ಮೀಸಲಾತಿ ಒದಗಿಸಲು ಸಿಎಂ ದೃಢ ಹೆಜ್ಜೆ: ಕೇಂದ್ರ ಸಚಿವ ಜೋಶಿ

By Kannadaprabha NewsFirst Published Jan 7, 2023, 1:00 AM IST
Highlights

ಧಾರವಾಡ ಐಐಟಿಯನ್ನು ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಬೇಕಿತ್ತು. ಆದರೆ, ಕಾಮಗಾರಿ ಬಾಕಿ ಇರುವುದರಿಂದ ವಿಳಂಬವಾಗಿದೆ. ಈ ಕುರಿತು ಪ್ರಧಾನಿಗೆ ತಿಳಿಸಿದ್ದೇನೆ. ಅದಕ್ಕೆ ಅವರು ಸಹ ಒಪ್ಪಿದ್ದಾರೆ: ಪ್ರಹ್ಲಾದ ಜೋಶಿ  

ಧಾರವಾಡ(ಜ.07):  ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಎಲ್ಲರಿಗೂ ನ್ಯಾಯ ಒದಗಿಸಲು ದೃಢ ಹೆಜ್ಜೆ ಇಟ್ಟಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಕ್ಯಾಬಿನೆಟ್‌ನಲ್ಲಿ ನಿರ್ಧರಿಸಿದ್ದಾರೆ. ಯಾವ ಸಮುದಾಯದಿಂದ ಮೀಸಲಾತಿ ಬೇಡಿಕೆ ಬಂದಿದೆ ಎಂಬುದರ ವಿಸ್ಕೃತ ವರದಿ ತಯಾರಿಸಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಅವರ ಮೇಲೆ ವಿಶ್ವಾಸವಿಟ್ಟು ಮುಂದುವರಿಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಚ್‌.ಡಿ. ಕುಮಾರಸ್ವಾಮಿ ಪಾರ್ಟಿ ಎಂದರೆ ಫಾರ್‌ ದಿ ಫ್ಯಾಮಲಿ, ಆಫ್‌ ದಿ ಫ್ಯಾಮಿಲಿ, ಬೈ ದಿ ಫ್ಯಾಮಿಲಿ ಎಂದು ವ್ಯಂಗ್ಯವಾಡಿರುವ ಜೋಶಿ, ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹೆಸರಿಡುವಂತೆ ಯಾರು ಹೇಳಿದ್ದಾರೆ. ಅದಕ್ಕೆ ಸಾರ್ವಜನಿಕರು ರಸ್ತೆಗೆ ಕುಮಾರಸ್ವಾಮಿ, ರೇವಣ್ಣ ಹೆಸರು, ಸೇತುವೆಗೆ ಪ್ರಜ್ವಲ್‌, ಅಂಡರ್‌ ಪಾಸ್‌ಗೆ ನಿಖೀಲ, ಫ್ಲೈ ಓವರ್‌ಗೆ ಅನಿತಾ ಕುಮಾರಸ್ವಾಮಿ ಹೆಸರಿಡುವಂತೆ ಕಾಮೆಂಟ್‌ ಮಾಡಿದ್ದಾರೆ ಎಂದರು.

ಸರ್ಕಾರದ ಜನವಿರೋಧಿ ನೀತಿಯಿಂದ ಜನರ ಬದುಕು ನಾಶ: ಎಸ್‌.ಆರ್.ಹಿರೇಮಠ

ಧಾರವಾಡ ಐಐಟಿಯನ್ನು ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಬೇಕಿತ್ತು. ಆದರೆ, ಕಾಮಗಾರಿ ಬಾಕಿ ಇರುವುದರಿಂದ ವಿಳಂಬವಾಗಿದೆ. ಈ ಕುರಿತು ಪ್ರಧಾನಿಗೆ ತಿಳಿಸಿದ್ದೇನೆ. ಅದಕ್ಕೆ ಅವರು ಸಹ ಒಪ್ಪಿದ್ದಾರೆ. ಯುವಜನೋತ್ಸವ ದಿನಾಂಕ ಬದಲಾಯಿಸಲು ಆಗುವುದಿಲ್ಲ. ಹೀಗಾಗಿ ಹುಬ್ಬಳ್ಳಿ-ಧಾರವಾಡಕ್ಕೆ ಬರಲು ಒಂದು ದಿನಾಂಕ ನಿಗದಿ ಪಡಿಸುವುದಾಗಿ ಹೇಳಿದ್ದಾರೆ. ಅಂದು ಐಐಟಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

click me!