ಉಡುಪಿಯಲ್ಲಿ, ಸ್ವತಃ ಸಚಿವರೇ ತನ್ನ ಮನೆಯ ಪಕ್ಕದಲ್ಲಿ, ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಅವಕಾಶ ಮಾಡಿಕೊಟ್ಟು ಮಾದರಿಯಾಗಿದ್ದಾರೆ. ಆ ಸಚಿವರು? ದೇಶದ ಪ್ರಪ್ರಥಮ ಘಟಕದ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಎ.3): ಘನತ್ಯಾಜ್ಯ ನಿರ್ವಹಣೆ (Waste management) ಪ್ರತಿಯೊಂದು ನಗರ ಮತ್ತು ಗ್ರಾಮಗಳ ಮುಂದಿರುವ ಅತಿ ದೊಡ್ಡ ಸವಾಲು. ತ್ಯಾಜ್ಯ ನಿರ್ವಹಣಾ ಘಟಕ ಮಾಡೋಣ ಅಂತಂದ್ರೆ, ಜನರು ನಮ್ಮೂರಲ್ಲಿ ಬೇಡ! ನಮ್ಮ ಕೇರಿಯಲ್ಲಿ ಬೇಡ , ನಮ್ಮ ಗ್ರಾಮದಲ್ಲಿ ಬೇಡ ಅಂತ ಹೋರಾಟ ಮಾಡುತ್ತಾರೆ. ಆದರೆ ಉಡುಪಿಯಲ್ಲಿ, ಸ್ವತಃ ಸಚಿವರೇ ತನ್ನ ಮನೆಯ ಪಕ್ಕದಲ್ಲಿ, ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಅವಕಾಶ ಮಾಡಿಕೊಟ್ಟು ಮಾದರಿಯಾಗಿದ್ದಾರೆ. ಆ ಸಚಿವರು? ದೇಶದ ಪ್ರಪ್ರಥಮ ಘಟಕದ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.
ಇದೊಂದು ಅಪರೂಪದಲ್ಲಿ ಅಪರೂಪದ ಘನತ್ಯಾಜ್ಯ ನಿರ್ವಹಣಾ ಕೇಂದ್ರ (material Recovery Facility center ). ಇದು ಇರೋದು ಉಡುಪಿ (Udupi) ಜಿಲ್ಲೆಯ ಕಾರ್ಕಳ (Karkala) ತಾಲೂಕಿನ ನಿಟ್ಟೆ (Nitte) ಗ್ರಾಮದಲ್ಲಿ! ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಈ ಗ್ರಾಮಕ್ಕೆ ಬರೋದಕ್ಕೆ ಒಂದು ವಿಶೇಷ ಕಾರಣ ಇದೆ. ಉಡುಪಿ ಜಿಲ್ಲೆಗೆ ಮಂಜೂರಾದ ಈ ಕೇಂದ್ರವನ್ನು ಎಲ್ಲಿ ಮಾಡುವುದು ಅಂತ ತಲೆನೋವು ಉಂಟಾಗಿತ್ತು.
ಪ್ರತಿಯೊಂದು ಗ್ರಾಮದಲ್ಲೂ ಜನ ನಮ್ಮೂರಿಗೆ ಬೇಡ, ಈ ಕೊಳಕು ವಾಸನೆಯಿಂದ ಊರು ಹಾಳಾಗುತ್ತೆ ಕೇರಿ ಹಾಳಾಗುತ್ತೆ ಅಂತ ಆಕ್ಷೇಪ ಸಲ್ಲಿಸುತ್ತಲೇ ಬಂದಿದ್ರು. ವಿಷಯ ತಿಳಿದ ಇಂಧನ ಸಚಿವ ಸುನಿಲ್ ಕುಮಾರ್ (Union minister Sunil Kumar), ತಾನಿರುವ ನಿಟ್ಟೆ ಗ್ರಾಮದಲ್ಲಿ ತನ್ನ ಮನೆಯ ಪಕ್ಕದಲ್ಲೇ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ಎಂಟು ತಿಂಗಳಿಂದ ಈ ಘಟಕ ಕಾರ್ಯಾಚರಿಸುತ್ತಿದ್ದು, ಮಂಗಳೂರಿನ ರಾಮಕೃಷ್ಣಾಶ್ರಮದ ನಿರ್ವಹಣೆಯಲ್ಲಿ, ದೇಶದ ಪ್ರಪ್ರಥಮ ಸುಸಜ್ಜಿತ ಘಟಕ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಸಚಿವರ ಮನೆಯ ಪಕ್ಕದಲ್ಲೇ ಇರುವುದರಿಂದ, ಈ ಘಟಕವು ಸೂಪರಾಗಿದೆ. ಗ್ರಾಮಗಳ ತ್ಯಾಜ್ಯ ನಿರ್ವಹಣೆಯ ಸವಾಲಿಗೂ ಬ್ರೇಕ್ ಬಿದ್ದಿದೆ.
