ಭಯೋತ್ಪಾದಕರು ಸತ್ತಾಗ ಅತ್ತಿದ್ದ ಸೋನಿಯಾ ಗಾಂಧಿ: ಪ್ರಹ್ಲಾದ ಜೋಶಿ

By Kannadaprabha NewsFirst Published Oct 2, 2021, 9:45 AM IST
Highlights

*  ಇದು ಕಾಂಗ್ರೆಸ್ಸಿನವರ ಸ್ವಭಾವ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆ
*  ಸಿದ್ದರಾಮಯ್ಯ ಆರ್‌ಎಸ್‌ಎಸ್‌ ವಿರೋಧಿ ಹೇಳಿಕೆ ನೀಡುತ್ತಾರೆ. ಅವರಿಗೇನು ಗೊತ್ತು ಆರ್‌ಎಸ್‌ಎಸ್‌
*  ಮೋಸ ಹಾಗೂ ಒತ್ತಾಯದಿಂದ ರಾಜ್ಯದಲ್ಲಿ ಮತಾಂತರ 
 

ಧಾರವಾಡ(ಅ.02): ದೆಹಲಿ ಪೊಲೀಸರು ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು. ಆದರೆ, ಪೊಲೀಸ್‌ ಅಧಿಕಾರಿ ಮೋಹನ ಚಂದ ಶರ್ಮಾ ಅವರನ್ನು ಕಳೆದುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಭಯೋತ್ಪಾದಕರು ಮೃತರಾಗಿದ್ದಕ್ಕೆ ಸೋನಿಯಾ ಗಾಂಧಿ(Sonia Gandhi )ಅವರು ಕಣ್ಣೀರು ಹಾಕಿದ್ದರೆ ಹೊರತು ಪೊಲೀಸ್‌ ಅಧಿಕಾರಿ ಮೃತರಾಗಿದ್ದಕ್ಕಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಟೀಕಿಸಿದ್ದಾರೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ಸಿನವರ(Congress) ಸಹಜ ಸ್ವಭಾವ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ತುಷ್ಟೀಕರಣ ರಾಜಕಾರಣ ಮಾಡುತ್ತದೆ. ಮುಸ್ಲಿಂ ತುಷ್ಟೀಕರಣಕ್ಕಾಗಿ ಸಿದ್ದರಾಮಯ್ಯ ಆರ್‌ಎಸ್‌ಎಸ್‌ ವಿರೋಧಿ ಹೇಳಿಕೆ ನೀಡುತ್ತಾರೆ. ಅವರಿಗೇನು ಗೊತ್ತು ಆರ್‌ಎಸ್‌ಎಸ್‌.(RSS) ಮತ ಬ್ಯಾಂಕ್‌ ರಾಜಕಾರಣಕ್ಕೆ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ರಾಮಜನ್ಮಭೂಮಿ ವಿರೋಧ ಮಾಡಿದ್ದರು. ಮುಸ್ಲಿಂ(Muslim) ಮಹಿಳೆಯ ಜೀವನಾಂಶ ವಿಷಯಕ್ಕೂ ವಿರೋಧ ಮಾಡಿದ್ದರು. ಇದೆಲ್ಲದರಿಂದ ಕಾಂಗ್ರೆಸ್‌ ಅಧೋಗತಿಗೆ ಇಳಿದಿದೆ. ಕಾಂಗ್ರೆಸ್ಸಿನವರೂ ಇನ್ನಾದರೂ ಸುಧಾರಿಸಬೇಕು. ಇಲ್ಲದಿದ್ದಲ್ಲಿ ಜನ ಇನ್ನೂ ಕೆಟ್ಟದಾರಿ ತೋರಿಸುತ್ತಾರೆ. ಸಿದ್ದರಾಮಯ್ಯ ಗೌರವಾನ್ವಿತ ನಾಯಕ. ವೈಯಕ್ತಿಕವಾಗಿ ಅವರ ಬಗ್ಗೆ ನನಗೂ ಗೌರವ ಇದೆ. ಆದರೆ ಮಾತನಾಡುವಾಗ ಇತಿಮಿತಿ ಇರಬೇಕು. ನಾವು ಕಾಂಗ್ರೆಸ್‌ನವರಿಗೆ ಐಎಸ್‌ಐ ಏಜೆಂಟ್‌ ಅಂದರೆ ಅವರು ಏನು ಹೇಳುತ್ತಾರೆ ಎಂದು ಜೋಶಿ ಪ್ರಶ್ನಿಸಿದರು.

ಧಾರವಾಡ: ಕೇಂದ್ರ ಸಚಿವ ಜೋಶಿ ಭಾವಚಿತ್ರಕ್ಕೆ ಮಸಿ

ರಾಜ್ಯದಲ್ಲಿ ಮತಾಂತರ ತಡೆ ಕಾಯಿದೆ ಜಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಹಣದ ಆಸೆ, ಮೋಸ ಹಾಗೂ ಒತ್ತಾಯದಿಂದ ರಾಜ್ಯದಲ್ಲಿ ಮತಾಂತರ ಪ್ರಕರಣಗಳು ನಡೆಯುತ್ತಿವೆ. ಮುಗ್ಧ ಜನರನ್ನು ತಪ್ಪುದಾರಿಗೆ ಎಳೆದು ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಅನುಮಾನವಿಲ್ಲ. ಹಿಂದೂಗಳನ್ನು ಬೇರೆ ಜಾತಿಗೆ ಮತಾಂತರ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಇದು ನಿಲ್ಲಬೇಕು. ಇದಕ್ಕೆ ಅಗತ್ಯವಾದ ಕಾನೂನು ತಿದ್ದುಪಡಿ ರಾಜ್ಯ ಸರ್ಕಾರ ಮಾಡಬೇಕು. ಇದನ್ನು ತಡೆಯಲು ಸರ್ವ ರೀತಿಯ ಪ್ರಯತ್ನವೂ ಆಗಬೇಕು ಎಂದರು.
 

click me!