'ಮುಸ್ಲಿಂ ಬಾಂಧವರನ್ನ ದೇಶದಿಂದ ಹೊರಹಾಕುವ ಪ್ರಶ್ನೆಯೇ ಇಲ್ಲ'

By Suvarna NewsFirst Published Dec 15, 2019, 1:45 PM IST
Highlights

ಕಾಂಗ್ರೆಸ್ಸಿಗರು ಈ ಕಾಯ್ದೆಯಲ್ಲಿ ಮುಸ್ಲಿಂ ಭೇದ ಎಂಬ ದುಷ್ಟ ಬೀಜ ಬಿತ್ತುವ ಕೆಲ ಮಾಡುತ್ತಿದೆ ಎಂದ ಪ್ರಹ್ಲಾದ್ ಜೋಶಿ| ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ| ನಾಗರಿಕತೆಯಿಂದ ವಂಚಿತಗೊಂಡವರಿಗೆ ನಾಗರಿಕತೆ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ| ಯಾರನ್ನೂ ನಾಗರಿಕತೆಯಿಂದ ಹೊರಗಿಡುವ ಕೆಲಸ ಮಾಡುತ್ತಿಲ್ಲ|

ಹುಬ್ಬಳ್ಳಿ(ಡಿ.15): ಈಗಾಗಲೇ ಸಂಸತ್ ಅಧಿವೇಶನ ಯಶಸ್ವಿಯಾಗಿ ಮುಗಿದಿದ್ದು, ಐತಿಹಾಸಿಕ ಕಾನೂನುಗಳ ಬಿಲ್ ಪಾಸ್ ಮಾಡಲಾಗಿದೆ. ಸರ್ಕಾರದ ಎಲ್ಲ ಯಶಸ್ಸುಗಳನ್ನು ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಸಹಿಸುತ್ತಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾರದ್ದೂ ಪೌರತ್ವ ಕಸಿದುಕೊಳ್ಳುವ ವಿಚಾರವಿಲ್ಲ. ನಮ್ಮ ದೇಶಕ್ಕೆ ಹೊಂದಿಕೊಂಡು ಧಾರ್ಮಿಕ ಅನ್ಯಾಯವಾದವರಿಗೆ ಪೌರತ್ವ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಯಾವುದೇ ಇಸ್ಲಾಮಿಕ್ ಬಾಂಧವರನ್ನ ದೇಶದಿಂದ ಹೊರಹಾಕುವ ಪ್ರಶ್ನೆಯೇ ಇಲ್ಲ. ಯಾರ ನಾಗರಿಕತೆಯನ್ನ ಕಸಿದುಕೊಳ್ಳಲಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಈ ಕಾಯ್ದೆಯಲ್ಲಿ ಮುಸ್ಲಿಂ ಭೇದ ಎಂಬ ದುಷ್ಟ ಬೀಜ ಬಿತ್ತುವ ಕೆಲ ಮಾಡುತ್ತಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾಗರಿಕತೆಯಿಂದ ವಂಚಿತಗೊಂಡವರಿಗೆ ನಾಗರಿಕತೆ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಯಾರನ್ನೂ ನಾಗರಿಕತೆಯಿಂದ ಹೊರಗಿಡುವ ಕೆಲಸ ಮಾಡುತ್ತಿಲ್ಲ. ಈ ಹಿಂದೆ ಬೇರೇ ಬೇರೆ ದೇಶಗಳಿಂದ ಬಂದಂತವರಿಗೆ ಪೌರತ್ವ ನೀಡಲಾಗಿದೆ. ಭಾರತ ದೇಶದ ಪೌರತ್ವ ಬಯಸಿ ಬಂದಂತವರಿಗೆ ನಾಗರಿಕ ಸ್ಥಾನಮಾನ ಕೊಡುವುದು ಅವಶ್ಯವಾಗಿದೆ. ಕಾಂಗ್ರೆಸ್ ಹತಾಶಗೊಂಡು ಈ ಬೆಳವಣಿಗೆಗಳನ್ನು ಸಹಿಸುತ್ತಿಲ್ಲ ಎಂದು ಹೇಳಿದ್ದಾರೆ. 

ದೇಶದಲ್ಲಿ ಈ ವಿಷಯಗಳನ್ನಿಟ್ಟುಕೊಂಡು ದೊಂಬಿ, ಗಲಭೆಗಳನ್ನ ಎಬ್ಬಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಪೌರತ್ವ ಮಸೂದೆ ಬಗ್ಗೆ ಆತಂಕ ಇಲ್ಲ. ಯಾರ ವಿರುದ್ಧವೂ ಅಲ್ಲ. ಹಿಂದೂ- ಮುಸ್ಲಿಂ ಎಂದು ಬಿಂಬಿಸಿ ಗಲಭೆ ಗಲಾಟ ಮಾಡಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತದೆ. ಮುಸ್ಲಿಂರನ್ನು ಹೊರ ಹಾಕುವ ಪ್ರಶ್ನೆಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ರಾಹುಲ್ ಯಾವತ್ತೂ ಸಾವರಕರ್ ಆಗಲು ಸಾಧ್ಯವಿಲ್ಲ. ರಾಹುಲ್ ಉದ್ಧವ್ ಠಾಕ್ರೆ ಆಗಲಿಕ್ಕೆ ಸಾಧ್ಯವಿದೆ. ರಾಹುಲ್ ಗಾಂಧಿ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ದೇಶಭಕ್ತ ವೀರ ಸಾವರಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪು. ಕಾಂಗ್ರೆಸ್ ಪಕ್ಷದಲ್ಲಿರುವುವವರು ಎಲ್ಲರೂ ನಕಲಿ ಗಾಂಧಿಗಳು. ರಾಹುಲ್, ಸೋನಿಯಾ, ಪ್ರಿಯಾಂಕಾ, ವಾದ್ರಾ ಇವರೆಲ್ಲ ನಕಲಿ ಗಾಂಧಿಗಳಾಗಿದ್ದಾರೆ. ಅವರು ಬೇರೆಯವರ ಬಗ್ಗೆ ಯಾವಾಗಲೂ ಇದೇ ರೀತಿ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ. 

ರಾಜ್ಯದಲ್ಲಿ ಹೊಸ‌‌ ಡಿಸಿಎಂ ಹುದ್ದೆ ಸೃಷ್ಟಿಯಾಗುವುದಿಲ್ಲ, ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಲಿದೆ. ರೇಪ್ ಸಾಮಾಜಿಕ ಪಿಡುಗು.‌ ಇದನ್ನು ಕೇವಲ ಕಾನೂನಿಂದ ತಗೆದುಹಾಕಲು ಸಾಧ್ಯವಿಲ್ಲ. ಇದರ ಬಗ್ಗೆ ಜನಜಾಗೃತಿ ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ. 
 

click me!