ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಹಿನ್ನೆಲೆಯಲ್ಲಿ ಬಿಜೆಪಿ ಹೋರಾಟಕ್ಕೆ ಅನುಮತಿ ನಿರಾಕರಿಸಲಾಗಿದೆ. ಕೇಸ್, ಗಲಭೆ ಆಗಿರೋದು ಪೋಲೀಸರ ವಿರುದ್ಧ. ಪೊಲೀಸರನ್ನ ಹತ್ಯೆ ಮಾಡಲು ಹೊರಟಿದ್ರು. ಭಯೋತ್ಪಾದನಾ ಕೆಲಸ ಮಾಡಿದವರ ವಿರೋಧಿಸಿ ಮನವಿ ಕೊಡ್ತೇವೆ ಅಂದ್ರೆ ತಗೋಳಲ್ಲ ಅಂದ್ರೆ ಹೇಗೆ?. ಇದು ಮುಖ್ಯಮಂತ್ರಿಯ ದುರಹಂಕಾರ ತೋರಿಸುತ್ತೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಹುಬ್ಬಳ್ಳಿ(ಅ.13): ಪ್ರಜಾಪ್ರಭುತ್ವದ, ಸಂವಿಧಾನ ರಕ್ಷಕರು ಅಂತ ಹೇಳಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಿದ್ದರಾಮಯ್ಯ. ಮನವಿ ಸ್ವೀಕರಿಸಲು ಯಾಕೆ ನಿರಾಕರಣೆ? ಮಾಡಿದ್ದಾರೆ. ಸಂವಿಧಾನ ಬದಲಿ ಮಾಡಿ, ಅವಹೇಳನ ಮಾಡಿದವರು ಕಾಂಗ್ರೆಸ್‌ನವರು. ಇದನ್ನ ಮುಖ್ಯಮಂತ್ರಿ, ಗೃಹಮಂತ್ರಿ ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಹಿನ್ನೆಲೆಯಲ್ಲಿ ಬಿಜೆಪಿ ಹೋರಾಟಕ್ಕೆ ಅನುಮತಿ ನಿರಾಕರಿಸಲಾಗಿದೆ. ಕೇಸ್, ಗಲಭೆ ಆಗಿರೋದು ಪೋಲೀಸರ ವಿರುದ್ಧ. ಪೊಲೀಸರನ್ನ ಹತ್ಯೆ ಮಾಡಲು ಹೊರಟಿದ್ರು. ಭಯೋತ್ಪಾದನಾ ಕೆಲಸ ಮಾಡಿದವರ ವಿರೋಧಿಸಿ ಮನವಿ ಕೊಡ್ತೇವೆ ಅಂದ್ರೆ ತಗೋಳಲ್ಲ ಅಂದ್ರೆ ಹೇಗೆ?. ಇದು ಮುಖ್ಯಮಂತ್ರಿಯ ದುರಹಂಕಾರ ತೋರಿಸುತ್ತೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
undefined
ತೆರಿಗೆ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ: ಕೇಂದ್ರದ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ
ಬಿಜೆಪಿ ಅವರು ಮನವಿ ಕೊಡೋದು ತಪ್ಪಾ, ಎಂತಹ ಹಾಸ್ಯಾಸ್ಪದ?. ಅಧಿಕಾರ ಕಳೆದುಕೊಳ್ತಿವಿ ಅಂತ ಗೊತ್ತಾದಾಗ ಮುಸ್ಲಿಂ ಒಲೈಕೆ ಮಾಡ್ತೀರಿ. ನೀವು ಮತಾಂಧ ಇಸ್ಲಾಂ ಭಯೋತ್ಪಾದಕರಿಗೆ ಬೆಂಬಲಿಗರಾಗ್ತೀರಿ. ಓಟ್ ಬ್ಯಾಂಕ್ ರಾಜಕಾರಣಕ್ಕೂ ಒಂದು ಮಿತಿ ಇರಬೇಕು. ಇಸ್ಲಾಂ ಮತಾಂಧ ಶಕ್ತಿಗಳು ಅಟ್ಟಹಾಸ ಮೆರೆದರು. ಮನಮೋಹನ್ ಸಿಂಗ್ ಯಾಸಿನ್ ಮಲ್ಲಿಕ್ ಜೊತೆ ಕೈ ಕುಡಿಸಿದವರು. ಸಿಎಂ ಮನವಿ ತೆಗೆದುಕೊಳ್ಳಬೇಕು ಇಲ್ಲವಾದರೆ ಹೋರಾಟ ಮಾಡ್ರೀವಿ. ಬೇಕಾದರೆ ಅರೆಸ್ಟ್ ಮಾಡಲಿ ಎಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.