ಒಂದೆಡೆ ಬೀದಿನಾಯಿಗಳಿಗೆ ಬಿಬಿಎಂಪಿಯಿಂದಲೇ ಆಹಾರ ನೀಡುವ ಬಗ್ಗೆ ಚಿಂತನೆ ನಡೆಯುತ್ತಿರುವ ನಡುವೆ, ಬೀದಿ ನಾಯಿಗಳಿಂದ ಆಗುವ ದಾಳಿಯನ್ನು ತಡೆಯಲು ಬಿಬಿಎಂಪಿ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ನಾಯಿ ದಾಳಿಯ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು (ಅ.13): ಇತ್ತೀಚೆಗೆ ಬೆಂಗಳೂರಿನ ಏರ್‌ಫೋರ್ಸ್ ಕ್ಯಾಂಪಸ್ ಒಂದರಲ್ಲೇ ವೃದ್ಧ ಮಹಿಳೆಯ ಮೇಲೆ ನಾಯಿ ದಾಳಿ ನಡೆದು ಆಕೆ ಸಾವು ಕಂಡಿದ್ದ ವಿಚಾರ ನೆನಪಿರಬಹುದು. ಈಗ ಮತ್ತೊಮ್ಮೆ ಏರ್‌ಪೋರ್ಸ್ ಕ್ಯಾಂಪಸ್ ಆವರಣದಲ್ಲಿ ಇಂಥದ್ದ ಘಟನೆ ನಡೆದಿದೆ. ಪದೇ ಪದೇ ಬೆಂಗಳೂರಿನಲ್ಲಿ ಇಂಥ ಘಟನೆ ನಡೆದರೂ ಬಿಬಿಎಂಪಿಯ ಜಾಣ ಮೌನ ಮಾತ್ರ ಮುಂದುವರಿದಿದೆ. ಈ ಬಾರಿ ಬೀದಿ ನಾಯಿಗಳ ಹಿಂಡು ಬಾಲಕಿಯ ಮೇಲೆ ದಾಳಿ ನಡೆಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಮಕ್ಕಳ ಮೇಲೆ ಡೇಂಜರಸ್ ನಾಯಿ ಗ್ಯಾಂಗ್ ಎರಗುವ ವಿಡಿಯೋ ಮೈ ಜುಮ್ಮೆನಿಸುವಂತಿದೆ. ಒಂದೊಂದೇ ನಾಯಿಗಳು ಎಂಟ್ರಿಯಾಗಿ ನಂತರ ಗುಂಪು ಗುಂಪಲ್ಲಿ ಅಟ್ಯಾಕ್ ಮಾಡಿದೆ.
ದಾಳಿ ಮಾಡಲು ಶುರು ಮಾಡಿದ ಬೆನ್ನಲ್ಲಿಯೇ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಬಾಲಕಿ ಪರದಾಟ ನಡೆಸಿದ್ದಾಳೆ. ಅಷ್ಟಕ್ಕೂ ಈ ಗ್ಯಾಂಗ್ ನ ಹಾವಳಿಗೆ ಹೆದರಿದ ಜನರಿಗೆ ಬಿಬಿಎಂಪಿ ಭಯ ಇದ್ದಿರುವ ಹಾಗೆ ಕಾಣುತ್ತಿಲ್ಲ. ಬೀದಿ ನಾಯಿಗಳನ್ನ ನಿಯತ್ರಣ ಮಾಡುವಲ್ಲಿ ಪಾಲಿಕೆ ವಿಫಲವಾಗಿದ್ದು ಇದರಲ್ಲಿ ಗೊತ್ತಾಗುತ್ತಿದೆ. ಬೀದಿ ನಾಯಿಗಳ ಹಾವಳಿಯ ಭೀಕರತೆಯನ್ನು ಸಿಸಿಟಿವಿ ದೃಶ್ಯಗಳು ಬಿಚ್ಚಿಟ್ಟಿವೆ.
