ಕೊರೋನಾ, ಪ್ಲೇಗ್, ಸ್ಪ್ಯಾನಿಷ್ ಫ್ಲೂನಂತ ರೋಗಗಳು ನಮ್ಮ ದೇಶಕ್ಕೆ ಬಹಳ ಸಾರಿ ಬಂದು ಹೋಗಿವೆ| ಕೊರೋನಾ ಇಟ್ಟುಕೊಂಡೆ ಇನ್ಮುಂದೆ ನಾವು ಜೀವನ ಸಾಗಿಸಬೇಕಾಗಿದೆ| ಕೊರೋನಾ ಗುಣಮುಖ ಆಗದಂತಹ ರೋಗ ಏನೂ ಅಲ್ಲ. ಸರಿಯಾದ ಔಷಧಿ ಪಡೆದು ಮುಂಜಾಗ್ರತೆ ವಹಿಸಿದರೆ ಗುಣಮುಖ ಆಗುತ್ತಾರೆ|
ಬೆಳಗಾವಿ(ಜೂ.25): ಇನ್ಮುಂದೆ ನಾವೆಲ್ಲರೂ ಕೊರೋನಾ ಜೊತೆಗೆ ಬದುಕುಬೇಕಾಗಿದೆ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ. ಇನ್ಮುಂದೆ ನಾವು ಕೊರೋನಾ ಜೊತೆಯೇ ಬದುಕಬೇಕಾಗಿದೆ. ಜನರನ್ನು ಹೆದರಿಸಲಿಕ್ಕೆ ಕೊರೋನಾ ಮಾಡಿದ್ದಾರೆ. ಕೊರೋನಾ ದೇಶದಲ್ಲಿ ಬಿಟ್ಟು ಗಡಿಯಲ್ಲಿ ಆತಂಕ ಸೃಷ್ಟಿಸಿದ್ದಾರೆ ಎಂದು ಪರೋಕ್ಷವಾಗಿ ಚೀನಾ ವಿರುದ್ಧ ಸುರೇಶ ಅಂಗಡಿ ವಾಗ್ದಾಳಿ ನಡೆಸಿದರು.
ಬೆಳಗಾವಿಗೆ ಬಿಡದ ಮಹಾರಾಷ್ಟ್ರ ನಂಟು: 20 ವರ್ಷದ ಯುವತಿಗೆ ಕೊರೋನಾ ಸೋಂಕು
ಇಂತಹ ಕೊರೋನಾ, ಪ್ಲೇಗ್, ಸ್ಪ್ಯಾನಿಷ್ ಫ್ಲೂನಂತ ರೋಗಗಳು ನಮ್ಮ ದೇಶಕ್ಕೆ ಬಹಳ ಸಾರಿ ಬಂದು ಹೋಗಿವೆ. ಕೊರೋನಾ ಇಟ್ಟುಕೊಂಡೆ ಇನ್ಮುಂದೆ ನಾವು ಜೀವನ ಸಾಗಿಸಬೇಕಾಗಿದೆ. ಕೊರೋನಾ ಗುಣಮುಖ ಆಗದಂತಹ ರೋಗ ಏನೂ ಅಲ್ಲ. ಸರಿಯಾದ ಔಷಧಿ ಪಡೆದು ಮುಂಜಾಗ್ರತೆ ವಹಿಸಿದರೆ ಗುಣಮುಖ ಆಗುತ್ತಾರೆ. ಯಾರೂ ಹೆದರಬೇಕಾಗಿಲ್ಲ, ಕೊರೋನಾ ಜೊತೆ ನಾವು ಜೀವನ ಸಾಗಿಸಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಜಾಗ್ರತೆ ಕೈಗೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.