ಕಲಬುರಗಿ: ದಕ್ಷ ಅಧಿಕಾರಿಗಳಿಗೆ ಬಿಜೆಪಿ ಮುಖಂಡ ಮಣಿಕಂಠ ಕಿರುಕುಳ

Published : Oct 13, 2024, 01:03 PM IST
ಕಲಬುರಗಿ: ದಕ್ಷ ಅಧಿಕಾರಿಗಳಿಗೆ ಬಿಜೆಪಿ ಮುಖಂಡ ಮಣಿಕಂಠ ಕಿರುಕುಳ

ಸಾರಾಂಶ

ಶಹಾಬಾದ ಸಿಪಿಐ ನಟರಾಜ ಲಾಡೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಅವರ ವೃತ್ತಿಯಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲ. ಆದರೆ ಮಣಿಕಂಠ ರಾಠೋಡ ಸುಳ್ಳು ಆರೋಪ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ: ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ 

ಚಿತ್ತಾಪುರ(ಅ.13):  ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ವಿಧಾನಸಭೆ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಕಿರುಕುಳ ಹಾಗೂ ಬ್ಲಾಕ್‌ಮೇಲ್ ಕೆಲಸ ಮಾಡುತ್ತಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಹೇಳಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಬಾದ ಸಿಪಿಐ ನಟರಾಜ ಲಾಡೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಅವರ ವೃತ್ತಿಯಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲ. ಆದರೆ ಮಣಿಕಂಠ ರಾಠೋಡ ಸುಳ್ಳು ಆರೋಪ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಮಣಿಕಂಠ ಒಬ್ಬ ರೌಡಿಶೀಟರ್‌ ಆಗಿದ್ದು, ಗಡಿಪಾರಾದ ಈತ ಗುಂಡಾಗಳ ಪಡೆಕಟ್ಟಿಕೊಂಡು ಅಶಾಂತಿ ವಾತಾವರಣ ಮೂಡಿಸುತ್ತಿದ್ದಾರೆ. ಚಿತ್ತಾಪುರ ತಾಲೂಕು ಯಾವತ್ತು ಶಾಂತಿ ತಾಲೂಕಾಗಿದ್ದು, ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಹಿಂದೆ ಪೋಲಿಸ್ ಕಮಿಷನರ್ ಸೇರಿದಂತೆ ಅನೇಕ ಪೋಲಿಸ್‌ರ ವಿರುದ್ಧವೂ ಸುಳ್ಳು ಆರೋಪ ಮಾಡಿದ ಉದಾಹರಣೆಗಳಿವೆ. ಆದ್ದರಿಂದ ದಕ್ಷ ಅಧಿಕಾರಿ ಸಿಪಿಐ ನಟರಾಜ ಲಾಡೆ ವಿರುದ್ಧ ಸುಳ್ಳು ಆರೋಪ ಮಾಡಿದ್ದು ಜನರು ನಂಬುವುದಿಲ್ಲ. ಸುಳ್ಳು ಆರೋಪ ಮಾಡಿರುವ ಮಣಿಕಂಠ ರಾಠೋಡ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಹರಿಯಾಣ ಸೋಲು ತೀವ್ರ ಬೇಸರ: ಮಲ್ಲಿಕಾರ್ಜುನ ಖರ್ಗೆ

ಪ್ರಮುಖರಾದ ಮಿಲಿಂದ ಸನಗುಂದಿ, ರಮೇಶ ಚಿಮ್ಮಾಇದಲಾಯಿ, ಕಲ್ಯಾಣರಾವ ಡೊಣ್ಣೂರ, ಬಸವರಾಜ ಹಾಳಕಾಯಿ ಸೇರಿದಂತೆ ಇತರರಿದ್ದರು.

PREV
Read more Articles on
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು