ಸಿಕ್ಕ ಬೆಳ್ಳಿ ವಸ್ತು ಬ್ಯಾಗ್ ಹಿಂತಿರುಗಿಸಿದ ವ್ಯಕ್ತಿ

By Kannadaprabha News  |  First Published Feb 22, 2024, 10:49 AM IST

ಜೀವನಕ್ಕಾಗಿ ಟ್ಯಾಂಕ್ ಕ್ಲೀನಿಂಗ್ ವೃತ್ತಿಯಲ್ಲಿ ನಿರತರಾಗಿರುವ ವ್ಯಕ್ತಿಯೊಬ್ಬರಿಗೆ ತಮ್ಮ ಕೆಲಸದ ವೇಳೆ ಟ್ಯಾಂಕ್‌ನಲ್ಲಿ ದೊರೆತೆ ವಾರಸುದಾರರಿಲ್ಲದ ಬೆಳ್ಳಿಯ ವಸ್ತುಗಳಿರುವ ಬ್ಯಾಗ್‌ವೊಂದು ದೊರೆತ್ತಿದ್ದು, ಇದರ ನಿಜವಾದ ವಾರಸುದಾರರಿಗೆ ತಲುಪಿಸುವಂತೆ ಹರ್ಷಿತ್ ಟ್ಯಾಂಕ್ ಕ್ಲೀನಿಂಗ್‌ನ ಮಾಲೀಕ ಹನುಮಂತರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಿಸಿದ್ದಾರೆ.


 ತುಮಕೂರು :  ಜೀವನಕ್ಕಾಗಿ ಟ್ಯಾಂಕ್ ಕ್ಲೀನಿಂಗ್ ವೃತ್ತಿಯಲ್ಲಿ ನಿರತರಾಗಿರುವ ವ್ಯಕ್ತಿಯೊಬ್ಬರಿಗೆ ತಮ್ಮ ಕೆಲಸದ ವೇಳೆ ಟ್ಯಾಂಕ್‌ನಲ್ಲಿ ದೊರೆತೆ ವಾರಸುದಾರರಿಲ್ಲದ ಬೆಳ್ಳಿಯ ವಸ್ತುಗಳಿರುವ ಬ್ಯಾಗ್‌ವೊಂದು ದೊರೆತ್ತಿದ್ದು, ಇದರ ನಿಜವಾದ ವಾರಸುದಾರರಿಗೆ ತಲುಪಿಸುವಂತೆ ಹರ್ಷಿತ್ ಟ್ಯಾಂಕ್ ಕ್ಲೀನಿಂಗ್‌ನ ಮಾಲೀಕ ಹನುಮಂತರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಿಸಿದ್ದಾರೆ.

ಬಟವಾಡಿಯ ಬಡಾವಣೆಯ 14 ನೇ ಕ್ರಾಸ್‌ನ ಮನೆಯೊಂದರಲ್ಲಿ ವಾಸವಿರುವ ಹನುಮಂತರಾಜು ಎಂಬುವವರು ಜೀವನಕ್ಕಾಗಿ ಟ್ಯಾಂಕ್ ಕ್ಲಿನಿಂಗ್ ಮತ್ತು ಸೋಲಾರ್ ಸರ್ವಿಸ್ ವೃತ್ತಿಯಲ್ಲಿ ತೊಡಗಿದ್ದು, ಅಸ್ಸಾಂ ಮೂಲದ ನಾಲ್ವರು ಮತ್ತು ಸಂಬಂಧಿಕನಾದ ಮನು ಹಾಗೂ ಸ್ಥಳೀಯರಾದ ಶಶಿಕುಮಾರ್‌ ಎಂಬ ಆರು ಜನ ಗಾರರನ್ನು ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿದ್ದರು.

