ತೆವಲು ತೀರಿಸಿಕೊಳ್ಳಲು ಹೇಳಿಕೆ ಕೊಟ್ಟರೆ ನಾನು ಉತ್ತರ ಕೊಡಬೇಕಾ?: ಬಾಲಕೃಷ್ಣ ವಿರುದ್ಧ ಹರಿಹಾಯ್ದ ಎಚ್‌ಡಿಕೆ

By Girish Goudar  |  First Published Oct 13, 2024, 1:22 PM IST

ಸರ್ಕಾರ ಜಾಹೀರಾತಿಗಾಗಿ 17 ಕೋಟಿ ಹಣ ವ್ಯಯ ಮಾಡಿದೆ. ಅದ್ರಲ್ಲಿ ಒಂದು ಪಂಚಾಯತಿಯಲ್ಲಿ ಮಾಡೆಲ್ ಮಾಡಬಹುದಿತ್ತು. ಜಾಹೀರಾತು ಹೆಸರಲ್ಲಿ ರಾಜ್ಯದ ತೆರಿಗೆ ಹಣ ಲೂಟಿ ಹೊಡೆಯಲಾಗುತ್ತಿದೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ 


ದಾವಣಗೆರೆ(ಅ.13):  ಹುಬ್ಬಳ್ಳಿಯಲ್ಲಿ ನಡೆದ ಹಿಂದಿನ ಹಲವು ಪ್ರಕರಣಗಳಲ್ಲಿನ ಕೇಸ್‌ಗಳನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಕೇಸ್‌ಗಳನ್ನು ವಾಪಾಸ್ ಪಡೆಯಬೇಕಾದ್ರೆ ಡೆಪ್ತ್ ಏನಿದೆ ಅಂತಾ ನೋಡಬೇಕು. ಇದ್ರಿಂದ ಗಲಾಭೆಕೋರರು ಬಚಾವ್ ಆಗಬಹುದು. ಗಲಭೆಕೋರರಿಗೆ ಸರ್ಕಾರದ ಕಡೆಯಿಂದಲೇ ರಕ್ಷಣೆ ನೀಡಲಾಗುತ್ತಿದೆ . ದ್ವೇಷದ ರಾಜಕಾರಣ ಒಂದು ಕಡೆ, ಸಮಾಜ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ಕಾಂಗ್ರೆಸ್‌ಗೆ ಇಷ್ಟ ಇಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. 

ಸರ್ಕಾರ ಜಾಹೀರಾತು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಸರ್ಕಾರ ಜಾಹೀರಾತಿಗಾಗಿ 17 ಕೋಟಿ ಹಣ ವ್ಯಯ ಮಾಡಿದೆ. ಅದ್ರಲ್ಲಿ ಒಂದು ಪಂಚಾಯತಿಯಲ್ಲಿ ಮಾಡೆಲ್ ಮಾಡಬಹುದಿತ್ತು. ಜಾಹೀರಾತು ಹೆಸರಲ್ಲಿ ರಾಜ್ಯದ ತೆರಿಗೆ ಹಣ ಲೂಟಿ ಹೊಡೆಯಲಾಗುತ್ತಿದೆ ಎಂದು ಹೇಳಿದ್ದಾರೆ. 

Tap to resize

Latest Videos

undefined

ನೀವು ಮತಾಂಧ ಇಸ್ಲಾಂ ಭಯೋತ್ಪಾದಕರಿಗೆ ಬೆಂಬಲಿಗರಾಗ್ತೀರಿ: ಸಿದ್ದು ವಿರುದ್ಧ ಪ್ರಲ್ಹಾದ ಜೋಶಿ ಗರಂ

