Hubballi Dharwad Bypass Road: ನೂರಾರು ಜೀವ ಬಲಿ ಪಡೆದ ಬೈಪಾಸ್‌ಗೆ ಮುಕ್ತಿ

By Kannadaprabha News  |  First Published Feb 27, 2022, 3:39 PM IST

*   ಷಟ್ಪಥ ಕಾಮಗಾರಿಗೆ ಸೋಮವಾರ ಗಡ್ಕರಿ ಚಾಲನೆ
*   ನಾಲ್ಕು ವರ್ಷದಲ್ಲಿ 530 ಕ್ಕೂ ಹೆಚ್ಚು ಅಪಘಾತ, 92ಕ್ಕೂ ಹೆಚ್ಚು ಸಾವು 
*   ಜನವರಿಯೇ ಡೇಂಜರ್ 
 


ಮಯೂರ ಹೆಗಡೆ

ಹುಬ್ಬಳ್ಳಿ(ಫೆ.27): 2021 ರ ಜ. 15ರ ನಸುಕು, ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಭೀಕರ ಅಪಘಾತ(Accident) ನಡೆದು ಹೋಗಿತ್ತು. ನಿದ್ದೆ ಮಂಪರಿನಲ್ಲಿದ್ದ 12 ಮಹಿಳೆಯರು ಸೇರಿ 13 ಜನ ಸ್ಥಳದಲ್ಲೇ ಶವವಾಗಿ ಹೋಗಿದ್ದರು... ಇಂತಹ ನೂರಾರು ಅಪಘಾತ ನೂರಾರು ಜೀವಗಳನ್ನು ಬಲಿ ಪಡೆದ ಹುಬ್ಬಳ್ಳಿ- ಧಾರವಾಡ ಬೈಪಾಸ್‌ಗೆ(Hubballi Dharwad Bypass) ಮುಕ್ತಿ ಸಿಗುವ ಕಾಲ ಇದೀಗ ಸನ್ನಿಹಿತವಾಗಿದೆ. 

Tap to resize

Latest Videos

ಇಲ್ಲಿ ಷಟ್ಪಥ ಕಾಮಗಾರಿಗೆ ಫೆ. 28ರ ಸೋಮವಾರ 1014.79 ಕೋಟಿ ರು. ವೆಚ್ಚದಲ್ಲಿ 30.6 ಕಿಮೀ ಉದ್ದದ ಹುಧಾ ಬೈಪಾಸ್ ಷಟ್ಪಥ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಅವರಿಂದ ಚಾಲನೆ ದೊರೆಯುತ್ತಿದೆ. ಯೋಜನೆಯಂತೆ ಸಾಗಿದರೆ ಎರಡೂವರೆ ವರ್ಷದಲ್ಲಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

Dharwad: 14 ಜೀವಗಳನ್ನ ಬಲಿ ಪಡೆದ ಅಪಘಾತಕ್ಕೆ ಒಂದು ವರ್ಷ: ಕಿಲ್ಲರ್ ರಸ್ತೆಯಿಂದ ಮುಕ್ತಿ ಯಾವಾಗ?

ಹುಬ್ಬಳಿಯ(Hubballi) ಗಬ್ಬೂರು ಎನ್.ಎಚ್. 4 ರಸ್ತೆಯ 402.6 ಕಿ.ಮೀ. ನಿಂದ ಧಾರವಾಡದ(Dharwad) ನರೇಂದ್ರ ಕ್ರಾಸ್ ಬಳಿ 433.2 ಕಿ.ಮೀ. ವರೆಗೆ 6 ಪಥದ ಎಕ್ಸ ಪ್ರೆಸ್ ವೇ ಹಾಗೂ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ 800 ಕೋಟಿ ಹಾಗೂ ಭೂ ಸ್ವಾಧೀನ ಡಿಪಿಆರ್(DPR) ತಯಾರಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ 400 ಕೋಟಿಯನ್ನು ಕೇಂದ್ರ ಸರ್ಕಾರ(Central Government) ನೀಡಿದೆ. 

ಇಪಿಸಿ (ಎಂಜಿನಿಯರಿಂಗ್ ಪ್ರೊಕ್ಯೂರ್‌ಮೆಂಟ್ ಆ್ಯಂಡ್ ಕನ್‌ಸ್ಟ್ರಕ್ಷನ್) ಮಾದರಿಯಲ್ಲಿ ಟೆಂಡರ್(Tender) ಆಗಿದೆ. ಈಗಿರುವ ಬೈಪಾಸ್‌ನ ಎಲ್ಲ ಟೋಲ್ ಪ್ಲಾಜಾ ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹುಬ್ಬಳ್ಳಿ - ಧಾರವಾಡ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ(Passengers) ಟೋಲ್‌ನಿಂದ ವಿನಾಯಿತಿ ನೀಡಲಾಗಿದೆ. ಕೆಲಗೇರಿ ಮತ್ತು ನರೇಂದ್ರ ಕ್ರಾಸ್ ಮಧ್ಯೆ ಟೋಲ್ ಪ್ಲಾಜಾ ನಿರ್ಮಿಸಲು ಉದ್ದೇಶಿಸಲಾಗಿದೆ. ಆರು ಪಥದ ಎಕ್ಸ್‌ಪ್ರೆಸ್ ರಸ್ತೆ ಹಾಗೂ ಸಮರ್ಪಕವಾಗಿ ಎರಡೂ ಬದಿಯಲ್ಲಿ ದ್ವಿಪಥದ ಸರ್ವಿಸ್ ರಸ್ತೆ ನಿರ್ಮಾಣದೊಂದಿಗೆ ನಗರ ಮಧ್ಯದಲ್ಲಿನ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ. 

