ದೇಶದ್ರೋಹಿಗಳಿಂದ ವಿವಿ ರಕ್ಷಿಸಬೇಕಿದೆ: ಸುರೇಶ್ ಅಂಗಡಿ!

By Web DeskFirst Published Oct 24, 2018, 5:17 PM IST
Highlights

ಕಿತ್ತೂರು ಉತ್ಸವದಲ್ಲಿ ಬಿಜೆಪಿ ಸಂಸದ ಸುರೇಶ ಅಂಗಡಿ ವಿವಾದಾತ್ಮಕ ಹೇಳಿಕೆ! ಸತೀಶ್ ಜಾರಕಿಹೋಳಿ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಅಂಗಡಿ! ರಾಣಿ ಚೆನ್ನಮ್ಮ ವಿವಿಯನ್ನು ದೇಶದ್ರೋಹಿಗಳಿಂದ ರಕ್ಷಿಸಬೇಕಿದೆ ಎಂದ ಸಂಸದ! ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾನೀ ಚೆನ್ನಮ್ಮ ಹೆಸರಡಲು ಶಿಫಾರಸ್ಸು
 

ಬೆಳಗಾವಿ(ಅ.24): ಕಿತ್ತೂರು ಉತ್ಸವದಲ್ಲಿ ಬಿಜೆಪಿ ಸಂಸದ ಸುರೇಶ ಅಂಗಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಣಿ ಚೆನ್ನಮ್ಮ ವಿವಿಯನ್ನು  ಬಿಜೆಪಿ ಕೇಸರಿಕರಣ ಮಾಡುತ್ತಿದೆ ಎಂಬ ಸತೀಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡುತ್ತಾ, ದೇಶದ್ರೋಹಿಗಳು ವಿವಿ ಆವರಣದಲ್ಲಿ ಕಾಲಿಡದಂತೆ ನೋಡಿಕೊಳ್ಳಬೇಕಿದೆ ಎಂದು ಸುರೇಶ್ ಅಂಗಡಿ ಹೇಳಿದ್ದಾರೆ. 

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಸಂರಕ್ಷಿಸಬೇಕಿದೆ. ರಾಣಿ ಚೆನ್ನಮ್ಮಳ ಪರಿಕಲ್ಪನೆ ನೀಡುವ ಕೆಲಸ ವಿವಿಯಲ್ಲಿ ಆಗಬೇಕಿದೆ. ಆದರೆ ಕೆಲವೊಂದು ದುಷ್ಟಶಕ್ತಿಗಳು, ದೇಶದ್ರೋಹಿಗಳು. ಯುನಿವರ್ಸಿಟಿಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಅಂಗಡಿ ಗುಡುಗಿದ್ದಾರೆ.

"

ದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ ನಕ್ಸಲೈಟ್ಸರು ಆತಂಕ ಸೃಷ್ಟಿ ಮಾಡಿದ್ದರು. ಅದೇ ರೀತಿ ಬೆಳಗಾವಿ ಚೆನ್ನಮ್ಮ ವಿವಿಯಲ್ಲೂ ಆತಂಕ ಸೃಷ್ಟಿಸುವ ಸಂಭವಗಳಿವೆ ಎಂದು ಸಂಸದರ ಆತಂಕ ವ್ಯಕ್ತಪಡಿಸಿದ್ದಾರೆ. 

ಅದರಲ್ಲೂ ದೇಶದಲ್ಲಿ ಅರ್ಬನ್ ನಕ್ಸಲೈಟ್ಸಗಳಿಂದ ದೇಶದ ಭದ್ರತೆಗೆ ಗಂಡಾಂತರ ಎದುರಾಗಿದ್ದು, ಯುವಕರನ್ನ ದಾರಿ ತಪ್ಪಿಸುವ ಕೆಲಸ ಆಗದಂತೆ ಎಚ್ಚರವಹಿಸಬೇಕಿದೆ ಎಂದು ಸಂಸದ ಅಂಗಡಿ ಜಾರಕಿಹೊಳಿಗೆ ಎದುರೇಟು ನೀಡಿದ್ದಾರೆ.

ಇಷ್ಚೇಅಲ್ಲದೇ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ವಿಮಾನ ನಿಲ್ದಾಣ ಎಂದು ಹೆಸರಿಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಪಾರಸ್ಸು ಕಳುಹಿಸಿದರೆ, ನಾವು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚೆನ್ನಮಳ ಹೆಸರು ನಾಮಕರಣ ಮಾಡುವಂತೆ ಕ್ರಮಕೈಗೊಳ್ಳುತ್ತೇವೆ ಎಂದು ಸಂಸದರು ಭರವಸೆ ನೀಡಿದರು.

click me!