Latest Videos

undefined

2024ರ ಫೆಬ್ರವರಿ 19 ರಂದು ಸಂಜೆ 5.30ರ ಸುಮಾರಿಗೆ ಹರ್ಷಿತ ಟ್ಯಾಂಕ್ ಕ್ಲಿನಿಂಗ್‌ನ ಮಾಲೀಕರಾದ ಹನುಮಂತರಾಜು ಅವರ ಬಳಿ ಕೆಲಸ ಮಾಡುವ, ಅವರ ಅಣ್ಣನ ಮಗನಾದ ಮನು ಎಂಬುವವರಿಗೆ ದೂ.ಸಂಖ್ಯೆ ೯೯೦೧೨೩೩೦೨೨ ಕರೆ ಮಾಡಿ, ಮಂಜುನಾಥ ನಗರದ ಮನೆಯೊಂದಕ್ಕೆ ನಾವುಗಳು ಬಾಡಿಗೆಗೆ ಬರಬೇಕೆಂದು ಕೊಂಡಿದ್ದೇವೆ. ಆ ಮನೆಯ ಟ್ಯಾಂಕ್ ಮತ್ತು ಸಂಪ್ ಕ್ಲೀನ್ ಮಾಡುವಂತೆ ತಿಳಿಸಿದ್ದಾರೆ.

ಟ್ಯಾಂಕ್ ಕ್ಲೀನ್ ಕೆಲಸ ಸಿಕ್ಕಿದ್ದರಿಂದ ಕೆಲಸ ಮಾಡುತ್ತಿದ್ದ ಹುಡುಗರನ್ನು ಕರೆದುಕೊಂಡು ಹೋಗಿ ಟ್ಯಾಂಕ್‌ಗೆ ಇಳಿದು ಮೂರು ಜನರು, ಸಂಪ್ ಕ್ಲೀನ್ ಮಾಡಲು ಮೂರು ಜನರು ಇಳಿದು ಕೆಲಸ ಮಾಡುವ ವೇಳೆ ಸಿಂಟೆಕ್ ಟ್ಯಾಂಕ್‌ನಲ್ಲಿ ಬ್ಯಾಗ್‌ವೊಂದು ದೊರೆತ್ತಿದ್ದು, ಕ್ಲಿನಿಂಗ್ ಕೆಲಸ ಮುಗಿದ ನಂತರ ಸುಮಾರು ೮ ಗಂಟೆಗೆ ಕೆಲಸ ಹುಡುಗರು, ಸಿಕ್ಕಿದ ಬ್ಯಾಗ್‌ನ್ನು ಮಾಲೀಕರಾದ ಹುಮಂತರಾಜು ಅವರಿಗೆ ತಲುಪಿಸಿದ್ದಾರೆ.

ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಸುಮಾರು ವಿವಿದ ರೀತಿಯ 26 ಬೆಳ್ಳಿಯ ಸಾಮಾನುಗಳಿದ್ದು, 160 ರು. ನಗದು ಸಹ ಇದೆ. ಬ್ಯಾಗಿನಲ್ಲಿ ಯಾವುದೇ ವಿಳಾಸವಾಗಲಿ, ದೂರವಾಣಿ ಸಂಖ್ಯೆಯಾಗಲಿ ಲಭ್ಯವಿಲ್ಲದ ಕಾರಣ, ಅಲ್ಲದೆ ಅದೇ ಮನೆಯಲ್ಲಿ ಈ ಹಿಂದೆ ವಾಸವಿದ್ದ ಕುಟುಂಬಕ್ಕೆ ಸಂಬಂಧಿಸಿದ ವಿಳಾಸವಿಲ್ಲದ ಕಾರಣ, ಈ ಬೆಳ್ಳಿಯ ವಸ್ತುಗಳ ನಿಜ ವಾರಸುದಾರರನ್ನು ಪತ್ತೆ ಹೆಚ್ಚಿ ಅವರಿಗೆ ತಲುಪಿಸುವಂತೆ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಿಸಿದ್ದಾರೆ.

ಹನುಮಂತರಾಜು ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

click me!