Slush Field Race ಕತ್ನಳ್ಳಿ ಜಾತ್ರೆ ಕೆಸರು ಗದ್ದೆ ಓಟದಲ್ಲಿ ಗೆದ್ದು ಬೀಗಿದ ಮುಸ್ಲಿಂ ಯುವಕ!
ತ್ಯಾಜ್ಯ ನಿರ್ವಹಣೆ ಅನ್ನೋದು ಪ್ರತಿಯೊಂದು ಗ್ರಾಮ ಮತ್ತು ನಗರ ಸಂಸ್ಥೆಗಳೊಂದಿಗೆ ಅತಿದೊಡ್ಡ ತಲೆನೋವು. ಈ ಘಟಕದಲ್ಲಿ ದಿನವೊಂದಕ್ಕೆ 10 ಟನ್ ಒಣ ತ್ಯಾಜ್ಯವನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಇದೆ. ಎಂಆರ್ ಎಫ್ ಯೋಜನಾ ವ್ಯಾಪ್ತಿಯ ಸುಮಾರು 42 ಗ್ರಾಮಪಂಚಾಯಿತಿಗಳಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದ್ದು ಅದನ್ನು ವಾರಕ್ಕೆ ಒಂದು ಬಾರಿ ಈ ಕೇಂದ್ರಕ್ಕೆ ತಂದು ಅಲ್ಲಿ ವಿಂಗಡಿಸಿ ಮರುಬಳಕೆ ಮಾಡುವ ಸಂಸ್ಥೆಗಳಿಗೆ ನೇರವಾಗಿ ಮಾರಾಟ ಮಾಡಲಾಗುತ್ತದೆ. ಕೇವಲ 8 ತಿಂಗಳಲ್ಲಿ 655 ಟನ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಉಇ ಘಟಕದಲ್ಲಿ ವಿಲೇವಾರಿ ಮಾಡಲಾಗಿದೆ. ಇದರಿಂದ ಪರಿಸರಕ್ಕೆ ಆಗಬಹುದಾದ ನಷ್ಟವನ್ನು ತಪ್ಪಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಅಧಿಕೃತ ಮರು ಬಳಕೆದಾರರು ಇಲ್ಲದೆ ಇರುವುದರಿಂದ ದೂರದ ಊರುಗಳ ಅಧಿಕೃತ ಮರು ಬಳಕೆದಾರರಿಗೆ ತ್ಯಾಜ್ಯವನ್ನು ಮಾರಾಟ ಮಾಡಲಾಗುತ್ತಿದೆ. ಸುಮಾರು 10 ಸಾವಿರ ಚದರ ಅಡಿಯ ಈ ಸುಸಜ್ಜಿತ ಕಟ್ಟಡದಲ್ಲಿ, ಗಲೀಜು ಅನಿಸುವ ಯಾವುದೇ ಚಿತ್ರಣ ಕಂಡುಬರುವುದಿಲ್ಲ. ಐಟಿ-ಬಿಟಿ ಕಂಪನಿಗಳ ಮಾದರಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ ಘಟಕದಲ್ಲಿ 30 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಸ್ಥಳೀಯ ಗ್ರಾಮಸ್ಥರನ್ನೇ ನೇಮಕ ಮಾಡಿಕೊಳ್ಳಲಾಗಿದೆ.
ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಜಾತ್ರೆಗಳು!
ಸಂಗ್ರಹಿಸಿದ ತ್ಯಾಜ್ಯವನ್ನು ತೂಕ ಮಾಡಿ ಶೇಖರಣಾ ವಿಭಾಗದಲ್ಲಿ ಇರಿಸಲಾಗುತ್ತದೆ. ಬಳಿಕ ಕನ್ವೇಯರ್ ಸಹಾಯದಿಂದ ತ್ಯಾಜ್ಯವನ್ನು 30 ಭಾಗವಾಗಿ ವಿಂಗಡಿಸಲಾಗುತ್ತದೆ ವಿಂಗಡಿಸಿದ ತ್ಯಾಜ್ಯವನ್ನು ಬೈಲಿಂಗೆ ಯಂತ್ರದ ಸಹಾಯದಿಂದ ಬೈಲ್ ಮಾಡಲಾಗುತ್ತದೆ. ಇವುಗಳಲ್ಲಿ ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ರಿಸೈಕ್ಲಿಂಗ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುನರ್ಬಳಕೆ ಸಾಧ್ಯವಾಗದ ತ್ಯಾಜ್ಯವನ್ನು ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸಲಾಗುತ್ತದೆ.
ಈ ಪೈಲೆಟ್ ಪ್ರಾಜೆಕ್ಟ್ ನ ಯಶಸ್ಸಿನ ಆಧಾರದಲ್ಲಿ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆ ಹಾಕಿಕೊಂಡಿದೆ. ಸ್ವಚ್ಛ ಭಾರತ ಅಭಿಯಾನದಡಿ ದೇಶಕ್ಕೇನೆ ಈ ಘಟಕ ಮಾದರಿಯಾಗಿದೆ.