ಪಂಚಮಸಾಲಿಗಳ ಮೇಲೆ ಲಾಠಿ: ಸರ್ಕಾರ, ಪೊಲೀಸ್‌ ಇಲಾಖೆಗೆ ಹೈಕೋರ್ಟ್ ನೋಟಿಸ್

By Kannadaprabha News  |  First Published Dec 22, 2024, 11:07 AM IST

ಲಾಠಿ ಚಾರ್ಜ್‌ ನಂತರ 12 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅದನ್ನು ರದ್ದುಗೊಳಿಸುವಂತೆ ಕೋರಿತ್ತು. ಸಿಎಂಗೆ ಕ್ಷಮೆಯಾಚಿಸಲು ಆಗ್ರಹಿಸಿದರೂ ಸ್ಪಂದಿಸಿಲ್ಲ: ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀ 


ಧಾರವಾಡ(ಡಿ.22):  ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರ, ಪೊಲೀಸ್ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀ ಹೇಳಿದರು. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಠಿ ಚಾರ್ಜ್‌ ನಂತರ 12 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅದನ್ನು ರದ್ದುಗೊಳಿಸುವಂತೆ ಕೋರಿತ್ತು. ಸಿಎಂಗೆ ಕ್ಷಮೆಯಾಚಿಸಲು ಆಗ್ರಹಿಸಿದರೂ ಸ್ಪಂದಿಸಿಲ್ಲ ಎಂದು ತಿಳಿಸಿದರು. 

Tap to resize

Latest Videos

undefined

ಕಾನೂನು ಮೂಲಕವೇ ಪಂಚಮಸಾಲಿಗೆ ಸ್ಥಾನಮಾನ ಪಡೆಯುತ್ತೇವೆ: ವಚನಾನಂದ ಸ್ವಾಮೀಜಿ

ಜಯಮೃತ್ಯುಂಜಯ ಶ್ರೀ ಹಾಗೂ ವಕೀಲರ ಪರಿಷತ್ತು ಸೇರಿ ನಾಲ್ವರಿಂದ ದಾಲ್ವರಿಂದ ರಿಟ್ ಅರ್ಜಿ ಸಲ್ಲಿಸಲಾಗಿದೆ. ಪಂಚಮಸಾಲಿ ಸಮಾಜದ ಪರ ಪೂಜಾ ಸವದತ್ತಿ ಹಾಗೂ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಆಗಿದೆ ಎಂದರು. 

ಮುಖ್ಯಮಂತ್ರಿ ಮೊಂಡುತನ, ಲಾಠಿ ಚಾರ್ಜ್‌ ಖಂಡಿಸಿ ನ್ಯಾಯಾಂಗದ ಮೊರೆ ಹೋಗಿ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗಿತ್ತು. ಹೀಗಾಗಿ ಸದ್ಯ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ ಎಂದರು. 
ಸೊಕ್ಕಿನ ಸರ್ಕಾರಕ್ಕೆ ಪಂಚಮಸಾಲಿಗಳು ಬುದ್ಧಿ ಕಲಿಸುತ್ತಾರೆ. ಹಲ್ಲೆಗೆ ಒಳಗಾದ ಬಾಂಧವರು ಧೃತಿ ಗೇಡುವುದು ಬೇಡ. ಡಿ.23ರಂದು ಬೆಳಗಾವಿಯಲ್ಲಿ ಮನೆ-ಮನೆ ಭೇಟಿ ನೀಡಲಾಗುವುದು. ಹಲ್ಲೆಗೆ ಒಳಗಾದರಿಗೆ ಆತ್ಮಸ್ಥೆರ್ಯ ತುಂಬುವುದಾಗಿಯೂ ತಿಳಿಸಿದರು. 

ವಕೀಲೆ ಪೂಜಾ ಸವದತ್ತಿ ಮಾತನಾಡಿ, ಹೋರಾಟದ ವೇಳೆ ಸೆ.144 ಜಾರಿಯೇ ಆಗಿರಲಿಲ್ಲ. ಏಕಾಏಕಿ ಲಾಠಿ ಚಾಜನ್ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಂಗ ತನಿಖೆಗೆ ಮನವಿ ಮಾಡಿದ್ದಾಗಿ ಮಾಹಿತಿ ನೀಡಿದರು. 

ಪಂಚಮಸಾಲಿಗೆ 2ಎ ಮೀಸಲಾತಿ ಕೇಳಿಯೇ ಇಲ್ಲ: ಶಾಸಕ ಯತ್ನಾಳ್‌

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಸಿ.ಎಸ್. ನೇಗಿಹಾಳ, ಸಿದ್ದು ಹೆಬ್ಬಳ್ಳಿ, ಶಿವಾನಂದ ಮಾಳಶೆಟ್ಟಿ, ರಾಜಶೇಖರ ದೊಡ್ಡಮನಿ, ಪ್ರಕಾಶ ಶಿಂತ್ರಿ ಇದ್ದರು.

• ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿದೆ. 
• ಮೃತ್ಯುಂಜಯ ಶ್ರೀ ಹಾಗೂ ವಕೀಲರ ಪರಿಷತ್ತು ಸೇರಿ ನಾಲ್ವರಿಂದ ರಿಟ್ ಅರ್ಜಿ ಸಲ್ಲಿಸಲಾಗಿದೆ. 
• ಪಂಚಮಸಾಲಿ ಸಮಾಜದ ಪರ ಪೂಜಾ ಸವದತ್ತಿ ಹಾಗೂ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದಾರೆ 
• ಮುಖ್ಯಮಂತ್ರಿ ಮೊಂಡುತನ, ಲಾಠಿ ಚಾರ್ಜ್ ಖಂಡಿಸಿ ನ್ಯಾಯಾಂಗದ ಮೊರೆ ಹೋಗಿ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗಿತ್ತು.

click me!