ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಕೇಂದ್ರ ಸಚಿವ ಭಗವಂತ ಖೂಬಾ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ವರದಿ: ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್
ಬೀದರ್ (ಫೆ.22): ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಕೇಂದ್ರ ಸಚಿವ ಭಗವಂತ ಖೂಬಾ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಹುಮನಾಬಾದ್ ಪಟ್ಟಣದಲ್ಲಿ ನಡೆದ ಕಲಬುರಗಿ- ಬೀದರ್ ಲೋಕಸಭೆ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಷಣ ಮಾಡಿದ ಖೂಬಾ ಅಂಧೆ ಔರ್ ಬಹೆರೆ ಈಶ್ವರ್ ಖಂಡ್ರೆ ಅವರೆ(ಕುರುಡ ಮತ್ತು ಕುವುಡಾ ಈಶ್ವರ್ ಖಂಡ್ರೆ ಅವರೆ) ನನ್ನ 10 ವರ್ಷದ ಅಧಿಕಾರ ಅವದಿಯ ಯೋಜನೆಗಳ ಬಗ್ಗೆ 5 ಗಂಟೆ ಮಾತಾಡಬಹದು, ಸಂಸದರಾದ ಮೇಲೆ 13 ರೈಲುಗಳನ್ನ ನಾನು ಬೀದರ್ ನಿಂದ ಆರಂಭಿಸಿದ್ದೆನೆ, ಸಿಪೆಟ್ ಕಾಲೇಜ್, ಪವರ್ ಸ್ಟೆಷನ್ ಸೇರಿದಂತೆ ಹತ್ತು ಹಲವಾರು ಯೋಜನೆ ತಂದಿದ್ದೆವೆ ಎಂದು ವಾಗ್ದಾಳಿ ನಡೆಸಿ ಸಭೆಯಲ್ಲಿ ಸೇರಿದ ಕಾರ್ಯಕರ್ತರಿಗೆ ಚಪ್ಪಾಳೆ ತಟ್ಟಿದರೆ ಈಶ್ವರ್ ಖಂಡ್ರೆ ಕಿವಿ ತೆರೆಯಬೇಕೆಂದು ಹೇಳಿದರು.
Hassan ಕಾಲೇಜು ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ, ವಾರ್ಡನ್ ಕಾರಣವೆಂದು ಪೋಷಕರ ದಾಂಧಲೆ
ಎರಡು ದಿನಗಳ ಹಿಂದೆ ನಡೆದ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ ಎಂದು ಖಂಡ್ರೆ ವಾಗ್ದಾಳಿ ನಡೆಸಿದರು ಇದಕ್ಕೆ ತೀರುಗೇಟು ನೀಡುತ್ತಾ ಮಾತನಾಡಿದ ಖೂಬಾ ಈಶ್ವರ್ ಖಂಡ್ರೆ ಅವರೆ ಯಾವ ನಶೆಯಲ್ಲಿ ಇದ್ದಿರಿ, ನಿಮ್ಮ ಕ್ಷೇತ್ರದಲ್ಲಿ ಒಂದು ಕ್ರೀಡಾಂಗಣ ನಿರ್ಮಾಣ ಮಾಡಲು ಆಗಿಲ್ಲ ನಿಮ್ಮ ಯೋಗ್ಯತೆಗೆ ಬೀದರ್ ನಿಂದ ಭಾಲ್ಕಿ ಕ್ಷೇತ್ರಕ್ಕೆ ಹೋಗುವ ರಸ್ತೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಆಗಿದೆ, ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು, ಅನೇಕ ಹೋರಾಟದ ಫಲವಾಗಿ 371(ಜೆ) ಜಾರಿ ಯಾಗಿತ್ತು.
ಮಂಡ್ಯ ಹಾಸನ ಕೋಲಾರ ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ಗ್ರೀನ್‌ಸಿಗ್ನಲ್, ಸುಮಲತಾ ನಡೆಯೇನು?
ಬಿಎಸ್ವೈ, ಎಲ್.ಕೆ.ಅಡ್ವಾನಿ, ರಾಜ್ಯ ಸಂಸದರ ಪರಿಶ್ರಮ ಫಲವಾಗಿ 371(ಜೆ) ಜಾರಿಯಾಗಿದೆ. ರಾಜಕೀಯ ಬೆಳೆ ಬೇಯಿಸಿಕೊಳ್ಳಲು 371(ಜೆ) ಕ್ರೆಡಿಟ್ ಕಾಂಗ್ರೆಸ್ ತೆಗೆದುಕೊಳ್ಳಲು ಹೊರಟ್ಟಿದೆ, ಬೀದರ್ ನಲ್ಲಿ ನಡೆದ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭ ವಿಫಲವಾಗಿದೆ,. ಖುದ್ದು ಮಲ್ಲಿಕಾರ್ಜುನ ಖರ್ಗೆ ಅವರೆ ಭಾಷಣದ ವೇಳೆ 16 ಸಂಘಟನೆ, 6 ಮತ ಕ್ಷೇತ್ರದ ಕಾಂಗ್ರೆಸ್ ನಾಯಕರಿಂದ ಬಂದ ಜನರು ಇಷ್ಟೆನಾ ಎಂದು ಅಸಮಾಧಾನ ಹೊರ ಹಾಕಿದರು, ಅಭಿನಂದನಾ ಸಮಾರಂಭದ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲಿಸಿ ನನಗೆ ಅಭಿನಂದನೆ ಸಲ್ಲಿಸಬೇಕೆಂದು ಹೇಳಿದಾರೆ ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದರು.