
ಬೆಳಗಾವಿ, (ಅ.02) : ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಜಾರಕಿಹೊಳಿ ಬೆಂಬಲಿಗರ ದಾಂಧಲೆಗೆ ಬೆಳಗಾವಿ ಸಂಸದ ಸುರೇಶ್ ಅಂಗಡಿ ಪ್ರತಿಕ್ರಿಯೆ ನೀಡಿದ್ದು, ಸತೀಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.
ನಿನ್ನೆ ಆರ್ ಸಿ ಯು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಜೆ ಎಂಓ ಮಾಡಲಿಕ್ಕೆ ಹೊರಟಿದ್ದಾರೆ. ಸತೀಶ ಜಾರಕಿಹೋಳಿ ಅವರ ಬೆಂಬಲಿಗರ ಮೆಲೆ ಕ್ರಮ ತೆಗೆದುಕ್ಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯಕ್ಕೆ ಈ ಅಂಡರ್ ಪಾಸಿಂಗ್ ರಸ್ತೆ ಸೇರಿದ್ದಲ್ಲ. ಆದರೂ ನಾನು ಯಮಕನಮರಡಿ ಶಾಸಕ ಸತೀಶ ಜಾರಕಿಹೋಳಿ, ಮತ್ತು ಸಂಸದ ಪ್ರಕಾಶ ಹುಕ್ಕೆರಿ ಅವರನ್ನ ಕಾಲ್ ಪ್ರಯತ್ನ ಮಾಡಿದೆ. ಅವರಿಬ್ಬರ ನಾಯಕರು ಕಾಲ್ ರಿಸಿವ್ ಮಾಡಲಿಲ್ಲ ಎಂದರು.
ಸತೀಶ ಜಾರಕಿಹೋಳಿ ಅವರ ಹೆದರಿಕೆಗೆ ಪೋಲಿಸರು ಪ್ರಕರಣ ದಾಖಲಿಸಿಕ್ಕೊಳ್ಳಲು ಹೆದರುತ್ತಿದ್ದಾರೆ. ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕ್ಕೊಳ್ಳಬೇಕಿತ್ತು. ಆದರೆ. ಪೋಲಿಸರು ಜನಪ್ರತಿನಿದಿಗಳ ಕೈಗೊಂಬೆಯಾಗಿದ್ದಾರೆ.
ನಿಮಗೆ ಕಾನೂನು ಹಿಡಿತದಲ್ಲಿಡಲು ಆಗಲಿಲ್ಲಾ ಅಂದ್ರೆ ಬೆಳಗಾವಿ ಬಿಟ್ಟು ಹೋಗಿ ಎಂದು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.