ನಾವು ನಿಜವಾಗ್ಲೂ ಮಾಧ್ಯಮದವರಿಗೆ ಧನ್ಯವಾದ ಹೇಳಬೇಕು. ಅಂತಹ ರಾತ್ರಿಯಲ್ಲಿ ಪೊಲೀಸ್ ವಾಹನವನ್ನ ಮಾಧ್ಯಮದವರು ಬೆನ್ನು ಹತ್ತಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಕಂಪ್ಲೀಟ್ ಲೈವ್ ಲೊಕೇಶನ್ ಹಾಕ್ತಾಇದ್ರು. ಮಾಧ್ಯಮದವರು ಇಲ್ಲದಿದ್ರೆ ಬಹುಷಃ ಸಿ.ಟಿ. ರವಿ ಅವರನ್ನ ಫೇಕ್ ಎನ್‌ಕೌಂಟರ್ ಮಾಡಬೇಕೆನ್ನುವ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಅನಿಸುತ್ತೆ ಎಂದ ಪ್ರಹ್ಲಾದ್ ಜೋಶಿ
ಬಾಗಲಕೋಟೆ(ಡಿ.22): ಮಾಧ್ಯಮದವರು ಇಲ್ಲದಿದ್ರೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರನ್ನ ಅವರನ್ನ ಫೇಕ್ ಎನ್‌ಕೌಂಟರ್ ಮಾಡಬೇಕೆಂಬ ವಿಚಾರ ಅಲ್ಲಿನ ಪೊಲೀಸರಿಗೆ ಇತ್ತು ಅನಿಸುತ್ತೆ. ಬಹುಶಃ ಪೊಲೀಸರಿಗೆ ಅವಕಾಶ ಸಿಕ್ಕಿದ್ರೆ ಸಿ.ಟಿ ರವಿ ಅವ್ರನ್ನ ಮುಗಿಸಬೇಕು ಅಂತಾ ಯೋಚನೆ ಇತ್ತು ಅನಿಸುತ್ತೆ. ಆದ್ರೆ ಅವರಿಗೆ ಸರಿಯಾದ ಅವಕಾಶ ಸಿಕ್ಕಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಿ.ಟಿ. ರವಿ ಅವರನ್ನ ಬೆಳಗಾವಿ ಪೋಲೀಸರು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ನಮ್ಮ ಇನ್ನೊಬ್ಬ ಎಂಎಲ್‌ಸಿ ಕೇಶವ್ ಪ್ರಸಾದ್ ಅವರ ಹಿಂದೆ ಇದ್ರು. ಕೆಲವು ಬೆಳಗಾವಿ ಮಾಧ್ಯಮದವರಿಂದಲೇ ನಮಗೆ ಲೈವ್ ಲೊಕೇಶನ್ ಸಿಗ್ತಾಇತ್ತು. ನಾವು ನಿಜವಾಗ್ಲೂ ಮಾಧ್ಯಮದವರಿಗೆ ಧನ್ಯವಾದ ಹೇಳಬೇಕು. ಅಂತಹ ರಾತ್ರಿಯಲ್ಲಿ ಪೊಲೀಸ್ ವಾಹನವನ್ನ ಮಾಧ್ಯಮದವರು ಬೆನ್ನು ಹತ್ತಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಕಂಪ್ಲೀಟ್ ಲೈವ್ ಲೊಕೇಶನ್ ಹಾಕ್ತಾಇದ್ರು. ಮಾಧ್ಯಮದವರು ಇಲ್ಲದಿದ್ರೆ ಬಹುಷಃ ಸಿ.ಟಿ. ರವಿ ಅವರನ್ನ ಫೇಕ್ ಎನ್‌ಕೌಂಟರ್ ಮಾಡಬೇಕೆನ್ನುವ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಅನಿಸುತ್ತೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ,
undefined
ನನಗೆ ಈಗ ಬೆದರಿಕೆ ಕರೆಗಳು ಬರುತ್ತಿವೆ, ನನಗೇನಾದ್ರೂ ಆದರೆ ಡಿಕೆಶಿ ಲಕ್ಷ್ಮೀ, ಸರ್ಕಾರವೇ ಹೊಣೆ: ಸಿ.ಟಿ.ರವಿ
ಸಿ.ಟಿ. ರವಿ ಸುತ್ತಾಡಿಸಿದ್ದಕ್ಕೆ ನಾನು ಕಾರಣ ಹೇಗೆ ಆಗ್ತಿನಿ?: ಡಿ.ಕೆ.ಶಿವಕುಮಾರ್
