ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಸ್ಥಳವಾದ ನಂದಿ ಬೆಟ್ಟಕ್ಕೆ ಸಾರ್ವಜನಿಕರ ನಿಷೇಧ ಹೇರಲಾಗಿದೆ. . 2023ರ ಜನವರಿ 01 ರಂದು ಹೊಸ ದಿನಾಚರಣೆಯ ಸಂಬಂಧವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಚಿಕ್ಕಬಳ್ಳಾಪುರ (ಡಿ.30): ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಸಾರ್ವಜನಿಕರ ನಿಷೇಧ ಹೇರಲಾಗಿದೆ. 2023ರ ಜನವರಿ 01 ರಂದು ಹೊಸ ದಿನಾಚರಣೆಯ ಸಂಬಂಧವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಸ್ಥಳವಾದ ನಂದಿ ಗಿರಿಧಾಮದ ಪರಿಸರವನ್ನು, ಪಾವಿತ್ರತೆಯನ್ನು ಕಾಪಾಡುವ ಮತ್ತು ಸಾರ್ವಜನಿಕರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡದಂತೆ ತಡೆಗಟ್ಟುವ ಮುಂಜಾಗ್ರತಾ ಕ್ರಮಕ್ಕಾಗಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಪ್ರವಾಸಿಗರು ಆ ದಿನ ನಂದಿ ಗಿರಿಧಾಮಕ್ಕೆ ಬಂದು ಗುಂಪು-ಗುಂಪಾಗಿ ತಿರುಗಾಡುವುದು, ಮದ್ಯಪಾನ ಮಾಡುವುದು, ಪ್ಲಾಸ್ಟಿಕ್ ಬಾಟಲ್ ಗಳನ್ನು ಎಸೆಯುವುದರಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಇದನ್ನು ತಡೆಗಟ್ಟುವ ಸಲುವಾಗಿ ನಂದಿ ಗಿರಿಧಾಮದಲ್ಲಿ 2022ರ ಡಿಸೆಂಬರ್ 31 ರ ಸಂಜೆ 6:00 ಗಂಟೆಯಿಂದ 2023ರ ಜನವರಿ 01 ರ ಬೆಳಿಗ್ಗೆ 6:00 ಗಂಟೆಯವರೆಗೆ ಸಾರ್ವಜನಿಕ ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಡರಾತ್ರಿವರೆಗೂ ಮೆಟ್ರೋ ಸಂಚಾರ: ಹೊಸ ವರ್ಷಾಚರಣೆ ಪ್ರಯುಕ್ತ ಜನವರಿ 1ರಂದು ಬೆಂಗಳೂರು ಮೆಟ್ರೋ ತನ್ನ ಸಂಚಾರ ಅವಧಿಯನ್ನು ತಡ ರಾತ್ರಿ 2ರ ವರೆಗೆ ವಿಸ್ತರಿಸಿದೆ.
ಪ್ರತಿ ನಿತ್ಯ ದಿನದ ಕೊನೆಯ ಮೆಟ್ರೋ ತನ್ನ ಆರಂಭದ ನಿಲ್ದಾಣದಿಂದ ರಾತ್ರಿ 11ಕ್ಕೆ ಹೊರಟರೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ಜನವರಿ 1ರಂದು ತಡರಾತ್ರಿಯೂ ಮೆಟ್ರೋ ಸಂಚರಿಸಲಿದೆ.
ರಾತ್ರಿ 11ರ ಬಳಿಕ ಪ್ರತಿ ಹದಿನೈದು ನಿಮಿಷಕ್ಕೆ ಒಂದರಂತೆ ಕೆಂಗೇರಿ-ಬೈಯ್ಯಪ್ಪನಹಳ್ಳಿ (ನೇರಳೆ ಮಾರ್ಗ) ಮತ್ತು ಸಿಲ್‌್ಕ ಸಂಸ್ಥೆ - ನಾಗಸಂದ್ರ (ಹಸಿರು ಮಾರ್ಗ)ದಲ್ಲಿ ಮೆಟ್ರೋ ಸಂಚರಿಸಲಿದೆ.
ಬೈಯ್ಯಪ್ಪನಹಳ್ಳಿಯಿಂದ ತಡರಾತ್ರಿ 1.35ಕ್ಕೆ, ಕೆಂಗೇರಿಯಿಂದ ತಡ ರಾತ್ರಿ 1.25ಕ್ಕೆ, ನಾಗಸಂದ್ರದಿಂದ ತಡರಾತ್ರಿ 1.30ಕ್ಕೆ ಮತ್ತು ರೇಷ್ಮೆ ಸಂಸ್ಥೆಯಿಂದ ತಡರಾತ್ರಿ 1.25ಕ್ಕೆ ಅಂದಿನ ಕೊನೆಯ ಮೆಟ್ರೋ ಹೊರಡಲಿದೆ. ತಡರಾತ್ರಿ 2ಕ್ಕೆ ಮೆಜೆಸ್ಟಿಕ್‌ನಿಂದ ದಿನದ ಕೊನೆಯ ರೈಲುಗಳು ನಾಲ್ಕೂ ದಿಕ್ಕಿಗೂ ಹೊರಡಲಿದೆ ಎಂದು ಮೆಟ್ರೋ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು: ಬ್ರಿಗೇಡ್, ಎಂ.ಜಿ ರಸ್ತೆ ವರ್ಷಾಚರಣೆಗೆ ಡ್ರೋನ್ ಕಣ್ಗಾವಲು..!
50 ಟಿಕೆಟ್ ದರ: ವಿಸ್ತರಿಸಿದ ಅವಧಿಯಲ್ಲಿ ಅಂದರೆ ರಾತ್ರಿ 11.30ರ ನಂತರ ಮಹಾತ್ಮ ಗಾಂಧಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಇತರ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ 50 ರೂ ಟಿಕೆಟ್‌ಗಳನ್ನು ವಿತರಿಸಲಾಗುತ್ತದೆ. ಈ ಅವಧಿಯಲ್ಲಿ ಈ ನಿಲ್ದಾಣಗಳಲ್ಲಿ ಟೋಕನ್ ವಿತರಣೆ ಇರುವುದಿಲ್ಲ ಎಂದು ಮೆಟ್ರೋ ನಿಗಮ ತಿಳಿಸಿದೆ.
ಹೊಸ ವರ್ಷಾಚರಣೆ ಹಿನ್ನೆಲೆ, ಜ.1ರ ಮುಂಜಾವು 2 ಗಂಟೆವರೆಗೆ ಬಿಎಂಟಿಸಿ ಬಸ್ ಸೇವೆ
ವಿಸ್ತರಿಸಿದ ಅವಧಿಯಲ್ಲಿ ಮಹಾತ್ಮ ಗಾಂಧಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಮಾತ್ರ ಪ್ರಯಾಣಿಸಲು ಅನುಕೂಲವಾಗುವಂತೆ ಕಾಗದ ಟಿಕೆಟ್‌ಗಳನ್ನು ಡಿ.31ರ ರಾತ್ರಿ 8ರಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮುಂಚಿತವಾಗಿ ಖರೀದಿಗೆ ಲಭ್ಯ ಇರುತ್ತದೆ. ಸ್ಮಾರ್ಚ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಹೊಂದಿರುವವರು ವಿಸ್ತರಿಸಿದ ಅವಧಿಯಲ್ಲಿಯೂ ಎಂದಿನ ರಿಯಾಯಿತಿ ದರದಲ್ಲಿಯೇ ಪ್ರಯಾಣಿಸಬಹುದು.