
ಹುಬ್ಬಳ್ಳಿ(ಜು.12): ದೇಶದಲ್ಲಿ 2 ಕಂಪನಿಗಳು ಕೋವಿಡ್ ಲಸಿಕೆಯನ್ನ ಉತ್ಪಾದನೆ ಮಾಡುತ್ತಿವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮೂರು ಕಂಪನಿಗಳು ವ್ಯಾಕ್ಸಿನ್ ಉತ್ಪಾದನೆ ಮಾಡುವುದನ್ನು ಸ್ಥಗಿತಗೊಳಿಸಿದ್ದವು. ಒಂದೇ ದಿನದಲ್ಲಿ ಇಡೀ ದೇಶಕ್ಕೆ ಲಸಿಕೆ ಸರಬರಾಜು ಮಾಡಲು ಆಗೋದಿಲ್ಲ ಅಂತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ
ಅನ್‌ಲಾಕ್ ನಂತರ ಜನಸಂದಣಿ ವಿಚಾರದ ಬಗ್ಗೆ ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರರೊಂದಿಗೆ ಮಾತನಾಡಿದ ಅವರು, ಜನಸಂದಣಿ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಅಗತ್ಯ ನಿರ್ಬಂಧಗಳನ್ನ ವಿಧಿಸಬೇಕು. ಸರ್ಕಾರ ಎಲ್ಲರನ್ನೂ ತಡೆಯಲು ಆಗಲ್ಲ. ಪ್ರತಿನಿತ್ಯ ಪೊಲೀಸರ ಮೂಲಕ ಜನರನ್ನ ನಿಯಂತ್ರಿಸಲು ಸಾಧ್ಯವಿಲ್ಲ. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಆಗಬೇಕಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಕ್ರಮದಿಂದ ಭ್ರಷ್ಟಾಚಾರಿಗಳು ವಿಲವಿಲ: ಪ್ರಹ್ಲಾದ್ ಜೋಶಿ
ಲಸಿಕೆ ಯಾರಿಗೆ ಪಡೆದುಕೊಂಡಿಲ್ಲ, ಅಂತವರ ತಪಾಸಣೆ ಗಡಿಭಾಗದಲ್ಲಿ ಆಗಬೇಕು. ಕೇರಳ, ಮಹಾರಾಷ್ಟ್ರದಿಂದ ಬರುವವರೆಗೂ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಕೇರಳ, ಮಹಾರಾಷ್ಟ್ರದಲ್ಲೇ ಶೇ.60ರಷ್ಟು ಕೊರೋನಾ ಕೇಸ್‌ಗಳಿವೆ. ಅಲ್ಲಿಂದ ಬರುವವರನ್ನ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಸರ್ಕಾರಕ್ಕೆ ಈ ವಿಚಾರದಲ್ಲಿ ಸಲಹೆ ನೀಡಿದ್ದೇನೆ ಎಂದು ಜೋಶಿ ಹೇಳಿದ್ದಾರೆ.