿಸಿದ ಆತ, ನಿಮ್ಮ ಜಾಗ ಬಂದಿದೆ ಎಂದು ದೂರುದಾರನನ್ನು ಕ್ಯಾಬ್‌ನಿಂದಿಳಿಸಿ ಹೊರಟಿದ್ದಾನೆ.

ಕ್ಯಾಬ್ ಚಾಲಕ ತೆರಳಿದ ಕೆಲ ಹೊತ್ತಿನ ಬಳಿಕ ಮೊಬೈಲ್ ಹಾಗೂ ತಾವು ಧರಿಸಿದ್ದ ಚಿನ್ನದ ಸರ ಕಳವಾಗಿರುವುದು ಅರಿವಿಗೆ ಬಂದಿದೆ. ಕೊನೆಗೆ ಅದೇ ಮಾರ್ಗದಲ್ಲಿ ಬಂದ ಸಾರ್ವಜನಿಕರೊಬ್ಬರ ನೆರವು ಪಡೆದು ದೂರುದಾರರು ಮನೆ ಸೇರಿದ್ದಾರೆ. ಮರುದಿನ ಆವಲಹಳ್ಳಿ ಠಾಣೆಗೆ ತೆರಳಿ ಅವರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕಿ ಚಾಲಕ!

ನಿಗದಿತ ಜಾಗ ತಲುಪುವ ಮುನ್ನವೇ ಪ್ರಯಾಣ ಅಂತ್ಯಗೊಳಿಸಿದರೆ ಕಂಪನಿಗೆ ಗೊತ್ತಾಗಲಿದೆ ಎಂದು ಜಾಗ್ರತೆ ವಹಿಸಿದ ಚಾಲಕಿ ಚಾಲಕ, ಕಾಟಂನಲ್ಲೂರಿನ ಬಳಿಯೇ ಪ್ರಯಾಣಿಕನನ್ನು ಇಳಿಸಿ ಡ್ರಾಪ್‌ ಲೊಕೇಶನ್‌ ಆಧರಿಸಿ ಮನೆ ಬಳಿ ತೆರಳಿ ಮರಳಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ತಮ್ಮ ಪ್ರತಿ ಕ್ಯಾಬ್‌ನ ಪ್ರಯಾಣದ ಟ್ರಿಪ್‌ಗಳ ಪೂರ್ಣ ಮಾಹಿತಿ ಕಂಪನಿ ಬಳಿ ಇರಲಿದೆ. ಪ್ರಯಾಣದ ಲೊಕೇಶನ್‌ ಕೂಡ ಟ್ರ್ಯಾಕ್‌ನಲ್ಲಿರುತ್ತದೆ. ಹೀಗಾಗಿ ಒಂದು ಪ್ರಯಾಣದ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆದರೆ ಕಂಪನಿಗೆ ತಕ್ಷಣವೇ ಮಾಹಿತಿ ರವಾನೆಯಾಗುವ ವ್ಯವಸ್ಥೆ ಇದೆ. ಈ ಬಗ್ಗೆ ತಿಳಿದುಕೊಂಡೇ ಚಾಲಕ, ದಾರಿ ಮಧ್ಯೆ ಗ್ರಾಹಕನನ್ನು ಇಳಿಸಿದರೂ ಅವರ ಮನೆ ಬಳಿ ಹೋಗಿ ಮರಳಿದ್ದಾನೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Mandya: ಶ್ರೀರಂಗಪಟ್ಟಣದ ಖಾಸಗಿ ಹೋಟೆಲ್‌ ಟಾಯ್ಲೆಟ್‌ನಲ್ಲಿ ಮೊಬೈಲಿಟ್ಟು ವಿಡಿಯೋ ರೆಕಾರ್ಡಿಂಗ್: ಸಪ್ಲೈಯರ್ ಬಂಧನ

ಹೊರ ರಾಜ್ಯದ ಚಾಲಕ

ಈ ಕೃತ್ಯ ಎಸಗಿದ ಬಳಿಕ ತನ್ನ ಮೊಬೈಲ್ ಅನ್ನು ಸ್ವಿಚ್ಡ್ ಆಫ್ ಮಾಡಿಕೊಂಡು ಚಾಲಕ ಪರಾರಿಯಾಗಿದ್ದಾನೆ. ಆತ ಹೊರ ರಾಜ್ಯದವನಾಗಿದ್ದು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯ ಎಸಗಿದ ಬಳಿಕ ತನ್ನ ಮೊಬೈಲ್ ಅನ್ನು ಸ್ವಿಚ್ಡ್ ಆಫ್ ಮಾಡಿಕೊಂಡು ಚಾಲಕ ಪರಾರಿಯಾಗಿದ್ದಾನೆ. ಆತ ಹೊರ ರಾಜ್ಯದವನಾಗಿದ್ದು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಯ್, ಹೆಲೋ ಅಂತಾಳೆ, ಲಾಡ್ಜ್‌ಗೆ ಕರೀತಾಳೆ; ಸ್ನಾನ ಮಾಡಿ ಅಂತ ಬಟ್ಟೆ ಬಿಚ್ಚಿಸ್ತಾಳೆ!

PREV
Read more Articles on
click me!

Recommended Stories

Belagavi: ಗೃಹಲಕ್ಷ್ಮಿಯಿಂದ ಬದುಕು ಕಟ್ಟಿಕೊಂಡ ಮಹಿಳೆಯರು; ಶಕ್ತಿ ಯೋಜನೆಯ ಸದ್ಬಳಕೆ
Mandya: ಹೋಟೆಲ್‌ ಟಾಯ್ಲೆಟ್‌ನಲ್ಲಿ ಮೊಬೈಲಿಟ್ಟು ವಿಡಿಯೋ ರೆಕಾರ್ಡಿಂಗ್: ಸಪ್ಲೈಯರ್ ಬಂಧನ