ತಮ್ಮ ವಿರುದ್ಧದ ಪ್ರಕರಣ ಕುರಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನ್ಯಾಯಾಲದಲ್ಲಿ ಫೈಟ್ ಮಾಡೋಣ ಚರ್ಚೆ ಬೇಡ. ದೂರು ಕೊಟ್ಟಿದ್ದಾರೆ ಅದ್ರ ಹಿಂದೆ ಯಾರಿದ್ದಾರೆ ಗೊತ್ತಿದೆ. ನನ್ನ ಕೇಸ್ 2012 ರಿಂದ ಎಸ್ ಐ ಟಿ ಯಲ್ಲಿ ನಡೆಯುತ್ತಿದೆ. ಹತ್ತು ವರ್ಷ ಆದ್ರೂ ಅದನ್ನ ಯಾಕೆ ಇನ್ನೂ ಜೀವಂತವಾಗಿ ಇಟ್ಟುಕೊಂಡಿದ್ದೀರಿ . ತನಿಖೆ ನಡೆಯುತ್ತಿದೆ ಕೊರ್ಟ್ ನಲ್ಲಿ ಉತ್ತರ ನೀಡೋಣ. ನಾನು ಸಂವಿಧಾನ ಬದ್ದ ರಾಜ್ಯಪಾಲರ ವಿಷಯಕ್ಕೆ ಸಂಭಂಧಿಸಿದಂತೆ ಮಾತಾಡಿದ್ದೆ, ನನ್ನ ಮೇಲೆ ಕೇಸ್ ಹಾಕಿದ್ದಾರೆ ಕೋರ್ಟ್ ನಲ್ಲಿ ಉತ್ತರ ಕೊಡುವೆ ಎಂದು ತಿಳಿಸಿದ್ದಾರೆ. 

ಶಾಸಕ ಬಾಲಕೃಷ್ಣ ಹೇಳುವ ವಿಚಾರಕ್ಕೆ ನಾನು ಉತ್ತರ ಕೊಡಬೇಕಾ?. ನಾನು ಸಿಎಂ‌ ಆಗಿದ್ದಾಗ ವೆಸ್ಟೆಂಡ್ ಹೋಟೆಲ್‌ನಲ್ಲಿ ಇದ್ದಿದ್ದು ನಿಜ. ಇದೇ ಬಾಲಕೃಷ್ಣ ಬಗ್ಗೆ ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ವಿಧಾನ ಸಭೆಯಲ್ಲಿ ಆರೋಪ ಮಾಡಿದ್ದರು. ಆರು ನೂರು ಕೋಟಿ ಹಣ ಕಾಮಗಾರಿ ಮಾಡದೇ ಬಿಲ್ ಮಾಡಿಕೊಂಡಿದ್ದಾರೆ ಅಂತ. ಸಿದ್ದರಾಮಯ್ಯ, ಮಹದೇವಪ್ಪ ಚರ್ಚೆ ಮಾಡಿ ಸದನ ಸಮತಿ ರಚಿಸಿದ್ದರು. ಅಂತವರನ್ನೇ ಸಿಎಂ ಜೊತೆಗಿಟ್ಟು ಕೊಂಡಿದ್ದಾರೆ. ನಾನು ಪಡೆದ ಬಗ್ಗೆ ಸಾಕ್ಷಿಗಳಿದ್ದರೇ ಕೇಸ್ ಮಾಡಲಿ. ಅವರು ನಾನು ಸಿಎಂ ಆಗಿದ್ದಾಗ ನನ್ನ ಜೊತೆಗೆ ‌ಇದ್ದರು. ನನಗೆ ಚೂರಿ ಹಾಕಿ ಬಿಟ್ಟು ಹೋಗಿದ್ದರು. ತೆವಲು ತೀರಿಸಿಕೊಳ್ಳಲು ಹೇಳಿಕೆ ಕೊಟ್ಟರೆ ನಾನು ಉತ್ತರ ಕೊಡಬೇಕಾ?.ಇಂತವರ ಬಗ್ಗೆ ನಾನು ಉತ್ತರ ಕೊಡಬೇಕಾ? ಎಂದ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.  

click me!