ಸಿಂದಗಿಯಲ್ಲಿ ಮತ್ತೆ ರಾತ್ರಿ ಭೂಕಂಪ: ಜನರ ಆತಂಕ

By Kannadaprabha News  |  First Published Oct 2, 2021, 8:10 AM IST

*  ರಾತ್ರೋರಾತ್ರಿ ಮನೆಗಳಿಂದ ಹೊರಗಡೆ ಓಡಿ ಬಂದ ಜನರು
*  ಪ್ರಥಮವಾಗಿ 4.30ಕ್ಕೆ ಸ್ವಲ್ಪ ಪ್ರಮಾಣದಲ್ಲಿ ಅಲುಗಾಡಿದ ಭೂಮಿ 
*  ವಿಜಯಪುರ ಜಿಲ್ಲೆಯಲ್ಲಿ ಪದೆ ಪದೆ ಕಂಪಿಸುತ್ತಿರುವ ಭೂಮಿ 


ಸಿಂದಗಿ(ಅ.02): ಕೆಲ ದಿನಗಳ ಹಿಂದಷ್ಟೇ ಭೂಕಂಪ ಸಂಭವಿಸಿದ್ದ ವಿಜಯಪುರ(Vijayapura) ಜಿಲ್ಲೆಯ ಸಿಂದಗಿ(Sindagi) ತಾಲೂಕಿನಲ್ಲಿ ಶುಕ್ರವಾರ ಮುಂಜಾನೆ ಮತ್ತೆ ಭೂಮಿ ಕಂಪಿಸಿದೆ. ಹೀಗಾಗಿ ಜನರು ರಾತ್ರೋರಾತ್ರಿ ಮನೆಗಳಿಂದ ಹೊರಗಡೆ ಬಂದು ಆತಂಕದಿಂದ ಕಾಲ ಕಳೆದಿದ್ದಾರೆ. 

ಬಂದಾಳ ರಸ್ತೆ, ಗೋಲಿಬಾರ ಮಡ್ಡಿ, ಜ್ಯೋತಿ ನಗರ, ಶಾಂತವೀರ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕಂಪಿಸಿದೆ. ಪ್ರಥಮವಾಗಿ 4.30ಕ್ಕೆ ಸ್ವಲ್ಪ ಪ್ರಮಾಣದಲ್ಲಿ ಭೂಮಿ ಅಲುಗಾಡಿತು. ನಂತರ 4.55ಕ್ಕೆ ಇನ್ನೊಂದು ಬಾರಿ ಕಂಪನವಾಗಿ, ಮೂರನೇ ಬಾರಿ 5.10ಕ್ಕೆ ಮತ್ತು 5.15ಕ್ಕೆ ಹಾಗೂ 5.25ಕ್ಕೆ ಭೂಮಿ ಕಂಪಿಸಿದೆ(Earthquake) ಎಂದು ಜನರು ಹೇಳಿದ್ದಾರೆ. 

Latest Videos

undefined

ವಿಜಯಪುರದಲ್ಲಿ ಮತ್ತೆ ಭೂಮಿ ನಡುಗಿದ ಅನುಭವ..!

ಇಲ್ಲಿ ಹೆಚ್ಚಾಗಿ ಕಪ್ಪು ಮಣ್ಣು ಇರುವುದರಿಂದ ಭೂಮಿ ಒಳಗಿನ ಶಿಲಾಪದರಗಳು ಸಡಿಲಗೊಳ್ಳುವಾಗ ಘರ್ಷಣೆಗೆ ಒಳಗಾಗುತ್ತವೆ. ಇಂತಹ ಸಂದರ್ಭದಲ್ಲಿ ಭೂಮಿ ಕಂಪಿಸಿದ ಅನುಭವವಾಗುತ್ತಿರುತ್ತದೆ ಎಂದು ಭೂ ವಿಜ್ಞಾನಿಗಳು ಈ ಹಿಂದೆ ಪರೀಕ್ಷೆ ನಡೆಸಿದಾಗಲೇ ಹೇಳಿದ್ದರು.

ಸೆ.4 ರಂದು ಜಿಲ್ಲೆಯಾದ್ಯಂತ ಭೂ ಕಂಪನದ ಅನುಭವವಾಗಿತ್ತು. ತಡರಾತ್ರಿ 2 ಬಾರಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.9 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿತ್ತು. ಇದು ಜನರನ್ನು ಆತಂಕ ಮೂಡಿಸಿತ್ತು. 
ಸೆ. 11ರಂದ ಕೂಡ ವಿಜಯಪುರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಅಂದು ಬೆಳಗ್ಗೆ 8.18ರಿಂದ 8.20ರ ವೇಳೆ ಎರಡು ಬಾರಿ ಕಂಪನ ಸಂಭವಿಸಿದ ಅನುಭವದ ಆಗಿದೆ. ಇದಕ್ಕೂ ಮೊದಲು ಭಾರೀ ಸದ್ದೂ ಕೇಳಿಸಿದೆ. ಸೆ.4ರಂದು ಮಧ್ಯರಾತ್ರಿ ಜಿಲ್ಲೆಯ ಹಲವೆಡೆ ರಿಕ್ಟರ ಮಾಪನದಲ್ಲಿ 3.9 ತೀವ್ರತೆಯ ಭೂಕಂಪನ ಸಂಭವಿಸಿತ್ತು.
 

click me!