ಘಟನೆ ಏನು?:ಜಾಲಹಳ್ಳಿ ಏರ್ಫೋಸ್ ಕ್ಯಾಂಪಸ್ ನಲ್ಲಿ ಇಬ್ಬರು ಮಕ್ಕಳು ನಡೆದು ಕೊಂಡು ಹೋಗುತ್ತಿರುತ್ತಾರೆ. ಸೆಪ್ಟೆಂಬರ್ 28 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಬ್ಬ ಹುಡುಗಿಯ ಕಾಲಿಗೆ ಬಾಯಿ ಹಾಕುವ ನಾಯಿ ಆಕೆಯನ್ನ ಎಳೆದೊಯ್ಯುತ್ತದೆ. ಭಯದಿಂದ ಆಕೆಯ ಜೊತೆಗಿದ್ದ ಬಾಲಕ ಓಡಿ ಹೂಗುತ್ತಾನೆ. ಹುಡುಗಿಯನ್ನು ಅಂದಾಜು 10 ಮೀಟರ್ ವರೆಗೂ ನಾಯಿಗಳ ಗುಂಪು ಎಳೆದೊಯ್ಯುತ್ತದೆ.ತಕ್ಷಣ ಸ್ಥಳೀಯ ವ್ಯಕ್ತಿ ಬಂದು ನಾಯಿಗಳ ಓಡಿಸುವ ವಿಡಿಯೋ ಎದೆ ಝಲ್ ಎನಿಸುತ್ತದೆ. ಬೀದಿ ನಾಯಿಗಳಿಂದ ಆಗುವ ಸಮಸ್ಯೆಯನ್ನು ಪಾಲಿಕೆ ಎಷ್ಟು ಕೆಟ್ಟದಾಗಿ ನಿರ್ವಹಿಸುತ್ತಿದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ನಾಯಿಗಳಿಗೆ ಆಹಾರ ನೀಡಲು ಮುಂದಾಗಿರುವ ಬಿಬಿಎಂಪಿ: ಹಸಿದ ಶ್ವಾನಗಳು ರೊಚ್ಚಿಗೆದ್ದು ಮನುಷ್ಯರ ಮೇಲೆ ಅಟ್ಯಾಕ್ ಮಾಡುತ್ತಿವೆ. ಆ ಕಾರಣಕ್ಕಾಗಿ ನಾಯಿಗಳಿಗೆ ಬಿಬಿಎಂಪಿಯಿಂದಲೇ ಆಹಾರ ನೀಡಲು ಚಿಂತನೆ ನಡೆಯುತ್ತಿದೆ. ಆದರೆ, ಬೀದಿ ನಾಯಿಗಳಿಂದ ಆಗುತ್ತಿರುವ ಭೀಕರ ಪರಿಣಾಮ ಬೆಚ್ಚಿ ಬೀಳಿಸುವಂತಿದೆ. ಪಾಲಿಕೆಯ ಅಧಿಕಾರಿಗಳೇ ಇದೇನಾ ನೀವು ಬೀದಿ ನಾಯಿ ಕಡಿವಾಣ ಹಾಕುವ ರೀತಿ? ಇದೇನಾ ನೀವು ಹಸಿದ ನಾಯಿಗಳಿಗೆ ಆಹಾರ ಹಾಕಿದ ಶೈಲಿ?ಎಂದು ಜನರು ಪ್ರಶ್ನೆ ಮಾಡಿದ್ದಾರೆ.
12 ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ: ವೃದ್ಧೆ ಸಾವು
ಆಗಸ್ಟ್ 28 ರಂದು ಇದೇ ಕ್ಯಾಂಪಸ್‌ನಲ್ಲಿ ಮಹಿಳೆಯ ಮೇಲೆ ನಾಯಿಗಳು ದಾಳಿ ಮಾಡಿ ಆಕೆಯನ್ನು ಸಾಯಿಸಿದ್ದವು. ಬಳಿಕ ಇಲ್ಲಿ ಭೇಟಿ ನೀಡಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಯಾವುದೇ ನಾಯಿ ಸಿಕ್ಕಿರಲಿಲ್ಲ. ಜಾಲಹಳ್ಳಿ ಏರ್ ಫೋರ್ಸ್ ಕ್ಯಾಂಪಸ್ ಅಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿದ ನಾಯಿ ಸಿಕ್ಕಿರಲಿಲ್ಲ. ಆ ನಂತರವೂ 100ಕ್ಕೂ ಅಧಿಕ ನಾಯಿ ಹಿಡಿದು ಇದೇ ಜಾಗದಲ್ಲಿ ಬಿಡಲಾಗಿದೆ. ಇದರ ಬೆನ್ನಲ್ಲಿಯೇ ಮತ್ತೆ ಜಾಲಹಳ್ಳಿ ಭಾಗದಲ್ಲಿ ಬೀದಿ ನಾಯಿಗಳ ಢವ ಢವ ಶುರುವಾಗಿದೆ.
ಚಿತ್ರದುರ್ಗದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ, ಬೆಚ್ಚಿಬಿದ್ದ ಜನತೆ..!