ಗುಟ್ಕಾ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಮರಿ ಪತ್ತೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗುಟ್ಕಾ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಯಶವಂತಪುರದಲ್ಲಿ ಗ್ರಾಹಕರೊಬ್ಬರು ಖರೀದಿಸಿದ ವಿಮಲ್ ಗುಟ್ಕಾದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು (ಅ.13): ಗುಟ್ಕಾ ತಿನ್ನುವುದೇ ಆರೋಗ್ಯಕ್ಕೆ ಹಾನಿಕರ. ಇಂಥದ್ದರಲ್ಲಿ ಈ ಹಾನಿಕರ ಪದಾರ್ಥದಲ್ಲಿಯೇ ಸತ್ತ ಕಪ್ಪೆ ಮರಿ ಸಿಕ್ಕಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಗುಟ್ಕಾ ಪ್ರಿಯರಲ್ಲಿ ಆತಂಕ ಶುರುವಾಗಿದೆ. ನೀವು ತಿನ್ನೋ ಗುಟಕಾ ಎಷ್ಟರ ಮಟ್ಟಿಗೆ ಸೇಪ್ಟೀ ಇದೆ ಅಂತ ಒಮ್ಮೆ ಚೆಕ್ ಮಾಡಿಕೊಳ್ಳುವುದು ಅಗತ್ಯ. ಕಣಕಣದಲ್ಲೂ ಕೇಸರಿ ಅನ್ನೋ ಗುಟ್ಕಾ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಸಿಕ್ಕಿದೆ. ವಿಮಲ್ ಪಾಕೆಟ್ ಓಪನ್ ಮಾಡ್ತಿದ್ದಂತೆ ಗ್ರಾಹಕ ಅಚ್ಚರಿಪಟ್ಟಿದ್ದಾನೆ. ಯಶವಂತಪುರದ ಜೆಪಿ ಪಾಕ್೯ ವಾಡ್೯ ನಲ್ಲಿರುವ ಮಂಜುನಾಥ ಕಾಂಡಿಮೆಂಟ್ಸ್‌ನಲ್ಲಿ ಗ್ರಾಹಕ ವಿಮಲ್ ಗುಟ್ಕಾ ಖರೀದಿ ಮಾಡಿದ್ದಾನೆ. ಅಲ್ಲಿಯೇ ಅದನ್ನು ಒಡೆದು ಬಾಯಿಗೆ ಹಾಕಿಕೊಳ್ಳುವ ವೇಳೆ ಸತ್ತ ಕಪ್ಪೆ ಇರುವುದು ಗೊತ್ತಾಗಿದೆ. ವಿಮಲ್ ಪಾಕೆಟ್ ಒಳಗೆ ಇದ್ದ ಕಪ್ಪೆ ನೋಡಿ ಗ್ರಾಹಕ ದಂಗಾಗಿದ್ದಾನೆ.
ಗೃಹಲಕ್ಷ್ಮೀ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಟ್ಟಿಸಿದ ತಾಯಿ!
ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಪ್ರಕಟವಾದ ಬೆನ್ನಲ್ಲಿಯೇ, ಗುಟ್ಕಾಕ್ಕಿಂತ ಕಪ್ಪೆಯೇ ಪರವಾಗಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಕುರಿ, ಕೋಳಿಯನ್ನೇ ಆರಾಮವಾಗಿ ತಿನ್ನುವ ವ್ಯಕ್ತಿಗಳಿಗೆ ಕಪ್ಪೆ ದೊಡ್ಡ ವಿಚಾರವಲ್ಲ ಎಂದು ಬರೆದಿದ್ದಾರೆ.
Bengaluru: ನಗರದಲ್ಲಿ ನಿಲ್ಲದ ಬೀದಿ ನಾಯಿ ದಾಳಿ, ಬಾಲಕಿಯನ್ನು 10 ಮೀಟರ್ ಎಳೆದೊಯ್ದ ಡಾಗ್ ಸ್ಕ್ವಾಡ್!