ಮಳೆಯಿಂದ ಭಾರೀ ಅನಾಹುತಗಳಿಗೆ ಮಲೆನಾಡು ಸಾಕ್ಷಿ ಆಗುತ್ತಿದೆ. ಮಳೆಯಿಂದ ಬದುಕು ಕಳೆದುಕೊಂಡಿರುವ ಜನರಿಗೆ ಸ್ವಾಂತನ ಹೇಳಲು ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿ, ಸಂತ್ರಸ್ಥ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಿದರು.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್, ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.12): ಮಳೆಯಿಂದ ಭಾರೀ ಅನಾಹುತಗಳಿಗೆ ಮಲೆನಾಡು ಸಾಕ್ಷಿ ಆಗುತ್ತಿದೆ. ಮಳೆಯಿಂದ ಬದುಕು ಕಳೆದುಕೊಂಡಿರುವ ಜನರಿಗೆ ಸ್ವಾಂತನ ಹೇಳಲು ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿ, ಸಂತ್ರಸ್ಥ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಿದರು.
ಮರ ಬಿದ್ದು ಮೃತ ಪಟ್ಟ ಕುಟುಂಬಕ್ಕೆ ಸಾಂತ್ವನ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಇಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ತಲಗೋಡಿನಲ್ಲಿ ಕೆಲ ದಿನಗಳ ಹಿಂದೆ ಮನೆಯ ಮೇಲೆ ಮರ ಬಿದ್ದು ಮೃತ ಪಟ್ಟ ಮಹಿಳೆಯರಾದ ಸರಿತಾ ಮತ್ತು ಚಂದ್ರಮ್ಮ ಅವರ ಮನೆಗೆ ಭೇಟಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷದ ಚೆಕ್‌ನ್ನು ವಿತರಿಸಿದರು. ಅಲ್ಲದೆ ಸರಿತಾ ಮತ್ತು ಚಂದ್ರಮ್ಮ ಅವರ ಮಕ್ಕಳಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಮೊರಾರ್ಜಿ ಶಾಲೆಯಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವಂತೆ, ಪಾತ್ರೆ, ಬೆಡ್ ಶೀಟ್ ಮುಂತಾದ ದಿನಬಳಕೆ ವಸ್ತುಗಳನ್ನು ಮೃತರ ಕುಟುಂಬಕ್ಕೆ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಮಲೆನಾಡಿನಲ್ಲಿ ಮಳೆ ಆರ್ಭಟ ಕಡಿಮೆ ಆಗಿದ್ದರೂ ಅನಾಹುತ ಸರಣಿ: ಸಿ.ಟಿ.ರವಿ ಸ್ವಗ್ರಾಮದಲ್ಲಿ ಭೂ ಕುಸಿತ
ಮರ ಕಡಿಯದೇ ನಿರ್ಲಕ್ಯ ವಹಿಸಿದವರ ಮೇಲೆ ಕ್ರಮ: ಮನೆಯ ಮೇಲೆ ಮರ ಬೀಳುವ ಸ್ಥಿತಿಯಲ್ಲಿದ್ದರೂ ಕೂಡ ಮರ ತೆರವುಗೊಳಿಸದೇ ನಿರ್ಲಕ್ಷ್ಯ ತೋರಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಭಾರಿ ಮಳೆಯಿಂದಾಗಿ ರಸ್ತೆ, ಚರಂಡಿ, ಸೇತುವೆ, ಮನೆಗಳೀಗೆ ಹಾನಿಯಾಗಿದೆ. ಅತಿಯಾದ ಗಾಳಿಯಿಂದ ಮರಗಳು ಧರೆಗುರುಳಿವೆ. ಮನೆಗೆ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಸಂದರ್ಭದಲ್ಲಿ ಮನೆಗಳ ಹತ್ತಿರ ಇರುವ ಮರಗಳ ರೆಂಬೆಗಳನ್ನು ಕಡಿಯಬೇಕು. ಮರಗಳನ್ನು ಕಡಿಯಬೇಕು, ಮನೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂಬ ಸೂಚನೆಯನ್ನು ಅರಣ್ಯ ಇಲಾಖೆಗೆ ನೀಡಲಾಗಿತ್ತು. ಆದರೆ ಇಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಂಬಂಧ ಪಟ್ಟವರ ಮೇಲೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.
ಚಿಕ್ಕಮಗಳೂರಲ್ಲಿ ಭಾರೀ ಮಳೆ: ಮನೆ ಮೇಲೆ ಮರ ಬಿದ್ದು ಇಬ್ಬರ ದುರ್ಮರಣ
ಪ್ರತಿ ಮನೆಯಲ್ಲೂ ದೇಶ ಭಕ್ತಿ: ಮನೆ ಮನೆಯಲ್ಲಿ ತಿರಂಗವನ್ನು ಹಾರಿಸಿ ಸ್ವಾತಂತ್ಯ ದಿನಾಚರಣೆಯನ್ನು ಆಚರಿಸಲು ರಾಷ್ಟ್ರಧ್ಜಜದ ಮೇಲಿರುವ ಹಲವಾರು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾತ್ರಿ ಕೂಡ ತಿರಂಗವನ್ನು ಹಾರಿಸಬಹುದಾಗಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವವರ ಸ್ಮರಣೆ ಮಾಡಬೇಕು. ಪ್ರತಿ ಮನೆಯಲ್ಲಿಯೂ ಕೂಡ ದೇಶ ಭಕ್ತಿಯ ಭಾವ ಮೂಡಬೇಕು ಎಂಬ ಕಾರಣಕ್ಕಾಗಿ ಮನೆ ಮನೆಯಲ್ಲಿ ತಿರಂಗವನ್ನು ಹಾರಿಸಲು ಕೇಂದ್ರ ಸರ್ಕಾರ ಕರೆ ನೀಡಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ, ತಹಶೀಲ್ದಾರ್ ನಾಗರಾಜ್ ಇದ್ದರು.