ಬೆಂಗಳೂರು: ಬಿಜೆಪಿ ನಾಯಕರು ತಮ್ಮ ಆಕ್ಷೇ ಪಾರ್ಹ ಹೇಳಿಕೆಯನ್ನು ಮುಚ್ಚಿ ಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಆಡಳಿತ ಮಾಡುವಾಗ ಪೊಲೀಸರನ್ನು ಹೇಗೆ ಬಳಸಿಕೊಂಡಿದ್ದರು ಎಂಬುದು ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿದ ವಿಚಾರದಲ್ಲಿ ಅವರುಂಟು, ಪೊಲೀಸರುಂಟು. ಅವರ ಮನೇಲಿ, ಅವರ ಪಕ್ಷದಲ್ಲಿ ಏನೇ ಆದರೂ ನಾನೇ ಕಾರಣ ಎಂಬಂತೆ ಮಾತನಾಡುತ್ತಾರೆ. ನನ್ನನ್ನು ಸ್ಮರಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದು ತಿರುಗೇಟು ನೀಡಿದ್ದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಹೀನ ಮಾತುಗಳೇ ತಮ್ಮ ಸಂಸ್ಕೃತಿ ಎಂದು ಬಿಜೆಪಿ ನಾಯಕರು ಒಪ್ಪಿಕೊಳ್ಳಲಿ. ಮಹಿಳಾ ಸಚಿವೆ ಮೇಲೆ ಹೀನ ಹೇಳಿಕೆ ಈಗ ಅದನ್ನು ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡಲಾಗುತ್ತಿದೆ. ಅವರ ಆಡಳಿತದಲ್ಲಿ ಪೊಲೀಸರನ್ನು ಹೇಗೆಲ್ಲ ಬಳಸಿಕೊಂಡಿದ್ದರು ಎಂಬುದು ತಿಳಿದಿದೆ. ಸಿ.ಟಿ.ರವಿ ಕೇವಲ ಸಚಿವೆ ಹೆಬ್ಬಾಳ್ಳರ್ ಅವರ ಬಗ್ಗೆ ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆಯೂ ಹೀನ ಮಾತುಗಳನ್ನಾಡಿದ್ದಾರೆ. ಸದನದಲ್ಲಿ ನಿತ್ಯ ಸುಮಂಗಲಿ ಎಂಬ ಪದವನ್ನೂ ಬಳಕೆ ಮಾಡಿದ್ದಾರೆ. ಸಿ.ಟಿ.ರವಿ ಆಡಿರುವ ಮಾತುಗಳು ಸರಿಯೋ, ತಪ್ಪೋ ಎಂಬುದನ್ನು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದರು.
ಸಿ.ಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ: ಸಿದ್ದು ಸರ್ಕಾರಕ್ಕೆ ಭಾರೀ ಮುಖಭಂಗ!
ನಮ್ಮ ಪಕ್ಷದ ಯಾವುದೇ ನಾಯಕರು ಆ ರೀತಿಯ ಹೇಳಿಕೆ ನೀಡಿದ್ದರೆ ನಾನು ಖಂಡಿಸುತ್ತಿದ್ದೆ. ಆದರೆ, ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕರ ರಕ್ಷಣೆಗೆ ನಿಂತಿದ್ದಾರೆ. ಶಾಸಕ ಮುನಿರತ್ನ ಅವರ ಜಾತಿನಿಂದನೆ ಪ್ರಕರಣದಲ್ಲಿ ಎಫ್‌ಎಸ್ ಎಲ್ ವರದಿಯಲ್ಲಿ ಸತ್ಯಾಂಶ ಬಂದ ನಂತರ ಪಕ್ಷದಿಂದ ಹೊರಹಾಕುವುದಾಗಿ ಆರ್.ಅಶೋಕ್ ಹೇಳಿದ್ದರು. ಆದರೆ, ಆ ಪ್ರಕರಣದಲ್ಲಿ ಅವರು ಒಂದು ಭಾಗವಾ ಗಿದ್ದರೂ, ಅವರನ್ನು ಸಮರ್ಥಿಸಿಕೊಳ್ಳುತ್ತಿ ದಾರೆ ಎಂದು ಕಿಡಿಕಾರಿದ್ದರು.
ಎಲ್ಲದಕ್ಕೂ ಕೊನೆ ಹಾಡುತ್ತೇವೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ಲೆಕ್ಕ ಚುಕ್ತಾ ಮಾಡು ವುದನ್ನು ಬಹಳ ನೋಡಿದ್ದೇವೆ. ಅವರು ಕೊನೆಯಾಗಿ ಸುವುದಾದರೆ ಬಹಳ ಸಂತೋಷ, ಅವರೊಬ್ಬರಿಗೇ ಲೆಕ್ಕಚುಕ್ತಾ ಮಾಡುವುದು ಬರುತ್ತದೆಯೇ? ಎಲ್ಲರೂ ಅವರವರ ಸಾಮರ್ಥಕ್ಕೆ ತಕ್ಕಂತೆ ಲೆಕ್ಕ ಚುಕ್ತಾ ಮಾಡುತ್ತಾರೆ. ಏನೇ ಆದರೂ, ಆತ್ಮಸಾಕ್ಷಿಯೇ ನ್ಯಾಯ ನೀಡುತ್ತದೆ ಎಂದಿದ್ದರು.