ಧಾರವಾಡ ಬಳಿ ಭೀಕರ ಆಕ್ಸಿಡೆಂಟ್‌: ಅಪಘಾತ ಕುರಿತು ವರದಿ ಕೇಳಿದ ಸುಪ್ರೀಂಕೋರ್ಟ್

ಸಾವಿಗೆ ರಹದಾರಿ: 

ಬೈಪಾಸ್ ಕಿರಿದಾಗಿದ್ದು, ಅವೈಜ್ಞಾನಿಕ ತಿರುವು ಕಾರಣದಿಂದ ಭೀಕರ ಅಪಘಾತ ಸಾಮಾನ್ಯ ಎಂಬಂತಾಗಿದ್ದವು. ಕೇವಲ 30 ಕಿಮೀ ಅಂತರವನ್ನು ದಾಟಲು ಗಂಟೆಗಟ್ಟಲೆ ಸಮಯ ಹಿಡಿಯುತ್ತಿತ್ತು. 2011ರಲ್ಲಿ ಬೈಪಾಸ್ ನಿರ್ಮಾಣವಾದ ಕೆಲ ದಿನಗಳಲ್ಲೆ ಸಂಭವಿಸಿದ ಅಪಘಾತದಲ್ಲಿ 14 ವರ್ಷದ ಮಂಜುನಾಥ ಎಂಬಾತ ಮೃತಪಟ್ಟಿದ್ದ ಅಲ್ಲಿಂದ ಶುರುವಾರ ಸಾವಿನ ಸರಣಿಯಲ್ಲಿ ನೂರಾರು ಅಮಾಯಕರನ್ನು ಈ ರಸ್ತೆ ಬಲಿ ಪಡೆದಿತ್ತು. 2013ರ ಜೂನ್‌ನಲ್ಲಿ ಬಸ್ ನಿಯಂತ್ರಣ ತಪ್ಪಿದ ಪರಿಣಾಮ ಕಮರಿಗೆ ಬಿದ್ದು ಐವರು ಸ್ಥಳದಲ್ಲಿ ಮೃತಪಟ್ಟರೆ(Death), 28 ಜನ ಗಾಯಗೊಂಡಿದ್ದರು. ಕಳೆದ ನಾಲ್ಕು ವರ್ಷದಲ್ಲಿ 2018 ರಿಂದ ಇಲ್ಲಿಯ ವರೆಗೆ ಈ ರಸ್ತೆಯಲ್ಲಿ 530ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ, 92ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. 550ಕ್ಕೂ ಹೆಚ್ಚಿನವರು ಜನ ಗಾಯಗೊಂಡಿದ್ದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಅವರ ಪ್ರಯತ್ನದಿಂದಾಗಿ ಈ ರಸ್ತೆಯೀಗ ಷಟ್ಪಥವಾಗಿ ಬದಲಾಗುತ್ತಿದೆ. ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಜನಬಳಕೆಗೆ ಮುಕ್ತ ಮುಕ್ತವಾಗಲಿದೆ.

ಜನವರಿಯೇ ಡೇಂಜರ್! 

ಅದರಲ್ಲೂ ಪ್ರತಿ ವರ್ಷ ಜನವರಿ ತಿಂಗಳಲ್ಲೆ ಇಟಗಟ್ಟಿ- ಯರಿಕೊಪ್ಪ ಮಧ್ಯೆ ಅಪಘಾತ ಖಾಯಂ ಎಂಬ ಸ್ಥಿತಿ ಇಲ್ಲಿತ್ತು. 2020ರ ಜ. 26ರ ಅಪಘಾತದಲ್ಲಿ ಕುಂದಗೋಳ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಸೇರಿ ಅವರ ಜೊತೆ ಪ್ರಯಾಣಿಸುತ್ತಿದ್ದವರೂ ಮೃತಪಟ್ಟಿದ್ದರು. 2011 ರ ಜ. 15ರಂದು ನಡೆದ ದುರ್ಘಟನೆಯಲ್ಲಿ 11 ಜನರು ಮೃತಪಟ್ಟಿದ್ದರು. 2021ರ ಜ. 15ರ ಅಪಘಾತದಲ್ಲಿ 13 ಜನ ಮೃತಪಟ್ಟ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು ಇಲ್ಲಿನ ಷಟ್ಪಥ ಕಾಮಗಾರಿಗೆ
 

click me!